ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಾನಹಾನಿ ಪಿತೂರಿಯಿಂದ ಖಿನ್ನತೆಯಲ್ಲಿದ್ದೇನೆ: ತೇಜ್ ಪ್ರತಾಪ್

ತೇಜ್ ಪ್ರತಾಪ್ ಯಾದವ್ ಸಂಬಂಧ ಹೊಂದಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ಸುಳ್ಳು ಎಂದು ಜೆಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ ಅವರ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಅಲ್ಲದೇ ತಾನು ಖಿನ್ನತೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.

ಖಿನ್ನತೆಯಲ್ಲಿದ್ದೇನೆ ಎಂದ ತೇಜ್ ಪ್ರತಾಪ್

ಸಂಗ್ರಹ ಚಿತ್ರ -

ಬಿಹಾರ: ನನ್ನ ವಿರುದ್ದ ಪಿತೂರಿ (conspiracy) ನಡೆಸಲಾಗುತ್ತಿದೆ. ಇದರಲ್ಲಿ ಐವರು ಜೈಚಂದ್ (Jaichands) ಗಳಾದ ಮುಖೇಶ್ ರೌಶನ್, ಸಂಜಯ್ ಯಾದವ್, ಶಕ್ತಿ ಸಿಂಗ್ ಯಾದವ್, ರಮೀಜ್ ಮತ್ತು ಸುನಿಲ್ ಸಿಂಗ್ ಸೇರಿದ್ದಾರೆ ಎಂದು ಜೆಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ (JJD chief and Lalu Prasad Yadav) ಅವರಿಂದ ದೂರವಾಗಿರುವ ತೇಜ್ ಪ್ರತಾಪ್ ಯಾದವ್ (Tej Pratap Yadav) ಹೇಳಿದರು. ಇವರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ ಅವರು, ತಾನು ಖಿನ್ನತೆಯಿಂದ ಬಳಲುತ್ತಿದ್ದು, ಕೆಲವು ತಿಂಗಳಿನಿಂದ ನಾನು ಸಂಬಂಧ ಹೊಂದಿರುವ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ತಿಳಿಸಿದರು.

ಜೆಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ ಅವರಿಂದ ದೂರವಾಗಿರುವ ತೇಜ್ ಪ್ರತಾಪ್ ಯಾದವ್ ಬಿಹಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಮಾಜಿ ಸಚಿವರಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಇವರು ಸಂಬಂಧ ಹೊಂದಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದು ಸುಳ್ಳು ಸುದ್ದಿ ಎಂದು ತಿರಸ್ಕರಿಸಿರುವ ತೇಜ್ ಪ್ರತಾಪ್ ಯಾದವ್, ಇದು ತಮ್ಮ ಮಾನಹಾನಿ ಮಾಡುವ ಪಿತೂರಿ ಎಂದು ಹೇಳಿದ್ದಾರೆ.

Bengaluru Hotels: ಇನ್ಮುಂದೆ ಹೋಟೆಲಲ್ಲಿ ಗಂಟೆಗಟ್ಟಲೆ ಮಾತಾಡ್ತಾ ಕುಳಿತಿರುವಂತಿಲ್ಲ! ಅದಕ್ಕೂ ಟೇಬಲ್‌ ಚಾರ್ಜ್!

ಇದರಲ್ಲಿ ಐವರು ಜೈಚಂದ್ ಗಳು ಸೇರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಇತ್ತೀಚೆಗೆ ನಾನು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಔತಣಕೂಟವನ್ನು ಆಯೋಜಿಸಿದ್ದೆ. ಇದು ನನ್ನ ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದ್ದು, ನನ್ನ ಪಕ್ಷದ ಭವಿಷ್ಯದ ಬಗ್ಗೆ ಎಚ್ಚರದಿಂದಿರುವಂತೆ ಮಾಡಿದೆ ಎಂದು ತಿಳಿಸಿದರು.



ಯಾದವ್ ಅವರ ಗೆಳತಿ ಎಂದು ಕರೆಯಲ್ಪಡುವ ಮಹಿಳೆಯೊಂದಿಗೆ 12 ವರ್ಷಗಳಿಂದ ಸಂಬಂಧ ಹೊಂದಿದ್ದಾರೆಂದು ಹೇಳುವ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಅವರನ್ನು ರಾಷ್ಟ್ರೀಯ ಜನತಾ ದಳದಿಂದ ಹೊರಹಾಕಲಾಯಿತು. ಇದರಲ್ಲಿ ಐವರು ಜೈಚಂದ್ ಗಳ ಕೈವಾಡವಿದ್ದು, ಅವರು ತಮ್ಮ ಪ್ರೊಫೈಲ್ ಅನ್ನು ಹ್ಯಾಕ್ ಮಾಡಿದ್ದರು ಎಂದು ಅವರು ತಿಳಿಸಿದ್ದರು.

ಡಾರ್ಕ್ ಚಾಕೊಲೇಟ್ ಇಲ್ಲ ವೈಟ್‌ ಚಾಕೋಲೇಟ್‌ ಯಾವುದು ಆರೋಗ್ಯಕ್ಕೆ ಸೂಕ್ತ?

ವದಂತಿಗಳಿಂದ ತಾನು ವಿಚಲಿತನಾಗಿದ್ದು, ಮಾನಸಿಕ ಒತ್ತಡದಿಂದ ಬಳಲುತ್ತಿದ್ದೇನೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇನೆ. ಆ ಮಹಿಳೆ ಯಾರೊಂದಿಗೆ ಸಂಬಂಧ ಹೊಂದಿದ್ದಾರೆಂದು ನನಗೆ ತಿಳಿದಿದೆ ಮತ್ತು ಮಗುವಿನ ತಂದೆ ಯಾರು ಎಂದು ಕೂಡ ಹೇಳಬಲ್ಲೆ. ಆದರೆ ಅವರ ಹೆಸರನ್ನು ನನ್ನ ಹೆಸರಿನೊಂದಿಗೆ ಜೋಡಿಸಿ ಮಾನಸಿಕ ಯಾತನೆ ಉಂಟು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.