Star Fashion 2026: ಮನಸೂರೆಗೊಂಡ ಚಿತ್ರಾಂಗದ ಸಿಂಗ್ ಬಳುಕಾಡುವ ಸೀರೆ!
Chitrangada Singh: ನಟಿ ಚಿತ್ರಾಂಗದ ಸಿಂಗ್ ಇವೆಂಟ್ವೊಂದರಲ್ಲಿ ಬಳುಕಾಡುವ ಬಳ್ಳಿಯಂತೆ ಕಾಣಿಸಿಕೊಂಡಿದ್ದಾರೆ. ಅವರು ಉಟ್ಟ ಸಾಫ್ಟ್ ಸೀರೆ ಇದೀಗ ಕಾರ್ಪೋರೇಟ್ ಮಹಿಳೆಯರನ್ನು ಸೆಳೆದಿದೆ. ಇದ್ಯಾವ ಬಗೆಯ ಸೀರೆ? ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಚಿತ್ರಾಂಗದ, ಬಾಲಿವುಡ್ ನಟಿ -
ನಟಿ ಚಿತ್ರಾಂಗದ ಸಿಂಗ್ ಸಾಫ್ಟ್ ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಹೆಜ್ಜೆ ಇಟ್ಟರೇ ಸಾಕು ಬಳುಕಾಡುವಂತಹ ಸೀರೆಯಲ್ಲಿ ಅವರು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಸೆಳೆದಿದೆ.
ಚಿತ್ರಾಂಗದ ಫ್ಯಾಷನ್ ಲೈಫ್
ಅಂದಹಾಗೆ, ಚಿತ್ರಾಂಗದ ಮೊದಲಿನಿಂದಲೂ ಫ್ಯಾಷನೆಬಲ್ ನಟಿ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರೂ ಎಲ್ಲದರಲ್ಲೂ ಗುರುತಿಸಿಕೊಂಡಂತಹ ನಟಿ. ಸಿನಿಮಾಗಳಿಗಿಂತ ಹೆಚ್ಚಾಗಿ ಫ್ಯಾಷನ್ ಇವೆಂಟ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಚಿತ್ರವೊಂದರಲ್ಲಿ ಸಲ್ಮಾನ್ ಖಾನ್ ಜತೆಗೂ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಾಂಗದ ಉಟ್ಟ ಸೀರೆಯ ಜಾದೂ
ಚಿತ್ರಾಂಗದ ಉಟ್ಟ ಸೀರೆ ಅಂತಹ ಹೆವ್ವಿ ಡಿಸೈನ್ನದ್ದಲ್ಲ! ಬದಲಿಗೆ ಸ್ಯಾಟಿನ್ನಂತೆ ಕಾಣಿಸುವ ಸಿಲ್ಕ್ನದ್ದು. ಪರ್ಲ್ ಹಾಗೂ ಗೋಲ್ಡನ್ ಬೀಡ್ಸ್ನ ಲೇಸ್ ಬಾರ್ಡರ್ನಿಂದ ವಿನ್ಯಾಸಗೊಳಿಸಲಾಗಿದೆ.
ತಿಳಿ ವರ್ಣದ ಈ ಸೀರೆ ಪಾಸ್ಟೆಲ್ ತಿಳಿ ವರ್ಣದ್ದಾಗಿದೆ. ಸಾಫ್ಟ್ ಫ್ಯಾಬ್ರಿಕ್ ಆಗಿರುವುದರಿಂದ ಅವರ ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಫ್ಲೋ ಆಗಿದೆ. ಹಾಗಾಗಿ ಅವರ ಲುಕ್ ಗ್ಲಾಮರಸ್ ಆಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಹೈಲೈಟಾದ ಸೀರೆಯ ಬ್ಲೌಸ್
ಇಡೀ ಸೀರೆಯನ್ನು ಚಿತ್ರಾಂಗದ ಧರಿಸಿದ ಬ್ಲೌಸ್ ಹೈ ಲೈಟ್ ಮಾಡಿದೆ. ಹಾಲ್ಟರ್ ನೆಕ್ನ ಈ ಬ್ಲೌಸ್ ವೆಸ್ಟರ್ನ್ ಟಾಪ್ ಅಥವಾ ಹಾಲ್ಟರ್ ನೆಕ್ಲೈನ್ನ ಬಿಕಿನಿ ಬ್ಲೌಸನ್ನು ನೆನಪಿಸುವಂತಿದೆ ಎಂದಿದ್ದಾರೆ ಫ್ಯಾಷನ್ ಎಕ್ಸ್ಪರ್ಟ್ಸ್.