Winter Fashion 2026: ಚುಮುಚುಮು ಚಳಿಗೆ ಬಂತು ವಿಂಟರ್ ಹೆಡ್ ಬ್ಯಾಂಡ್ಸ್
ಚಳಿಗಾಲದ ಫ್ಯಾಷನ್ನಲ್ಲಿಇದೀಗ ಕಿವಿಯನ್ನು ಬೆಚ್ಚಗಿಡುವ ನಾನಾ ಬಗೆಯ ಹೆಡ್ಬ್ಯಾಂಡ್ಗಳು ಟ್ರೆಂಡಿಯಾಗಿವೆ. ವುಲ್ಲನ್, ಸೆಮಿ ಸಿಲ್ಕ್, ಪ್ರಿಂಟೆಡ್ ಫ್ಯಾಬ್ರಿಕ್ನ ವೈವಿಧ್ಯಮಯ ಹೆಡ್ ಬ್ಯಾಂಡ್ಗಳು ಇಂದು ಬೇಡಿಕೆ ಸೃಷ್ಠಿಸಿಕೊಂಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.
ವಿವಿಧ ವಿನ್ಯಾಸದ ಹೆಡ್ಬ್ಯಾಂಡ್ಸ್ (ಚಿತ್ರಕೃಪೆ: ಪಿಕ್ಸೆಲ್) -
ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣುವ ಹಾಗೂ ಬೆಚ್ಚಗಿಡುವ ವಿಂಟರ್ ಹೆಡ್ ಬ್ಯಾಂಡ್ಗಳು ಇಂದು ಟ್ರೆಂಡಿಯಾಗಿವೆ.
ವೈವಿಧ್ಯಮಯ ವಿಂಟರ್ ಹೆಡ್ ಬ್ಯಾಂಡ್ಗಳು
ವುಲ್ಲನ್, ಸೆಮಿ ಸಿಲ್ಕ್, ಪ್ರಿಂಟೆಡ್ ಫ್ಯಾಬ್ರಿಕ್ನ ವೈವಿಧ್ಯಮಯ ಹೆಡ್ ಬ್ಯಾಂಡ್ಗಳು ಇಂದು ಬೇಡಿಕೆ ಸೃಷ್ಟಿಸಿಕೊಂಡಿವೆ. ಒಂದಕ್ಕಿಂತ ಒಂದು ನೋಡಲು ವಿಭಿನ್ನವಾಗಿರುವ ಇವು ಧರಿಸಿದಾಗ ಕಂಪ್ಲೀಟ್ ವಿಂಟರ್ ಲುಕ್ ಜತೆಗೆ ಗ್ಲಾಮರ್ ಟಚ್ ನೀಡುತ್ತವೆ. ಈ ಸೀಸನ್ನಲ್ಲೂ ಫ್ಯಾಷನಬಲ್ ಲುಕ್ ಕಲ್ಪಿಸುತ್ತವೆ ಎನ್ನುತ್ತಾರೆ ಡಿಸೈನರ್ಸ್.
ವುಲ್ಲನ್ ಹೆಡ್ ಬ್ಯಾಂಡ್ಸ್
ವುಲ್ಲನ್ ಹೆಡ್ ಬ್ಯಾಂಡ್ ಸೀಸನ್ಗೆ ಹೇಳಿಮಾಡಿಸಿದಂತಿದೆ. ಅದರಲ್ಲೂ ಧರಿಸಿದಾಗ ಬೆಚ್ಚನೆಯ ಅನುಭವ ನೀಡುತ್ತದೆ. ವುಲ್ಲನ್ನಲ್ಲಿ ಫ್ಲವರ್ ಡಿಸೈನ್, ಕಾಂಟ್ರಾಸ್ಟ್ ಡಿಸೈನ್ ಹೀಗೆ ನಾನಾ ಬಗೆಯವು ಲಭ್ಯ.
ಇನ್ಫೈನೈಟ್ ಹೆಡ್ ಬ್ಯಾಂಡ್ಸ್
ಇನ್ಫೈನೈಟ್ ಹೆಡ್ ಬ್ಯಾಂಡ್ಸ್ಗೆ ಕೊನೆಯೆಂಬುದಿರುವುದಿಲ್ಲ. ಯಾವುದೇ ಬಟನ್ ಇರುವುದಿಲ್ಲ. ಎಲಾಸ್ಟಿಕ್ ಫ್ಯಾಬ್ರಿಕ್ ಹೊಂದಿರುವ ಇವನ್ನು ಬಳಸುವುದು ಸುಲಭ. ಜತೆಗೆ ಇವನ್ನು ಕೇವಲ ಹೆಡ್ ಬ್ಯಾಂಡ್ನಂತೆ ಮಾತ್ರವಲ್ಲ, ನೆಕ್ ಸ್ಕಾರ್ಫ್, ಹೇರ್ ಬ್ಯಾಂಡ್ನಂತೆಯೂ ಬಳಸಬಹುದು.
ಯೂನಿಸೆಕ್ಸ್ ಬ್ಯಾಂಡ್ಸ್
ಹುಡುಗಿಯರು ಮಾತ್ರವಲ್ಲ, ಯುವಕರು ಧರಿಸಬಹುದಾದ ಸಾಕಷ್ಟು ವಿಂಟರ್ ಹೆಡ್ ಬ್ಯಾಂಡ್ಗಳು ಇಂದು ಬೇಡಿಕೆ ಹೆಚ್ಚಿಸಿಕೊಂಡಿವೆ. ಸಿಂಪಲ್ ಆಗಿದ್ದಾಗ ಮಾತ್ರ ಅದನ್ನು ಯೂನಿಸೆಕ್ಸ್ ಹೆಡ್ ಬ್ಯಾಂಡ್ ಎನ್ನಬಹುದು. ಇಲ್ಲವಾದಲ್ಲಿಅದು ಕೇವಲ ಹುಡುಗಿಯರ ಹೆಡ್ ಬ್ಯಾಂಡ್ನಂತೆ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.
ಯೂನಿಸೆಕ್ಸ್ ಹೆಡ್ ಬ್ಯಾಂಡ್ಗಳನ್ನು ಕೊಳ್ಳುವ ಮುನ್ನ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಧರಿಸಿದಾಗ ಮುಜುಗರಕ್ಕೆ ಒಳಗಾಗಬಹುದು ಎನ್ನುತ್ತಾರೆ ಮಾಡೆಲ್ ದೀಪ್ತಿ.
ಟ್ರೆಂಡಿಯಾಗಿರುವ ಹೆಡ್ ಬ್ಯಾಂಡ್ಸ್
- ಯೂನಿಸೆಕ್ಸ್ ಹೆಡ್ ಬ್ಯಾಂಡ್ಸ್ ಸದ್ಯ ಟ್ರೆಂಡಿಯಾಗಿದೆ.
- ವುಲ್ಲನ್ ಹಾಗೂ ಸೆಮಿ ಸಿಲ್ಕ್ನವು ದೊರೆಯುತ್ತಿವೆ.
- ಹೆಡ್ ಬ್ಯಾಂಡ್ ಅನ್ನು ಮಲ್ಟಿ ಪರ್ಪಸ್ ಆಗಿ ಬಳಸಬಹುದು.
- ಹೆಡ್ ಬ್ಯಾಂಡನ್ನು ನೆಕ್ ಬ್ಯಾಂಡ್ ಮತ್ತು ಕ್ಯಾಪ್ನಂತೆಯೂ ಬಳಸಬಹುದು.