ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಸಂಗ್ರಹಯೋಗ್ಯ ತೋರಣ

ಶ್ರೀ ವತ್ಸ ಜೋಶಿ ಅವರ ‘ತಿಳಿರು ತೋರಣ’ ಅಂಕಣ ಸಂಗ್ರಹಯೋಗ್ಯ. ಒಂದೇ ಅಂಕಣದಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದ, ಬೇರೆ ಬೇರೆ ತರಹದ ಕಷ್ಟಗಳನ್ನು ಎದುರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ವಿಭಿನ್ನ ವ್ಯಕ್ತಿತ್ವ ಹೊಂದಿದ್ದ 9 ಸಾಧಕರ ಸಂಕ್ಷಿಪ್ತ ಆಟೋಬಯೋಗ್ರಾಫಿ ನೀಡಿದ್ದಾರೆ. ಕೊನೆಯಲ್ಲಿ ಚಹ ಮಾರುತಿದ್ದ ಹುಡುಗ ನಮ್ಮ ದೇಶದ ಪ್ರಧಾನಿ ಆದ ಸಾಧನೆ ಬಗ್ಗೆಯೂ ಕೂಡ ಹೆಮ್ಮೆಯಿಂದ ಬರೆದಿದ್ದಾರೆ. ಒಳ್ಳೆಯ ಅಂಕಣ ಬರಹ. ಲೇಖಕರಿಗೆ ಮತ್ತು ಪತ್ರಿಕೆಗೂ ಧನ್ಯವಾದಗಳು.

Readers Colony: ಸಂಗ್ರಹಯೋಗ್ಯ ತೋರಣ

-

Profile
Ashok Nayak Sep 7, 2026 2:04 PM

ಓದುಗರ ಓಣಿ

ಶ್ರೀ ವತ್ಸ ಜೋಶಿ ಅವರ ‘ತಿಳಿರು ತೋರಣ’ ಅಂಕಣ ಸಂಗ್ರಹಯೋಗ್ಯ. ಒಂದೇ ಅಂಕಣದಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದ, ಬೇರೆ ಬೇರೆ ತರಹದ ಕಷ್ಟಗಳನ್ನು ಎದುರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ವಿಭಿನ್ನ ವ್ಯಕ್ತಿತ್ವ ಹೊಂದಿದ್ದ 9 ಸಾಧಕರ ಸಂಕ್ಷಿಪ್ತ ಆಟೋಬಯೋಗ್ರಾಫಿ ನೀಡಿದ್ದಾರೆ. ಕೊನೆಯಲ್ಲಿ ಚಹ ಮಾರುತಿದ್ದ ಹುಡುಗ ನಮ್ಮ ದೇಶದ ಪ್ರಧಾನಿ ಆದ ಸಾಧನೆ ಬಗ್ಗೆಯೂ ಕೂಡ ಹೆಮ್ಮೆಯಿಂದ ಬರೆದಿದ್ದಾರೆ. ಒಳ್ಳೆಯ ಅಂಕಣ ಬರಹ. ಲೇಖಕರಿಗೆ ಮತ್ತು ಪತ್ರಿಕೆ ಗೂ ಧನ್ಯವಾದಗಳು.

- ರಾಘವೇಂದ್ರ ಜೋಯಿಸ್, ಮೈಸೂರು

ಆತ್ಮಗೌರವ ಹೆಚ್ಚಿಸಲಿದೆ

ರಾಜ್ಯದ ಪ್ರತಿ ಶಿಕ್ಷಕರೂ ತಮ್ಮ ಹೆಸರಿನ ಮುಂದೆ ’ Tr’ (Teacher) ಎಂಬ ಗೌರವ ಪೂರ್ವಪ್ರತ್ಯಯ ಬಳಸಲು ಸರಕಾರ ಅನುಮತಿ ನೀಡಿರುವುದು ಅತ್ಯಂತ ಅಭಿನಂದನೀಯ. ದೇಶದ ಅಭಿವೃದ್ಧಿ ಯಲ್ಲಿ ಸೈನಿಕ, ಕೃಷಿಕ ಮತ್ತು ಕಾರ್ಮಿಕರಷ್ಟೇ ಶಿಕ್ಷಕರ ಪಾತ್ರವೂ ಅನನ್ಯ ಎಂಬ ಮುಖ್ಯಮಂತ್ರಿಗಳ ಮಾತು ನೂರಕ್ಕೆ ನೂರರಷ್ಟು ಸತ್ಯ. ವೈದ್ಯರಿಗೆ ’ Dr’ ಪ್ರಾಧ್ಯಾಪಕರಿಗೆ ’ Prof’ ಇರುವಂತೆ, ಇನ್ಮುಂದೆ ’ Tr’ ಎಂಬುದು ಸಮಾಜ ಕಟ್ಟುವ ಶಿಕ್ಷಕನ ಗೌರವದ ಸಂಕೇತವಾಗಿ ಮೆರೆಯಲಿದೆ. ಈ ನಿರ್ಧಾರವು ಖಂಡಿತವಾಗಿಯೂ ಶಿಕ್ಷಕರಲ್ಲಿ ಆತ್ಮಗೌರವ ಹಾಗೂ ವೃತ್ತಿಪರ ಉತ್ಸಾಹವನ್ನು ಇಮ್ಮಡಿ ಗೊಳಿಸ ಲಿದೆ.

- ಶ್ರೀಧರ ಎಸ್. ವಾಣಿ, ಕೊಪ್ಪಳ

ಇದನ್ನೂ ಓದಿ: Readers Colony: ಸಾಂಸ್ಕೃತಿಕ ಪ್ರತಿಷ್ಠಾನ

ಜುಟ್ಟಿಗೆ ಮಲ್ಲಿಗೆ ಹೂ

ಎಲ್ಲ ಶಿಕ್ಷಕರು ಇನ್ನು ಮುಂದೆ ತಮ್ಮ ಹೆಸರಿನ ಮೊದಲು ’ 'Tr' ಎಂಬ ಪದವನ್ನು ಬಳಸಲು ಸರಕಾರ ಅನುಮತಿ ನೀಡಿದೆ. ಇದು ಒಂದು ಥರ ಹೆಸರಿನ ಮುಂದೆ ಬಳಸುವ ‘ಗೌರವ ಡಾಕ್ಟರೇಟ್’ ಇದ್ದ ಹಾಗೆ. ಈ ರೀತಿ ಶಿಕ್ಷಕರನ್ನು ಬೇರೆ ನೌಕರರಿಂದ ಪ್ರತ್ಯೇಕಿಸಿ, ಅವರು ವಿಶೇಷ ಮನ್ನಣೆಗೆ ಪಾತ್ರವಾಗುವಂತೆ ಮಾಡುವ ಇರಾದೆ ಸರಕಾರಕ್ಕಿದೆ ಎಂದು ಕಾಣುತ್ತದೆ. ಮೇಲ್ನೋಟಕ್ಕೆ ಇದೊಂದು ಉತ್ತಮ ಕ್ರಮದಂತೆ ಕಂಡರೂ ತೋಟ ಶೃಂಗಾರ ಒಳಗೆ ಗೋಣಿಸೊಪ್ಪು ಎಂಬಂತೆ ಶಿಕ್ಷಕರು ಹತ್ತಾರು ಸಮಸ್ಯೆಗಳಿಂದ ನಲುಗುತ್ತಿರುವುದನ್ನು ಸರಕಾರ ಅರ್ಥಮಾಡಿಕೊಂಡು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.

ಉದಾಹರಣೆಗೆ ಬೋಧಕೇತರ ಕೆಲಸಗಳ ಒತ್ತಡ ಕಡಿಮೆ ಮಾಡುವುದು, ಶೇಕಡಾವಾರು ಫಲಿತಾಂಶ ಇಂತಿ ಷ್ಟೇ ಇರಬೇಕೆಂದು ಒತ್ತಡ ಹಾಕುವುದನ್ನು ಕೈಬಿಡುವುದು, ಶಿಕ್ಷಕರು ಕೆಲಸದ ನಿಮಿತ್ತ ಆಡಳಿತ ಕಚೇರಿಗೆ ಹೋದಾಗ ಅವರೊಟ್ಟಿಗೆ ಗೌರವದಿಂದ ನಡೆದುಕೊಳ್ಳುವುದು, ಮುಂಬಡ್ತಿ, ಪಿಂಚಣಿ ಮುಂತಾದ ಸೇವೆಯನ್ನು ಪ್ರತಿಫಲಾಪೇಕ್ಷೆ ಇಲ್ಲದೆ ತ್ವರಿತವಾಗಿ ಮಾಡಿಕೊ ಡುವುದು. ಶಿಕ್ಷಕರ ಇಂಥ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚಿ, ಅವರ ಹೆಸರಿನ ಮುಂದೆ ಟಿಆರ್ ಬಳಸಿದರೆ ಅದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಆಗುತ್ತದೆ.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ರಸ್ತೆ ತೆರಿಗೆ ಕಟ್ಟಿದ್ದಾರೆ

ಬೆಂಗಳೂರು ನಗರದ ಮೇಲುರಸ್ತೆಗಳಲ್ಲಿ ಆಟೋ, ದ್ವಿಚಕ್ರವಾಹನಗಳ ಸಂಚಾರ ನಿರ್ಬಂಧಿಸಿದ್ದಾರೆ. ಇವುಗಳಿಂದಲೇ ಅಪಘಾತ ಆಗುತ್ತಿದೆ ಎಂಬ ಸಮರ್ಥನೆ ನೀಡಿದ್ದಾರೆ. ಮೇಲುರಸ್ತೆಗಳು ಕಾರು, ಬಸ್ಸು ಗಳಿಗೆ ಮಾತ್ರವೇ ಆದರೆ ಅದು ಸಿರಿವಂತರ ರಸ್ತೆ ಆಗುತ್ತದೆಯೇ ಹೊರತು ಮೇಲುರಸ್ತೆ ಆಗದು. ದ್ವಿಚಕ್ರ ವಾಹನಗಳೂ ಸೇರಿದಂತೆ ಎಲ್ಲ ವಾಹನಗಳೂ ರಸ್ತೆ ತೆರಿಗೆ ಪಾವತಿ ಮಾಡಿರುತ್ತವೆ. ಹಾಗಾಗಿ ನಿರ್ಬಂಧ ಸರಿಯಲ್ಲ. ಅಪಘಾತ ಆಗುತ್ತವೆ ಎಂದರೆ ಅದು ಆಗದಂತೆ ತಡೆಯಬೇಕು. ಸಂಚಾರವನ್ನೇ ನಿರ್ಬಂಧಿಸುವುದು ಸರಿಯಲ್ಲ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು