IPL 2026: ಗುಜರಾತ್ ಟೈಟನ್ಸ್‌ಗೆ ಸೇರ್ಪಡೆಯಾದ ಕಾನರ್ ಎಸ್ಟರ್‌ಹುಯಿಜೆನ್ ಯಾರು?
Connor Esterhuizen: ದಕ್ಷಿಣ ಆಫ್ರಿಕಾದ ಉದಯೋನ್ಮುಖ ಕ್ರಿಕೆಟಿಗ ಕಾನರಗ್ ಎಸ್ಟರ್‌ಹುಯಿಜೆನ್ ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರು ಗಾಯಾಳು ಟಾಮ್ ಬ್ಯಾಂಟನ್ ಅವರ ಸ್ಥಾನಕ್ಕೆ ಬಂದಿದ್ದಾರೆ.
ಗುಜರಾತ್ ಟೈಟನ್ಸ್‌ಗೆ ಸೇರಿದ ಕಾನರ್‌ಎಸ್ಟರ್‌ಹುಯಿಜೆನ್. -
ನವದೆಹಲಿ: ಗುಜರಾತ್ ಟೈಟನ್ಸ್ (Gujarat Titans) ತಂಡ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಟಾಮ್ ಬ್ಯಾಂಟನ್ (Tom Banton) ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಪ್ರತಿಭೆ ಕಾನರ್ ಎಸ್ಟರ್‌ಹುಯಿಜೆನ್ (Connor Esterhuizen) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಮಾಡಿರುವ ಎಸ್ಟರ್‌ಹುಯಿಜೆನ್ 75 ಲಕ್ಷ ರು ಮೂಲ ಬೆಲೆಗೆ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬ್ಯಾಂಟನ್ ಬೆರಳಿನ ಗಾಯದ ಕಾರಣದಿಂದಾಗಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗದಿಂದ ಹೊರಗುಳಿಯಲಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಅವರು, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಪರ ಮಹತ್ವದ ಪಾತ್ರವಹಿಸಿ 8 ಪಂದ್ಯಗಳಲ್ಲಿ 155 ರನ್ ಗಳಿಸಿದ್ದರು.
"ಬೆರಳಿನ ಗಾಯಕ್ಕೆ ತುತ್ತಾದ ಟಾಮ್ ಬ್ಯಾಂಟನ್ ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಗುಜರಾತ್ ಟೈಟನ್ಸ್ ತಂಡ ಕಾನರ್ ಎಸ್ಟರ್‌ಹುಯಿಜೆನ್ ಅವರನ್ನು ಸೇರಿಸಿಕೊಂಡಿದೆ," ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
IPL 2026: ಡಗೌಟ್‌ನಲ್ಲಿ ಫೋನ್ ಬಳಸಿದ್ದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್‌ಗೆ ಒಂದು ಲಕ್ಷ ರು ದಂಡ!
ಕಾನರ್ ಎಸ್ಟರ್‌ಹುಯಿಜೆನ್ ಯಾರು?
24ರ ವಯಸ್ಸಿನ ಕಾನರ್ ಎಸ್ಟರ್‌ಹುಯಿಜೆನ್ ಅವರು ಮೂಲ ಬೆಲೆ 75 ಲಕ್ಷ ರು ಬೆಲೆಗೆ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇವರ ಪಾಲಿಗೆ ಇದು ಮೊದಲ ಐಪಿಎಲ್ ಟೂರ್ನಿಯಾಗಿದೆ.
ಕಾನರ್ ಎಸ್ಟರ್‌ಹುಯಿಜೆನ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ವೇಗವಾಗಿ ದೊಡ್ಡ ಹೆಸರು ಮಾಡುತ್ತಿದ್ದಾರೆ. ಕಳೆದ ತಿಂಗಳು ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆ ಸರಣಿಯಲ್ಲಿ ಅವರು 145.98ರ ಸ್ಟ್ರೈಕ್ ರೇಟ್‌ನೊಂದಿಗೆ 200 ರನ್ ಗಳಿಸಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
Welcoming you from every 𝘾𝙤𝙣𝙣𝙤𝙧 of Gujarat 💙 pic.twitter.com/mftKsQHetE
— Gujarat Titans (@gujarat_titans) April 17, 2026
ಇದು ಅವರ ಅಂತಾರಾಷ್ಟ್ರೀಯ ಮೊಟ್ಟ ಮೊದಲ ಸರಣಿಯಾಗಿದ್ದರೂ, “ಪ್ಲೇಯರ್ ಆಫ್ ದಿ ಸೀರೀಸ್” ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ದಕ್ಷಿಣ ಆಫ್ರಿಕಾ ತಂಡದ 3-2 ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಸರಣಿಯ ಅವಧಿಯಲ್ಲಿ ಅವರು ಒಟ್ಟು 13 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ʻಮುಂಬೈ ಇಂಡಿಯನ್ಸ್ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಿʼ-ಮನೋಜ್ ತಿವಾರಿ!
ಕಾನರ್ ಈಗಾಗಲೇ ದಕ್ಷಿಣ ಆಫ್ರಿಕಾ20 ಟೂರ್ನಿಯಲ್ಲಿ ಎಂಐ ಕೇಪ್ ಟೌನ್ ಪರ ಆಡಿದ್ದು, ಫೈನಲ್‌ಗೆ ತಲುಪಿದ ಪ್ರೆಟೋರಿಯಾ ಕ್ಯಾಪಿಟಲ್ಸ್ ತಂಡದಲ್ಲೂ ಭಾಗಿಯಾಗಿದ್ದರು. ಆದರೆ ಆ ಟೂರ್ನಿಯಲ್ಲಿ ಅವರ ಪ್ರದರ್ಶನ ಸಾಮಾನ್ಯವಾಗಿತ್ತು, 12 ಪಂದ್ಯಗಳಲ್ಲಿ ಕೇವಲ 166 ರನ್ ಗಳಿಸಿ, ಸುಮಾರು 105 ಕ್ಕಿಂತ ಸ್ವಲ್ಪ ಹೆಚ್ಚು ಸ್ಟ್ರೈಕ್ ರೇಟ್ ದಾಖಲಿಸಿದ್ದರು. ಈ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಜೋಸ್ ಬಟ್ಲರ್ ಅವರ ಹಿಂದೆ ಬ್ಯಾಕಪ್ ವಿಕೆಟ್ ಕೀಪರ್ ಆಯ್ಕೆಯಾಗಿ ಎಸ್ಟರ್‌ಹುಯಿಜೆನ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಜಿಟಿಗೆ ಮುಂದಿನ ಎದುರಾಳಿ ಕೆಕೆಆರ್
ಗುಜರಾತ್ ಟೈಟನ್ಸ್ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯಂತ ಕಠಿಣ ಆರಂಭ ಪಡೆದಿದ್ದರೂ, ನಂತರ ಯೋಗ್ಯ ಕಮ್‌ಬ್ಯಾಕ್ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದೀಗ ಸತತ ಮೂರನೇ ಗೆಲುವಿನ ನಿರೀಕ್ಷೆಯೊಂದಿಗೆ, ಗೆಲುವು ಕಾಣದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಏಪ್ರಿಲ್ 17 ಶುಕ್ರವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.