Readers Colony: ಇದು ಕಾಲದ ಮಹಿಮೆ!
ಇನ್ನು ಅಂಕಣಕಾರರು ವಿವರಿಸಿರುವಂತೆ, ಒಂದು ಟೇಬಲ್ ಲ್ಯಾಂಪ್ ಎಷ್ಟೊಂದು ದೂರದಿಂದ, ಅದೆಷ್ಟು ಕಡಿಮೆ ಅವಧಿಯಲ್ಲಿ ಬಂದು ತಲುಪುತ್ತದೆ ಎಂಬುದು ಎಷ್ಟು ಅಚ್ಚರಿದಾಯಕವೋ, ಅದೇ ವಸ್ತುವಿಗೆ ಬೇಕಾದ ಕಚ್ಚಾವಸ್ತುಗಳೂ ಎಲ್ಲೆಲ್ಲಿಂದಲೋ ಬಂದು, ಎಲ್ಲೋ ಒಂದು ಕಡೆ ಜೋಡಣೆ ಗೊಂಡು ಪಕ್ಕಾ ಉತ್ಪನ್ನವಾಗಿ ಗ್ರಾಹಕರ ಕೈಸೇರುತ್ತವೆ ಎಂಬುದೂ ಕುತೂಹಲಕಾರಿಯೇ!
-
ಓದುಗರ ಓಣಿ
ಶಿಶಿರ್ ಹೆಗಡೆ ಅವರ ‘ಶಿಶಿರಕಾಲ’ ಅಂಕಣವು (ಫೆ.6) ಕಾಲದ ಹಿಮೆಯನ್ನೇ ವಿವರಿಸಿದಂತಿದೆ. ‘ಜಗತ್ತಿ ನಲ್ಲಿ ಮನುಷ್ಯರಿಗಿಂತ ವಸ್ತುಗಳೇ ಹೆಚ್ಚು ಓಡಾಡುತ್ತವೆ’ ಎಂಬುದು ನಿಜಕ್ಕೂ ಕುತೂಹಲಕಾರಿ ವಿಷಯವೇ! ಶಿಶಿರರ ಆಲೋಚನಾಲ ಹರಿಯು ಹುಟ್ಟೂರಿನ ಗಣೇಶ ಭಟ್ಟರ ಅಂಗಡಿಯಿಂದ ಪ್ರಾರಂಭಗೊಂಡು ಅಮೆರಿಕದ ಶಿಕಾಗೊವರೆಗೆ ಹರಡಿಕೊಂಡಿದೆ.
ಹೌದು, ಹಿಂಗು, ಮೆಣಸು, ಜೀರಿಗೆ, ಕೊತ್ತುಂಬರಿ ಹೀಗೆ ನಾವೆಲ್ಲ ದಿನನಿತ್ಯ ಬಳಸುವ ವಸ್ತುಗಳು ಎಲ್ಲಿಂದ, ಹೇಗೆ ಬರುತ್ತವೆ ಎಂಬುದರ ಬಗ್ಗೆ ಯಾರಾದರೂ ತಲೆಕೆಡಿಸಿಕೊಂಡಿದ್ದಿದೆಯೇ? ಪ್ರಾಯಶಃ ಇರಲಿಕ್ಕಿಲ್ಲ. ತೀರಾ ಮಾಮೂಲಿ ವಸ್ತುಗಳಾದ ಇವುಗಳ ಬಗ್ಗೆ ಚಿಂತೆಯೇಕೆ ಅಂದುಕೊಂಡವರೇ ಹೆಚ್ಚು.
‘ತೊವ್ವೆ ಸುರಿವವನಿಗೆ, ಬೇಳೆಯ ದರದ ಹಂಗೇಕೆ?’ ಎಂಬುದೊಂದು ಗಾದೆಮಾತಿದೆ. ಇಲ್ಲೂ ಅದೇ ಆಗುತ್ತಿರುವುದು! ಮನೆಯಲ್ಲಿ ಅಕ್ಕನೋ ಅಮ್ಮನೋ ‘ದಿನಸಿ ಬೇಕು’ ಅಂದಾಗ, ಅವು ಸಿಗುವ ಅಂಗಡಿಗೆ ಹೋಗಿ, ಅವರು ಕೇಳಿದಷ್ಟು ಹಣ ಕೊಟ್ಟು ತರುವುದೊಂದೇ ನಮಗೆ ಗೊತ್ತು.
ಇದನ್ನೂ ಓದಿ: Shishir Hegde Column: ಜಗತ್ತಿನಲ್ಲಿ ಮನುಷ್ಯರಿಗಿಂತ ವಸ್ತುಗಳೇ ಹೆಚ್ಚು ಓಡಾಡುತ್ತವೆ !
‘ನೀವು ಕೊಡುವ ಈ ದಿನಸಿ ಎಲ್ಲಿಂದ ಬರುತ್ತದೆ ಗೊತ್ತೇ?’ ಅಂತ ಅಂಗಡಿಯವರಿಗೆ ಒಂದೊಮ್ಮೆ ಯಾರಾದರೂ ಕೇಳಿದರೆ, ‘ಅದೆಲ್ಲ ನಿಮಗೇಕೆ ತಲೆಹರಟೆ? ಬೇಕಾದರೆ ಒಯ್ಯಿರಿ, ಇಲ್ಲ ಅಂದರೆ ಬಿಡಿ’ ಎನ್ನುವವರೇ ಹೆಚ್ಚು! ಗಣೇಶ ಭಟ್ಟರ ಹಾಗೆ ಅದರ ಮೂಲವನ್ನು ಕೆದಕಲು ಮುಂದಾಗುವವರು ಕಮ್ಮಿ.
ಇನ್ನು ಅಂಕಣಕಾರರು ವಿವರಿಸಿರುವಂತೆ, ಒಂದು ಟೇಬಲ್ ಲ್ಯಾಂಪ್ ಎಷ್ಟೊಂದು ದೂರದಿಂದ, ಅದೆಷ್ಟು ಕಡಿಮೆ ಅವಧಿಯಲ್ಲಿ ಬಂದು ತಲುಪುತ್ತದೆ ಎಂಬುದು ಎಷ್ಟು ಅಚ್ಚರಿದಾಯಕವೋ, ಅದೇ ವಸ್ತುವಿಗೆ ಬೇಕಾದ ಕಚ್ಚಾವಸ್ತುಗಳೂ ಎಲ್ಲೆಲ್ಲಿಂದಲೋ ಬಂದು, ಎಲ್ಲೋ ಒಂದು ಕಡೆ ಜೋಡಣೆಗೊಂಡು ಪಕ್ಕಾ ಉತ್ಪನ್ನವಾಗಿ ಗ್ರಾಹಕರ ಕೈಸೇರುತ್ತವೆ ಎಂಬುದೂ ಕುತೂಹಲಕಾರಿಯೇ!
ಇಂದು ಬಹುತೇಕ ವಸ್ತುಗಳು ಹೀಗೆ ‘ಅಸೆಂಬಲ್’ ಆದಂಥವೇ, ಲೇಬಲ್ ಮಾತ್ರ ಚೀನಾದ್ದು. ಇದೊಂದು ಚೋದ್ಯವೇ ಸರಿ!
- ಶಂಕರನಾರಾಯಣ ಭಟ್, ಮಾಡಗೇರಿ
ಇದು ವಿಷಾದನೀಯ
ಕೊರಿಯನ್ ಆನ್‌ಲೈನ್ ಗೇಮ್‌ನ ಚಟಕ್ಕೆ ಬಿದ್ದಿದ್ದ, ದೆಹಲಿ ಸಮೀಪದ ಘಾಜಿಯಾಬಾದ್‌ನ ಮೂವರು ಸೋದರಿಯರು ತಾವು ವಾಸಿಸುತ್ತಿದ್ದ ವಸತಿ ಸಮುಚ್ಚಯದ 9ನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದು ವಿಷಾದನೀಯ ಬೆಳವಣಿಗೆ. ಪೋಷಕರು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಕಿತ್ತುಕೊಂಡಿದ್ದರಿಂದ ಖಿನ್ನತೆಗೆ ಜಾರಿದ್ದ ಈ ಯುವತಿಯರು, ಕೊರಿಯನ್ ಗೇಮ್‌ನ 50ನೇ ಟಾಸ್ಕ್‌ನಲ್ಲಿ ವಿಜಯಿಯಾಗಲು ತಮ್ಮ ಅಮೂಲ್ಯ ಪ್ರಾಣವನ್ನೇ ಬಲಿಕೊಟ್ಟಿದ್ದು ಮೂರ್ಖತನದ ಪರಮಾವಽ. ಆತ್ಮಹತ್ಯೆಗೆ ಪ್ರಚೋದಿಸುವ ಇಂಥ ವಿದೇಶಿ ಮೂಲದ ಗೇಮಿಂಗ್ ಆಪ್‌ಗಳನ್ನು ಕೇಂದ್ರ ಸರಕಾರವು ಇನ್ನಾದರೂ ಬಹಿಷ್ಕರಿಸಿ ಮುಗ್ಧ ಮಕ್ಕಳ ಪ್ರಾಣವನ್ನು ರಕ್ಷಿಸಬೇಕಾಗಿದೆ.
- ಕೆ.ವಿ.ವಾಸು, ಮೈಸೂರು
ಸಮಗ್ರ ವಿಶ್ಲೇಷಣೆ
ಡಾ.ನಿರಂಜನ ಪೂಜಾರ್ ಅವರು ‘ಅರ್ಥ-ವ್ಯಾಪ್ತಿ’ ಅಂಕಣದಲ್ಲಿ (ಫೆ.4) ಮಾಡಿರುವ ವಿಶ್ಲೇಷಣೆಯು ಸಮಗ್ರವಾಗಿಯೂ ಸಕಾಲಿಕವಾಗಿಯೂ ಇದೆ. ಭಾರತವು ವಿವಿಧ ಕ್ಷೇತ್ರಗಳಲ್ಲಿ ಹೇಗೆ ಮುನ್ನಡೆ ಯುತ್ತಿದೆ ಎಂಬುದನ್ನು ಅವರು ಅಂಕಿ-ಅಂಶಗಳ ಸಮೇತ ಪ್ರಸ್ತುತಪಡಿಸಿರುವುದು ಶ್ಲಾಘನೀಯ. ಆರ್ಥಿಕ ಸಮೀಕ್ಷೆಯ ಪ್ರಕಾರ, ಕೃಷಿ ಕ್ಷೇತ್ರವು ಸ್ಥಿರ ಬೆಲೆಯಲ್ಲಿ ಶೇ.4.4ರ ಬೆಳವಣಿಗೆಯನ್ನು ದಾಖಲಿ ಸಿದೆ; ಆದರೆ ಈ ಅಂಕಿ-ಅಂಶಗಳು ನಿಜವಾಗಿ ರೈತರಿಗೆ ದೊರೆಯುವ ಮೂಲಬೆಲೆಯನ್ನು ಪ್ರತಿಬಿಂಬಿಸುತ್ತವೆಯೇ ಎಂಬುದು ನನ್ನ ಅನುಮಾನ.
ಏಕೆಂದರೆ, ಕೃಷಿ ಪರಿಕರಗಳ ಬೆಲೆ ಹಾಗೂ ಕಾರ್ಮಿಕ ವೆಚ್ಚಗಳು ಗಗನಕ್ಕೇರಿರುವುದು ಸ್ಪಷ್ಟ ವಾಗಿರುವಾಗ, ಈ ಬೆಳವಣಿಗೆ ಸೂಚ್ಯಂಕದಲ್ಲಿ ವ್ಯತ್ಯಾಸವಿರಬಹುದು ಎನಿಸುತ್ತದೆ. ಬಹುಶಃ, ಮಧ್ಯವರ್ತಿಗಳ ಕಮಿಷನ್‌ಗಳನ್ನು ಒಳಗೊಂಡಂತೆ ಲೆಕ್ಕಮಾಡಿರಬಹುದು ಎನ್ನುವ ಸಂಶ ಯವೂ ಇದೆ.
- ಶರದ್ ದೇಶಪಾಂಡೆ, ಹುಬ್ಬಳಿ