Summer Fashion 2026: ಜೆನ್ ಜಿ ಯುವತಿಯರ ಮೆಚ್ಚುಗೆ ಪಡೆದ ಕಾರ್ಸೆಟ್ ಸೀರೆ ಬ್ಲೌಸ್
ನೋಡಲು ಗ್ಲಾಮರಸ್ ಲುಕ್ ನೀಡುವ ಕಾರ್ಸೆಟ್ ಸೀರೆ ಬ್ಲೌಸ್ಗಳು ಅಲ್ಟ್ರಾ ಮಾಡರ್ನ್ ಜೆನ್ ಜಿ ಯುವತಿಯರನ್ನು ಸಿಂಗರಿಸುತ್ತಿವೆ. ಇಂಡೋ-ವೆಸ್ಟರ್ನ್ ಸ್ಟೈಲಿಂಗ್ನಲ್ಲಿ ಇವು ಸೀರೆ ಪ್ರಿಯ ಜೆನ್ ಜಿ ಹುಡುಗಿಯರನ್ನು ಆವರಿಸಿಕೊಂಡಿವೆ. ಇದ್ಯಾವ ಬಗೆಯ ಬ್ಲೌಸ್? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಐಶ್ವರ್ಯಾ ಮೆನನ್, ನಟಿ -
ಗ್ಲಾಮರಸ್ ಲುಕ್ ನೀಡುವ ಕಾರ್ಸೆಟ್ ಸೀರೆ ಬ್ಲೌಸ್ಗಳು ಇದೀಗ ಈ ಜನರೇಷನ್ನ ಅಲ್ಟ್ರಾ ಮಾಡರ್ನ್ ಯುವತಿಯರನ್ನು ಬೋಲ್ಡಾಗಿ ಸಿಂಗರಿಸುತ್ತಿವೆ. ಹೌದು, ಇಂಡೋ-ವೆಸ್ಟರ್ನ್ ಸ್ಟೈಲಿಂಗ್ನಲ್ಲಿ ಇವು ಸೀರೆ ಪ್ರಿಯ ಜೆನ್ ಜಿ ಹುಡುಗಿಯರನ್ನು ಆವರಿಸಿಕೊಂಡಿವೆ.
ಟ್ರೆಂಡಿಯಾದ ಐಶ್ವರ್ಯಾ ಮೆನನ್ ಧರಿಸಿದ ಕಾರ್ಸೆಟ್ ಬ್ಲೌಸ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಐಶ್ವರ್ಯ ಮೆನನ್ ಧರಿಸಿದ್ದ ಕಾರ್ಸೆಟ್ ಸೀರೆ ಬ್ಲೌಸ್ ಸಖತ್ ವೈರಲ್ ಆಗಿತ್ತು. ಜತೆಗೆ ಆಕೆಯ ಈ ಗ್ಲಾಮರಸ್ ಬ್ಲೌಸ್ ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸಿ, ಟ್ರೆಂಡಿಯಾಗಿತ್ತು.
ಏನಿದು ಸೀರೆಯ ಕಾರ್ಸೆಟ್ ಬ್ಲೌಸ್?
ಅಂದ ಹಾಗೆ, ಕಾರ್ಸೆಟ್ ಬ್ಲೌಸ್ ನಮ್ಮ ಸಂಸ್ಕೃತಿಯದಲ್ಲ! ಇದು ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ದೇಹದ ಮೇಲ್ಭಾಗವನ್ನು ಟೈಟಾಗಿ ಆವರಿಸಿಕೊಂಡು ಫಿಟ್ ಆಗಿ ಬಿಂಬಿಸಲು ಬಳಸಲಾಗುತ್ತಿದ್ದ ಒಂದು ಬಗೆಯ ಡ್ರೆಸ್ ಡಿಸೈನ್ ಎನ್ನಬಹುದು. ಅದು ಗೌನ್ ಆಗಬಹುದು, ಅಥವಾ ಫ್ರಾಕ್ ಆಗಬಹುದು, ಇಲ್ಲವೇ ಪ್ರತ್ಯೇಕ ಶೋಲ್ಡರ್ಲೆಸ್ ಕಾರ್ಸೆಟ್ ಟಾಪ್ ಆಗಬಹುದು. ಸಿಂಪಲ್ ಆಗಿ ಹೇಳುವುದಾದಲ್ಲಿ ವೆಸ್ಟರ್ನ್ ಡಿಸೈನ್ನಿಂದ ಸ್ಪೂರ್ತಿಗೊಂಡು ನಮ್ಮತನಕ್ಕೆ ಮ್ಯಾಚ್ ಆಗುವಂತೆ ಸಿದ್ಧಪಡಿಸಲಾದ ಕಾರ್ಸೆಟ್ ಬ್ಲೌಸ್ ಇದು. ಮೊದಲೇ ಹೇಳಿದಂತೆ ಕೆಲವಕ್ಕೆ ಸ್ಟ್ರಾಪ್ ಇರುತ್ತದೆ. ಇನ್ನು ಕೆಲವು ಗ್ಲಾಮರ್ ಹೆಚ್ಚಿಸಲು ಶೋಲ್ಟರ್ಲೆಸ್ ಆಗಿರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಸಾಮಾನ್ಯ ಹುಡುಗಿಯರನ್ನು ತಲುಪಿದ ಕಾರ್ಸೆಟ್ ಬ್ಲೌಸ್
ಹೌದು, ಇತ್ತೀಚೆಗೆ ಬಾಲಿವುಡ್ ಸೆಲೆಬ್ರೆಟಿಗಳಿಂದ ಸ್ಪೂರ್ತಿಗೊಂಡ ಕಾರ್ಸೆಟ್ ಬ್ಲೌಸ್ಗಳು ಇದೀಗ ಸಾಮಾನ್ಯ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿವೆ.
ವೈವಿಧ್ಯಮಯ ಕಾನ್ಸೆಪ್ಟ್ನಲ್ಲಿ ಕಾರ್ಸೆಟ್ ಬ್ಲೌಸ್
ಶಿಮ್ಮರ್, ಹ್ಯಾಂಡ್ವರ್ಕ್, ಲೆದರ್, ಕಾಟನ್ ಹೀಗೆ ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಫ್ಯಾಬ್ರಿಕ್ನಲ್ಲಿ ಇದೀಗ ಕಾರ್ಸೆಟ್ ಬ್ಲೌಸ್ಗಳು ಟ್ರೆಂಡಿಯಾಗಿವೆ. ಒಟ್ಟಾರೆ, ಜೆನ್ ಜಿ ಹುಡುಗಿಯರನ್ನು ಗ್ಲಾಮರಸ್ ಆಗಿ ಬಿಂಬಿಸುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.