Bollywood Stars: ಕೈಮಗ್ಗದ ಸೀರೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರ ಕ್ಯೂಟ್ ಫೋಟೋಶೂಟ್ ಇಲ್ಲಿದೆ!
ಸಿನಿಮಾ ನಟ ನಟಿಯರು ತಮ್ಮ ಫ್ಯಾಷನ್ ಸೆನ್ಸ್ ಗಳಿಂದ ಯುವ ಸಮುದಾಯವನ್ನೂ ಮೋಡಿ ಮಾಡು ತ್ತಾರೆ. ಅಂತೆಯೇ ಬಾಲಿವುಡ್ ನ ಕೆಲವು ಖ್ಯಾತ ನಟಿಯರು ಕೈಮಗ್ಗದ ಸೀರೆ ಉಟ್ಟು ಥೇಟ್ ಮಹಾರಾಣಿ ಯಂತೆ ಕಂಗೊಳಿಸಿದ್ದಾರೆ. ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್, ಆಲಿಯಾ ಭಟ್ ಇತ್ಯಾದಿ ಖ್ಯಾತ ನಟಿಯರ ಬ್ಯೂಟಿಫುಲ್ ಪೋಟೋಸ್ ಇಲ್ಲಿದೆ.



ದೀಪಿಕಾ ಪಡುಕೋಣೆ: ಸೀರೆಯಲ್ಲಿ ದೀಪಿಕಾ ಪಡುಕೋಣೆ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಾರೆ. ಈ ಭಾರಿ ಕೆಂಪು ಬಣ್ಣದ ಕೈಮಗ್ಗ ಸೀರೆಯನ್ನು ಧರಿಸಿದ್ದು ಬಹಳ ಮುದ್ದಾಗಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇದು ರಾಜಸ್ಥಾನ ಮತ್ತು ಗುಜರಾತ್ಗೆ ಸೇರಿದ ಸಾಂಪ್ರದಾಯಿಕ ಕಲೆಯಾಗಿದ್ದು ಕೈಯಿಂದಲೇ ಈ ಸೀರೆಯ ವಿನ್ಯಾಸ ಮಾಡಲಾಗಿದೆ.

ಜಾನ್ವಿ ಕಪೂರ್: ಬಿಳಿ ಮತ್ತು ಗೋಲ್ಡ್ ಬಣ್ಣದ ಕಸವು ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಇದು ಕೇರಳದ ಸಾಂಪ್ರದಾಯಿಕ ಸೀರೆಯಾಗಿದ್ದು, ಇದು ಸರಳ ವಿನ್ಯಾಸವನ್ನು ಹೊಂದಿದೆ. ಜಾನ್ವಿ ಈ ಸೀರೆಯಲ್ಲಿ ಬಹಳ ಸುಂದರವಾಗಿ ಕಂಡಿದ್ದಾರೆ.

ಆಲಿಯಾ ಭಟ್: ಹೂವಿನ ವಿನ್ಯಾಸ ಇರುವ ಪೈಠಣಿ ಸೀರೆಯಲ್ಲಿ ಆಲಿಯಾ ಭಟ್ ಕಂಗೊಳಿಸಿದ್ದಾರೆ. ಮಹಾರಾಷ್ಟ್ರದ ಪ್ರಸಿದ್ಧ ಸೀರೆಯಾದ ಪೈಠಣಿ, ವಿಶಿಷ್ಟ ಹೂವಿನ ವಿನ್ಯಾಸಗಳು, ನವಿಲು ಮತ್ತು ಇತರ ಪಕ್ಷಿಗಳ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಈ ಸೀರೆಯನ್ನು ಅವರು ವಿಶೇಷ ವಿನ್ಯಾಸದ ಬ್ಲೌಸ್ ಜೊತೆ ಧರಿಸಿದ್ದರು.

ಪ್ರಿಯಾಂಕಾ ಚೋಪ್ರಾ: ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಜಮ್ದಾನಿ ಸೀರೆ ಧರಿಸಿದ್ದರು. ಇದು ಬಂಗಾಳದ ಸೀರೆಯಾಗಿದ್ದು, ಈ ಸೀರೆಯು ನೇಯ್ಗೆಯಲ್ಲಿನ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.

ಮೃಣಾಲ್ ಠಾಕೂರ್: ಕೆನ್ನೀಲಿ ಮತ್ತು ಗೋಲ್ಡ್ ಬಣ್ಣದ ಕಾಂಜೀವರಂ ಸೀರೆ ಧರಿಸಿದ್ದರು. ತಮಿಳುನಾಡಿನ ಈ ಸೀರೆ ಇದಾಗಿದ್ದು ಇದರ ಆಕರ್ಷಕ ಬಣ್ಣಗಳು, ಮತ್ತು ವಿಭಿನ್ನ ಲುಕ್ ನ ಜರಿಯ ವಿನ್ಯಾಸಕ್ಕೆ ಇದು ಜನಪ್ರಿಯವಾಗಿದೆ.

ಸೋನಮ್ ಕಪೂರ್: ಕಂದು ಬಣ್ಣದ ಘರಚೋಳ ಸೀರೆ ಧರಿಸಿದ್ದರು. ಇದು ಗುಜರಾತ್ಗೆ ಸೇರಿದ ಮತ್ತೊಂದು ವಿಶಿಷ್ಟ ಕೈಮಗ್ಗದ ಸೀರೆಯಾಗಿದೆ. ಇದನ್ನು ಸಾಮಾನ್ಯವಾಗಿ ವಿವಾಹದಂತಹ ಶುಭ ಸಮಾ ರಂಭಗಳಲ್ಲಿ ಬಳಸಲಾಗುತ್ತದೆ.

ಜೆನಿಲಿಯಾ ಡಿಸೋಜಾ: ಸಾಂಪ್ರದಾಯಿಕ ತಿಳಿ ಬಿಳಿ ಬಣ್ಣದ ಚಿಕ್ಕನಕಾರಿ ಸೀರೆಯಲ್ಲಿ ಗಮನ ಸೆಳೆದಿದ್ದರು. ಇದು ಉತ್ತರ ಪ್ರದೇಶದ ಲಕ್ನೋಗೆ ಸೇರಿದ ಒಂದು ವಿಶಿಷ್ಟ ಕಸೂತಿ ಕಲೆ. ಈ ಸೀರೆಯು ತನ್ನ ಹಗುರವಾದ ಬಟ್ಟೆ ಮತ್ತು ಸೂಕ್ಷ್ಮವಾದ ಕಸೂತಿ ಕೆಲಸದಿಂದ ಗುರುತಿಸಲ್ಪಟ್ಟಿದೆ.

ರೇಖಾ: ಪಾಸ್ಟೆಲ್ ಗುಲಾಬಿ ಬಣ್ಣದ ಕೈಮಗ್ಗದ ಬನಾರಸಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಬನಾರಸಿ ಸೀರೆಗಳು ವಾರಣಾಸಿಯ ಸಂಕೇತ. ಇದರ ರೇಷ್ಮೆ ಮತ್ತು ಜರಿಯ ವಿನ್ಯಾಸಗಳು ಇಡೀ ದೇಶದಲ್ಲೇ ಪ್ರಸಿದ್ಧವಾಗಿವೆ.