Akashaya Trutiya 2026: ಅಕ್ಷಯ ತೃತೀಯ ಸೀಸನ್ನಲ್ಲಿ ಟ್ರೆಂಡಿಯಾದ ರಾಣಿ ಹಾರಗಳಿವು
ಅಕ್ಷಯ ತೃತೀಯ ಸೀಸನ್ನಲ್ಲಿ ಬಗೆಬಗೆಯ ರಾಣಿ ಹಾರಗಳು ಟ್ರೆಂಡಿಯಾಗಿವೆ. ಜ್ಯುವೆಲ್ ಪ್ರಿಯರ ಮನಸೆಳೆದಿವೆ. ಅಂದಹಾಗೆ, ಈ ರಾಣಿ ಹಾರದ ಡಿಸೈನ್ಗಳು ಹೊಸತೇನಲ್ಲ! ರಾಜ-ಮಹಾರಾಜರು ಧರಿಸುತ್ತಿದ್ದ ರಾಯಲ್ ಲುಕ್ ನೀಡುತ್ತಿದ್ದ ರಾಣಿ ಹಾರಗಳು ನೋಡಲು ಗ್ರ್ಯಾಂಡ್ ಆಗಿರುತ್ತವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
ಅಕ್ಷಯ ತೃತೀಯ ಸೀಸನ್ನಲ್ಲಿ ಬಗೆಬಗೆಯ ರಾಣಿ ಹಾರಗಳು ಟ್ರೆಂಡಿಯಾಗಿವೆ. ಜ್ಯುವೆಲ್ ಪ್ರಿಯರ ಮನಸೆಳೆದಿವೆ.
ಟ್ರೆಂಡಿಯಾಗಿರುವ ವೈವಿಧ್ಯಮಯ ರಾಣಿ ಹಾರಗಳು
ಬಿಗ್ ಪೆಂಡೆಂಟ್ ಹೊಂದಿರುವ ನಾಲ್ಕೈದು ಎಳೆಯ ಮುತ್ತಿನ ಹಾರ, ಎಮರಾಲ್ಡ್ ಹಾರ, ರೂಬಿ, ಪ್ರಿಶಿಯಸ್ ಸ್ಟೋನ್ಸ್ ಮಿಕ್ಸ್ ಮ್ಯಾಚ್ ಹೊಂದಿದ ರಾಣಿ ಹಾರ, ಲಾಂಗ್ಚೈನ್ ಹೊಂದಿರುವ ಎಳೆಎಳೆಯ ಮುತ್ತಿನ ಹಾರ, ಬಂಗಾರದ ಚೈನ್ ಹಾರ, ನಾಗರ, ಗಂಡ ಭೇರುಂಡ, ನವಿಲು ಹೀಗೆ ನಾನಾ ಡಿಸೈನ್ನ ಅಗಲವಾದ ಪೆಂಡೆಂಟ್ ಹೊಂದಿರುವಂತಹ ಹಾರ, ಟೈನಿ ಮುತ್ತಿನ ಎಳೆಗಳನ್ನು ಹೊಂದಿರುವ ರಾಣಿ ಹಾರ, ಬಿಗ್ ಪರ್ಲ್ನ ವಿಕ್ಟೋರಿಯಾ ಸೆಟ್ನಂತಿರುವ ರಾಣಿ ಹಾರ ಸೇರಿದಂತೆ ಈ ಸೀಸನ್ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ರಾಣಿಯ ಹಾರಗಳು ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾಗಿವೆ.
ರಾಯಲ್ ಲುಕ್ ನೀಡುವ ರಾಣಿ ಹಾರಗಳು
ಅಂದಹಾಗೆ, ಈ ರಾಣಿ ಹಾರದ ಡಿಸೈನ್ಗಳು ಹೊಸತೇನಲ್ಲ! ರಾಜ-ಮಹಾರಾಜರು ಧರಿಸುತ್ತಿದ್ದ ರಾಯಲ್ ಲುಕ್ ನೀಡುತ್ತಿದ್ದ ರಾಣಿ ಹಾರಗಳು ನೋಡಲು ಗ್ರ್ಯಾಂಡ್ ಆಗಿರುತ್ತವೆ. ಬಗೆಬಗೆಯ ಮುತ್ತು, ಹವಳ, ಪ್ರಿಶೀಯಸ್ ಸ್ಟೋನ್ಸ್ನಿಂದ ಕೂಡಿರುತ್ತವೆ. ಮೊಗಲರ ಕಾಲದಲ್ಲಿ ಮಾತ್ರವಲ್ಲ, ಕೃಷ್ಣದೇವರಾಯನ ಕಾಲದಲ್ಲೂ ಇವು ಪ್ರಚಲಿತದಲ್ಲಿದ್ದವು ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಘವ್ ಹಾಗೂ ರಾಧಿಕಾ.
ಲೈಟ್ವೇಟ್ ರಾಣಿ ಹಾರಗಳು ಲಭ್ಯ
ಮೊದಲೆಲ್ಲಾ ರಾಣಿ ಹಾರಗಳು ಎಂದಾಕ್ಷಣ ಹೆಚ್ಚು ಬಂಗಾರ ಬೇಕು ಎಂದುಕೊಂಡು ಮೊದಲೆಲ್ಲಾ ಮಹಿಳೆಯರು ದೂರ ಸರಿಯುತ್ತಿದ್ದರು. ಆದರೆ, ಇದೀಗ ಲೈಟ್ವೇಟ್ ಚಿನ್ನದಲ್ಲಿ ಇವು ದೊರೆಯುತ್ತಿವೆ. ಹಾಗಾಗಿ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಆಭರಣ ಅಂಗಡಿಯೊಂದರ ಮಾಲೀಕರು.
ರಾಣಿ ಹಾರದ ಆಯ್ಕೆ ಹೀಗಿರಲಿ
- ಆದಷ್ಟೂ ಗಟ್ಟಿ ಇರುವಂತಹ ರಾಣಿ ಹಾರಗಳನ್ನು ಖರೀದಿಸಿ.
- ಮುತ್ತು, ವಜ್ರ ಹಾಗೂ ಪ್ರಿಶಿಯಸ್ ಸ್ಟೋನ್ಸ್ ಇರುವಂತಹ ಹಾರ ಖರೀದಿಸುವಾಗ ವೇಸ್ಟೆಜ್, ಮೇಕಿಂಗ್ ಚಾರ್ಜ್ ಎಲ್ಲದರ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ.
- ಗ್ರ್ಯಾಂಡ್ ಹಾರ ಕೊಂಡಲ್ಲಿ ಎಲ್ಲಾ ಬಗೆಯ ಎಥ್ನಿಕ್ ಸಮಾರಂಭಗಳಿಗೆ ಧರಿಸಬಹುದು.