Johnson George: ಒಂದೇ ಸಿನಿಮಾದಲ್ಲಿ 45 ವಿಭಿನ್ನ ಪಾತ್ರದ ಮೂಲಕ ನಟಿಸಿ ಗಿನ್ನಿಸ್ ದಾಖಲೆ ಬರೆದ ಆ ನಟ ಯಾರು?
ಚಲನಚಿತ್ರೋದ್ಯಮದಲ್ಲಿ ಕಥೆಗೆ ಆಧರಿಸಿ ದ್ವಿಪಾತ್ರ ತ್ರಿಪಾತ್ರ ಮೂಲಕ ಆ ಸಿನಿಮಾ ಹಿಟ್ ಲಿಸ್ಟ್ ಸೇರಿದ್ದನ್ನು ನಾವು ಕಂಡಿದ್ದೇವೆ. ನಟ ಕಮಲ್ ಹಾಸನ್ ಕೂಡ ದಶಾವತಾರಂ ಸಿನೆಮಾದಲ್ಲಿ 10 ಪಾತ್ರವನ್ನು ಒಬ್ಬರೇ ನಿಭಾಯಿಸಿದ್ದರು. ಈ ಮೂಲಕ ಒಂದೇ ಚಿತ್ರದಲ್ಲಿ ಅತೀ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ ದಾಖಲೆಯನ್ನು ಅವರು ಮಾಡಿದ್ದರು. ಆದರೆ ಇವರನ್ನು ಮೀರಿಸಿ ಒಂದೇ ಸಿನಿ ಮಾದಲ್ಲಿ ಬರೋಬ್ಬರಿ 45 ವಿಭಿನ್ನ ಪಾತ್ರ ಅಭಿನಯಿಸಿ ಗಿನ್ನೆಸ್ ದಾಖಲೆಯನ್ನು ಮಾಡಿದ್ದಾರೆ ಎಂದರೆ ನಿಮಗೂ ಆಶ್ಚರ್ಯ ವಾಗಬಹುದು. ಹಾಗಾದರೆ ಆ ನಟ ಯಾರು?, ಆ ಸಿನಿಮಾ ಯಾವುದು?..



ನಟ ಕಮಲ್ ಹಾಸನ್ ಅವರು 1990ರಲ್ಲಿ ಮೈಕಲ್ ಮದನ್ ಕಾಮರಾಜನ್ ಎಂಬ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಮಿಂಚಿದ್ದರು. ಬಳಿಕ 2008ರಲ್ಲಿ ದಶಾವತಾರಂ ಸಿನಿಮಾ ತೆರೆಕಂಡಿದ್ದು ಇದರಲ್ಲಿ ಅವರು 10 ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಎರಡೂ ಚಿತ್ರಗಳಲ್ಲಿ ಅವರ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದು, ವ್ಯಾಪಕ ಮೆಚ್ಚುಗೆಯನ್ನು ಕೂಡ ಪಡೆದಿತ್ತು.

ದಶಾವತಾರಂ ಸಿನಿಮಾದಲ್ಲಿ 12 ನೇ ಶತಮಾನದ ತತ್ವಜ್ಞಾನಿ ರಾಮಾನುಜ, ರಾ ಏಜೆಂಟ್ ಬಲರಾಮ್ ನಾಯ್ಡು, ಪಂಜಾಬಿ ಗಾಯಕ ಅವತಾರ್ ಸಿಂಗ್, ಖಳನಾಯಕ ಕ್ರಿಶ್ಚಿಯನ್ ಫ್ಲೆಚರ್ ಮತ್ತು ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಸೇರಿದಂತೆ ವಿವಿಧ ರೀತಿಯ ವ್ಯಕ್ತಿಗಳ ಪಾತ್ರಕ್ಕೆ ನಟ ಕಮಲ್ ಹಾಸನ್ ಜೀವತುಂಬಿದ್ದರು. 12 ನೇ ಶತಮಾನದ ಕಥೆ ಯನ್ನಾಧರಿಸಿ ಈ ಚಿತ್ರಕಥೆ ರೂಪುಗೊಂಡಿದ್ದು ಆ ಕಾಲದ ಮುಖ್ಯ ಕಥಾ ವಿಚಾರಗಳು ಈ ಸಿನಿಮಾದಲ್ಲಿ ಹೈಲೈಟ್ ಆಗಿತ್ತು.

ಕಮಲ್ ಹಾಸನ್ ದಶಾವತಾರಂ ಸಿನಿಮಾ ತೆರೆ ಕಂಡ 10ವರ್ಷದ ಬಳಿಕ ಮಲಯಾಳಂ ನಟ ಜಾನ್ಸನ್ ಜಾರ್ಜ್ ಕೂಡ ಒಂದೇ ಚಿತ್ರದಲ್ಲಿ ಅತೀ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದ್ದರು. ವಿ.ಆರ್. ಉನ್ನಿ ಕೃಷ್ಣನ್ ನಿರ್ದೇಶನದಲ್ಲಿ ಆರನು ನಿಜಾನ್ ಎಂಬ ಮಲಯಾಳಂ ಚಿತ್ರದಲ್ಲಿ 45 ಪಾತ್ರಗಳನ್ನು ನಿರ್ವಹಿಸಿ ಇವರು ಮೆಚ್ಚುಗೆ ಗಳಿಸಿದ್ದರು.

ಮಾರ್ಚ್ 9, 2018 ರಂದು ಆರನು ನಿಜಾನ್ ಎಂಬ ಮಲಯಾಳಂ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ತೆರೆಕಂಡ ಆರಂಭದಲ್ಲಿ ಅಷ್ಟಾಗಿ ಪ್ರೇಕ್ಷಕರ ಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದರೆ ಒಂದೇ ಚಿತ್ರದಲ್ಲಿ ಅತೀ ಕಡಿಮೆ ಸಮಯದಲ್ಲಿ 45 ವಿಭಿನ್ನ ಪಾತ್ರ ನಿರ್ವಹಿಸಿದ್ದಕ್ಕೆ ಈ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿದೆ. ಹೀಗಾಗಿ ಸಿನಿಮಾ ನೋಡುಗರ ಸಂಖ್ಯೆ ಕೂಡ ಹೆಚ್ಚಾಗುವಂತಾಯಿತು.

ಜಾನ್ಸನ್ ಜಾರ್ಜ್ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಹಾತ್ಮ ಗಾಂಧಿ, ಯೇಸುಕ್ರಿಸ್ತ, ಸ್ವಾಮಿ ವಿವೇಕಾನಂದ ಮತ್ತು ಲಿಯೊನಾರ್ಡೊ ಡಾ ವಿನ್ಸಿ ಸೇರಿದಂತೆ ವೈವಿಧ್ಯಮಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಗಳ ಪಾತ್ರಕ್ಕೆ ನಟ ಜಾನ್ಸನ್ ಜಾರ್ಜ್ ಜೀವ ತುಂಬಿದ್ದಾರೆ. 1 ಗಂಟೆ 47 ನಿಮಿಷಗಳ ಈ ಚಿತ್ರದಲ್ಲಿ ಅನೇಕ ಕಥಾ ವಸ್ತು ಗಳು ಇವೆ. ಜಾನ್ಸನ್ ಜಾರ್ಜ್ ಅವರ ವಿಶೇಷ ಅಭಿನಯವನ್ನು ಗಿನ್ನೆಸ್ ವಿಶ್ವ ದಾಖಲೆಯ ಸಂಸ್ಥೆ ಅಧಿಕೃತವಾಗಿ ಗುರುತಿಸಿದ್ದು ಹೆಮ್ಮೆ ತಂದು ಕೊಟ್ಟ ವಿಚಾರವಾಗಿದೆ.