ಸಂಗೀತ ಲೋಕದ ದಿಗ್ಗಜೆ ಆಶಾ ಭೋಸ್ಲೆ ವೈಯಕ್ತಿಕ ಜೀವನದ ಹಿಂದಿದೆ ರೋಚಕ ಕಥೆ!
Asha Bhosle: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ನಿಧನರಾದರು. ಅನಾರೋಗ್ಯದಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಇಂದು ಫಲಕಾರಿಯಾಗದೇ ಕೊನೆಯುಸಿ ರೆಳೆದಿದ್ದಾರೆ. ಸದ್ಯ ಅವರ ವೈಯಕ್ತಿಕ ಜೀವನದ ಹಲವು ಕುತೂಹಲಕಾರಿ ಹಲವು ವಿಚಾರಗಳು ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ -
ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಶಾ ಭೋಸ್ಲೆ ಸೆಪ್ಟೆಂಬರ್ 8, 1933 ರಂದು ಈಗ ಮಹಾರಾಷ್ಟ್ರದಲ್ಲಿರುವ ಸಾಂಗ್ಲಿಯಲ್ಲಿ ಜನಿಸಿದ್ದು ಅವರ ನಿಜವಾದ ಹೆಸರು ಆಶಾ ಮಂಗೇಶ್ಕರ್. ಅವರು ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ ಆಗಿದ್ದಾರೆ.
1933 ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ್ದ ಆಶಾ ಅವರು ಸಂಗೀತ ಅಭ್ಯಾಸದ ನಂತರ 1943 ರಿಂದ ಹಿನ್ನೆಲೆ ಗಾಯನ ವೃತ್ತಿಗೆ ಸೇರಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ ಅವರು 12 ಸಾವಿರ ಗೀತೆಗಳನ್ನು ಹಾಡಿದ್ದಾರೆ.
ಗಾಯನದ ಜೊತೆ ಉದ್ಯಮಿಯಾಗಿ, ಸಾಮಾಜಿಕ ಕಾರ್ಯಕರ್ತೆ, ನಟಿ, ರಿಯಾಲಿಟಿ ಶೊ ತೀರ್ಪುಗಾರರಾಗಿ ಕೂಡ ಆಶಾ ಅವರು ಹೆಸರು ಮಾಡಿದ್ದಾರೆ. ಪದ್ಮವಿಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಸೇರಿದಂತೆ ಅನೇಕ ಉನ್ನತ ಪ್ರಶಸ್ತಿಗಳು ಆಶಾ ಭೋಸ್ಲೆ ಅವರಿಗೆ ಸಂದಿವೆ.
1943 ರಲ್ಲಿ, 10 ನೇ ವಯಸ್ಸಿನಲ್ಲಿ, ಆಶಾ ಭೋಸ್ಲೆ ತಮ್ಮ ಮೊದಲ ಹಾಡು 'ಚಲ ಚಲಾ ನವ್ ಬಾಲಾ' ಅನ್ನು ಹಾಡಿದ್ದಾರೆ. ಇಬ್ಬರೂ ಸಹೋದರಿಯರಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ತಮ್ಮ ಕುಟುಂಬವನ್ನು ಪೋಷಿಸಲು ಹಾಡಲು ಪ್ರಾರಂಭಿಸಿದರು. 1949 ರಲ್ಲಿ, 16 ನೇ ವಯಸ್ಸಿನಲ್ಲಿ, ಆಶಾ ಭೋಸ್ಲೆ ರಾತ್ ಕಿ ರಾಣಿ ಚಿತ್ರಕ್ಕಾಗಿ ಮೊದಲ ಬಾರಿಗೆ ಹಾಡಿದ್ದಾರೆ.
20 ಕ್ಕೂ ಭಾಷೆಗಳಲ್ಲಿ 12,000 ಕ್ಕೂ ಹೆಚ್ಚು ಹಾಡುಗಳೊಂದಿಗೆ, ಹಿನ್ನೆಲೆ ಗಾಯಕರಿಂದ ಅತಿ ಹೆಚ್ಚು ಸ್ಟುಡಿಯೋ ಟ್ರ್ಯಾಕ್ಗಳನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ಅವರು ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದ್ದಾರೆ. 2011 ರಲ್ಲಿ, ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಬಿಬಿಸಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಆಶಾ ಭೋಸ್ಲೆ 16 ನೇ ವಯಸ್ಸಿನಲ್ಲಿಯೇ ವಿವಾಹವಾಗಿದ್ದು ಅವರು ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಗಣಪತ್ರಾವ್ ಭೋಸ್ಲೆ ಅವರನ್ನು ವಿವಾಹವಾದರು. ಗಣಪತ್ರಾವ್ ಅವರು ಲತಾ ಮಂಗೇಶ್ಕರ್ ಅವರ ಮ್ಯಾನೇಜರ್ ಆಗಿದ್ದರು ಮತ್ತು ಇದು ಸಹೋದರಿಯರ ನಡುವೆ ಬಿರುಕು ಉಂಟುಮಾಡಿತ್ತು.
ಆಶಾ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಗಣಪತ್ರಾವ್ ಆಶಾ ಹಾಡುವಿಕೆಯನ್ನು ವಿರೋಧಿಸಿದ್ದರಿಂದ 1960 ರಲ್ಲಿ ಬೇರ್ಪಟ್ಟರು. ಆಶಾ ಜಿ ಅವರ ಮಗಳು ವರ್ಷಾ 56 ನೇ ವಯಸ್ಸಿನಲ್ಲಿ ಖಿನ್ನತೆಯಿಂದ ಬಳಲುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವರ ಕಿರಿಯ ಮಗ ಹೇಮಂತ್ 2015 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು.
ನಂತರ ಗಾಯಕಿ ಪ್ರಸಿದ್ಧ ಸಂಗೀತ ಸಂಯೋಜಕ ಆರ್ ಡಿ ಬರ್ಮನ್ ಅವರನ್ನು ವಿವಾಹವಾದರು. ಪಂಚಮ್ ದಾ 1980 ರಲ್ಲಿ ಆಶಾ ಜಿ ಗಿಂತ 6 ವರ್ಷ ಕಿರಿಯರು ಆಗಿದ್ದರು.