Star Fashion 2026: ಕೇಪ್ ಗೌನ್ ಸ್ಟೈಲಿಂಗ್ ಪ್ರಿಯರಿಗೆ 5 ಟಿಪ್ಸ್
ನಟಿ ಕರಿಷ್ಮಾ ಕಪೂರ್ ಧರಿಸಿದ್ಧ ಗ್ರ್ಯಾಂಡ್ ಲುಕ್ ನೀಡುವ ಕೇಪ್ ಗೌನ್ ಫ್ಯಾಷನ್ ಪ್ರಿಯರ ಮನ ಗೆದ್ದಿದೆ. ಎಂತಹವರನ್ನು ಅಂದವಾಗಿ ಬಿಂಬಿಸುವ ಈ ಕೇಪ್ ಗೌನ್ಗಳನ್ನು ಆಯ್ಕೆ ಮಾಡುವುದು ಹೇಗೆ? ಸೆಲೆಬ್ರೆಟಿಯಂತೆ ಕಾಣಿಸಲು ಯಾವ ರೀತಿಯ ಸ್ಟೈಲಿಂಗ್ ಮಾಡಿದರೇ ಚೆನ್ನ? ಎಂಬುದರ ಕುರಿತಂತೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
ಚಿತ್ರಗಳು: ಕರಿಷ್ಮಾ ಕಪೂರ್, ನಟಿ -
ನಟಿ ಕರಿಷ್ಮಾ ಕಪೂರ್ ಧರಿಸಿದ್ಧ ಕೇಪ್ ಗೌನ್ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಎಂತಹವರನ್ನು ಅಂದವಾಗಿ ಬಿಂಬಿಸುವ ಈ ಕೇಪ್ ಗೌನ್ಗಳನ್ನು ಆಯ್ಕೆ ಮಾಡುವುದು ಹೇಗೆ? ಸೆಲೆಬ್ರೆಟಿಯಂತೆ ಕಾಣಿಸಲು ಯಾವ ರೀತಿಯ ಸ್ಟೈಲಿಂಗ್ ಮಾಡಿದರೇ ಚೆನ್ನ? ಎಂಬುದರ ಕುರಿತಂತೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
ಕೇಪ್ ಗೌನ್ ಸೆಲೆಕ್ಷನ್
ನೀವು ಆಯ್ಕೆ ಮಾಡಬೇಕಾಗಿರುವ ಕೇಪ್ ಗೌನ್ ವಿನ್ಯಾಸ ಹಾಗೂ ಕಲರ್ ಟ್ರೆಂಡಿಯಾಗಿರಬೇಕು. ಅಷ್ಟು ಮಾತ್ರವಲ್ಲ, ಕೇಪ್ ವಿನ್ಯಾಸ ವಾಟರ್ ಫಾಲ್ ಡಿಸೈನ್ ಹೊಂದಿರಬೇಕು. ಇದು ಈ ಸೀಸನ್ನಲ್ಲಿ ಟ್ರೆಂಡಿಯಾಗಿದೆ.
ಸೆಲೆಬ್ರೆಟಿ ಲುಕ್ಗೆ ಸಾಥ್ ನೀಡುವ ಕೇಪ್ ಗೌನ್
ಇವು ರಾಯಲ್ ಲುಕ್ ನೀಡುವ ಕಾರಣದಿಂದಾಗಿ ಇತ್ತೀಚೆಗೆ ಸಾಕಷ್ಟು ಸೆಲೆಬ್ರೆಟಿಗಳು ಈ ಶೈಲಿಯ ಗೌನ್ಗಳನ್ನು ಧರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಕರಿಷ್ಮಾ ಧರಿಸಿದ್ಧ ಡಿಸೈನರ್ ಕೇಪ್ ಗೌನ್ ಈಗಾಗಲೇ ಸಾಕಷ್ಟು ಡಿಮ್ಯಾಂಡ್ ಸೃಷ್ಟಿಸಿಕೊಂಡಿದೆ. ಹಾಗಾಗಿ ಈ ಡಿಸೈನ್ನವನ್ನೇ ಆಯ್ಕೆ ಮಾಡಿ, ಧರಿಸಿ.
ಗ್ಲಾಮರಸ್ ಡಿಸೈನ್ ಕೇಪ್ ಗೌನ್ ಆಯ್ಕೆ
ಕೇಪ್ ಗೌನ್ ಗ್ಲಾಮರಸ್ ಆಗಿ ಕಾಣಿಸಬೇಕೆಂದಲ್ಲಿ ಆದಷ್ಟೂ ಡಿಸೈನರ್ನದ್ದನ್ನು ಸೆಲೆಕ್ಟ್ ಮಾಡಿ ಧರಿಸಿ. ನೆಕ್ಲೈನ್ಗೆ ಪ್ರಾಮುಖ್ಯತೆ ನೀಡಿ.
ಸಾಲಿಡ್ ಕಲರ್ ಅಥವಾ ಸೇಮ್ ಕಲರ್ ಇರಲಿ
ಯಾವುದೇ ಕಾರಣಕ್ಕೂ ಕೇಪ್ ಗೌನ್ಗಳು ಡಿಫರೆಂಟ್ ಕಲರ್ ಹೊಂದಿರಬಾರದು. ಒಂದೇ ಬಣ್ಣದ್ದವಾಗಿರಬೇಕು. ಆಗಷ್ಟೇ ಇವು ಅತ್ಯಾಕರ್ಷಕವಾಗಿ ಕಾಣಿಸುತ್ತವೆ.
ಗೋಲ್ಡನ್ ಹ್ಯಾಂಡ್ವರ್ಕ್ ಎಂಬ್ರಾಯ್ಡರಿ ಇರಲಿ
ಆದಷ್ಟೂ ಗೋಲ್ಡನ್ ಇಲ್ಲವೇ ಸಿಲ್ವರ್ ಹ್ಯಾಂಡ್ವರ್ಕ್ ಎಂಬ್ರಾಯ್ಡರಿ ಇರುವಂತಹ ಕೇಪ್ ಗೌನ್ ಕೊಳ್ಳಿ. ಇವು ನೋಡಲು ರಾಯಲ್ ಇಮೇಜ್ ಸೃಷ್ಟಿಸುತ್ತವೆ.