ಬೆಂಗಳೂರಿನ ಕಪಾಲಿ ಟಾಕೀಸ್ ಜಾಗದಲ್ಲಿ ತಲೆ ಎತ್ತಿದ ಮಹೇಶ್ ಬಾಬು ಒಡೆತನದ AMB ಸಿನಿಮಾಸ್; ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?
AMB Cinemas Bengaluru: ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಸರಪಳಿಯಾದ ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಹೈದರಾಬಾದ್ನಲ್ಲಿ ಈಗಾಗಲೇ ಅತ್ಯುತ್ತಮ ಸಿನೆಮಾ ಅನುಭವಕ್ಕೆ ಹೆಸರಾಗಿರುವ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್, ಈಗ ಅದೇ ವೈಭವವನ್ನು ಉದ್ಯಾನ ನಗರಿ ಬೆಂಗಳೂರಿಗೂ ತರುತ್ತಿದೆ. ಈ ಮಲ್ಟಿಪ್ಲೆಕ್ಸ್ನ ಒಳಾಂಗಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ವೈಶಿಷ್ಠ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.
-
ಬೆಂಗಳೂರಿನ ಐತಿಹಾಸಿಕ ಮೆಜೆಸ್ಟಿಕ್ ಸರ್ಕಲ್ನಲ್ಲಿರುವ ಕಪಾಲಿ ಮಾಲ್ನಲ್ಲಿ ಈ ಮಲ್ಟಿಪ್ಲೆಕ್ಸ್ ತಲೆ ಎತ್ತಿದೆ.
ಈ ಸಿನಿಮಾಸ್ನ ವಿಶೇಷತೆಯನ್ನು ನೋಡುವುದಾದರೆ, ಕಪಾಲಿ ಮಾಲ್ನ ಐದು ಅಂತಸ್ತುಗಳಲ್ಲಿ ಹರಡಿಕೊಂಡಿರುವ ಈ ಮಲ್ಟಿಪ್ಲೆಕ್ಸ್ ಒಟ್ಟು ಒಂಬತ್ತು ಸ್ಕ್ರೀನ್ಗಳಿವೆ.
9ರಲ್ಲಿ 7 ಸ್ಕ್ರೀನ್ಗಳು ಬಾರ್ಕೋ ಲೇಸರ್ ಪ್ರೊಜೆಕ್ಷನ್ ಅಳವಡಿಸಲಾಗಿದೆ. ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಈ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ
6ನೇ ಸ್ಕ್ರೀನ್ ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ
ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು 'ಎಂ-ಲೌಂಜ್' ಎಂಬ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಸಿನಿಮಾ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆಯಂತೆ.
ಜನವರಿ 16ರಂದೇ ಸಿನಿಮಾ ವೀಕ್ಷಣೆ ಆರಂಭವಾಗಲಿದ್ದು, ಈಗಾಗಲೇ ಬುಕ್ ಮೈ ಶೋನಲ್ಲೂ ಟಿಕೆಟ್ ಬುಕ್ ಮಾಡಬಹುದಾಗಿದೆ
ಮೊದಲ ದಿನ 20 ಶೋಗಳು ನಡೆಯಲಿದ್ದು, ಅದರಲ್ಲಿ 6 ಶೋಗಳು ಮನ ಶಂಕರ ವರ ಪ್ರಸಾದ್ ಗಾರು ಚಿತ್ರಕ್ಕೆ ಮೀಸಲಾಗಿವೆ. ಕನ್ನಡದ ಮಾರ್ಕ್ ಮತ್ತು ಸೂರ್ಯ ಸಿನಿಮಾಗಳಿಗೆ ಮತ್ತು ತಮಿಳಿನ ಮೂರು ಸಿನಿಮಾಗಳಿಗೆ ತಲಾ ಒಂದೊಂದು ಶೋಗಳು ಸಿಕ್ಕಿವೆ. ಮಿಕ್ಕಂತೆ ತೆಲುಗು ಸಿನಿಮಾಗಳಿಗೇ ಹೆಚ್ಚಿನ ಶೋಗಳು ಸಿಕ್ಕಿವೆ.