ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Varsha Bhavisya: 2026: ಧನು ರಾಶಿಯವರ ಪ್ರೇಮ-ದಾಂಪತ್ಯ ಜೀವನದಲ್ಲಿ ಬಿರುಗಾಳಿ!

2026ರಲ್ಲಿ ಶನಿ, ಗುರು, ರಾಹು–ಕೇತುಗಳ ಗ್ರಹ ಸಂಚಾರದಿಂದ ಧನು ರಾಶಿಯವರ ಪ್ರೀತಿ–ಪ್ರೇಮ, ವ್ಯಾಪಾರ–ವ್ಯವಹಾರ ಹಾಗೂ ಕುಟುಂಬ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುವ ಸಾಧ್ಯತೆ ಇದೆ. ಹೊಸ ವರ್ಷದ ಈ ಗ್ರಹಸ್ಥಿತಿಗಳು ಧನು ರಾಶಿಯವರಿಗೆ ಸವಾಲುಗಳ ಜೊತೆಗೆ ಹೊಸ ಅವಕಾಶಗಳನ್ನೂ ತಂದೊಡ್ಡಲಿವೆ.

ಧನು ರಾಶಿಗೆ ಈ ವರ್ಷ ಎದುರಾಗಲಿದೆ ಕಷ್ಟಗಳ ಸರಮಾಲೆ

ಜೋತಿಷಿ ಹಾಗೂ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ -

Profile
Sushmitha Jain Jan 16, 2026 9:10 AM

ಬೆಂಗಳೂರು: 2026ರಲ್ಲಿ ಶನಿ, ಗುರು, ರಾಹು-ಕೇತು ಸೇರಿದಂತೆ ಅನೇಕ ಪ್ರಮುಖ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಲಿವೆ. ಗ್ರಹಗಳ ಈ ಸಂಚಾರವು ಪ್ರತಿ ರಾಶಿಚಕ್ರದ ಜನರ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ. ಈ ಹೊಸ ವರ್ಷದಲ್ಲಿ ದ್ವಾದಶ ರಾಶಿಗಳಲ್ಲಿ 9ನೇ ಸ್ಥಾನದಲ್ಲಿರುವ ಧನು ರಾಶಿಯವರ ಪ್ರೀತಿ-ಪ್ರೇಮ, ವ್ಯಾಪಾರ-ವ್ಯವಹಾರ, ಕೌಟುಂಬಿಕ ಜೀವನ ಹೇಗಿರಲಿದೆ ಎಂಬುವುದನ್ನು ತಿಳಿಯೋಣ ಬನ್ನಿ..

ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅವರ ಪ್ರಕಾರ, ಧನು ರಾಶಿಯವರಿಗೆ ಈ ವರ್ಷ ಹೇಳುವುದಾದರೆ, ಈ ವರ್ಷ ಧನು ರಾಶಿವಯರು ಶನಿಯ ಧೈಯದ ಪ್ರಭಾವದಲ್ಲಿರುತ್ತಾರೆ. ನಿಮ್ಮ ರಾಶಿ ಆಡಳಿತ ಗ್ರಹವಾದ ಗುರು, ವರ್ಷದ ಆರಂಭದಲ್ಲಿ ಏಳನೇ ಮನೆಯ ಮೂಲಕ ಸಾಗುತ್ತಾನೆ ಮತ್ತು ಶನಿಯ ನಕಾರಾತ್ಮಕ ಪರಿಣಾಮಗಳನ್ನು ತಗ್ಗಿಸಲು ಕೆಲಸ ಮಾಡುತ್ತಾನೆ. ಜನವರಿ 2026 ರಿಂದ ಪ್ರಾರಂಭಿಸಿ, ವರ್ಷಪೂರ್ತಿ ಮೀನ ರಾಶಿಯಲ್ಲಿ ಶನಿಯ ಪ್ರಭಾವದೊಂದಿಗೆ, ಜವಾಬ್ದಾರಿ ಮತ್ತು ಸ್ವಯಂ ನಿಯಂತ್ರಣದ ಪ್ರಜ್ಞೆ ಆಳವಾಗುತ್ತದೆ.

ಮಿಥುನ ರಾಶಿಯಿಂದ ಶಕ್ತಿ

ಸದ್ಯ ಗುರು ಮಿಥುನ ರಾಶಿಯಲ್ಲಿ ಸಾಗುತ್ತಿರುವುದರಿಂದ ಧನು ರಾಶಿಯವರಿಗೆ ಸದ್ಯದ ಮಟ್ಟಿಗೆ ತೊಂದರೆಗಳಿಲ್ಲ. ಮಿಥುನನೇ ಈ ರಾಶಿಯವರ ಪ್ರೇಮ, ವೈವಾಹಿಕ ಜೀವನದಲ್ಲಿ ಶಕ್ತಿ ತುಂಬಲಿದ್ದಾನೆ. ಕಾಲಾಂತರದಲ್ಲಿ ಎಲ್ಲವೂ ಬದಲಾವಣೆಯಾಗಲಿದೆ.

ಜೂನ್ 2ರಿಂದ ತಪ್ಪಲಿದೆ ಗುರುಬಲ

ಧನು ರಾಶಿಯ ಯಜಮಾನನೇ ಗುರು ಇದ್ದು, ಮಿಥನನಿಂದ ತನ್ನ ರಾಶಿ ನೋಡುತ್ತಿರುವಾಗ ಧುನು ರಾಶಿಯವರಿಗೆ ಸಂಪೂರ್ಣ ರಕ್ಷೆ ದೊರೆಯುತ್ತಿರುತ್ತದೆ. ಆದರೆ, ಜೂನ್ 2ರ ನಂತರ ಧನು ರಾಶಿಯವರಿಗೆ ಗುರುಬಲ ತಪ್ಪಲಿದ್ದು, ಕೊಂಚ ಹೊಯ್ದಾಟಗಳು ಶುರುವಾಗಲಿವೆ. ಅಕ್ಟೋಬರ್ 30ರಂದು ಭಾಗ್ಯ ಒಂಭತ್ತನೇ ಮನೆಗೆ ಚಲಿಸುವುದರಿಂದ ಈ ರಾಶಿಯವರಿಗೆ ಪುನಃ ಗುರುಬಲ ಬರಲಿದೆ.

Varsha Bhavisya 2026: ಹೊಸ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗಿದೆ ಶನಿಕಾಟ; ಇದುವೇ ನೋಡಿ ಪರಿಹಾರ

ಶನೇಶ್ಚರನಿಂದಾಗಿ ಸುಖವಿಲ್ಲ

ಜೂನ್ 2ರವರೆಗೂ ಈ ರಾಶಿಯವರಿಗೆ ಗುರುಬಲ ಇರುವುದರಿಂದ ಯಾವುದೇ ತೊಂದರೆಗಳಿಲ್ಲ. ಆದರೆ ನಂತರ ನಾಲ್ಕನೇ ಮನೆಯಲ್ಲಿ ಶನೇಶ್ಚರ ಚಲಿಸುವುದರಿಂದ ಶನಿಯು ಕಾಟ ನೀಡದಿದ್ದರೂ, ಸುಖವನ್ನು ಹಾಳು ಮಾಡುತ್ತಾನೆ. ಜೂನ್ ನಂತರದ ದಿನಗಳು ಪರಾಭವ ಸಂವತ್ಸರದ ದಿನಗಳೂ ಆಗಿರುವುದರಿಂದ, ಪರಾಭವ ಸಂವತ್ಸರದ ಯಜಮಾನನೂ ಗುರು ಆಗಿರುವುದರಿಂದ, ಗುರುವಿನ ನಾಯಕತ್ವದ ಎಲ್ಲ ವಿಚಾರಗಳನ್ನು ಹಾಳು ಮಾಡಲು ಶನೇಶ್ಚರ ಮುಂದಾಗುವ ಸಾಧ್ಯತೆಗಳಿವೆ.

ಸರ್ಪ ಶ್ರೀರಕ್ಷೆ

ಸರ್ಪವು ಕುಂಭ ರಾಶಿಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಸಾಕಷ್ಟು ತೊಂದರೆಗಳ ನಡುವೆಯೂ ಸರ್ಪ ವಿಷ್ಣು ಸ್ವರೂಪದಲ್ಲಿ ಶ್ರೀರಕ್ಷೆ ನೀಡಲಿದ್ದಾನೆ. ಗುರುಬಲ ಇಲ್ಲದೇ ಶನೇಶ್ವರನಿಂದ ವ್ಯವಹಾರ, ಪ್ರೇಮ, ದಾಂಪತ್ಯ ಜೀವನದಲ್ಲಿ ಹಲವಾರು ತೊಂದರೆಗಳು ಎದುರಾದರೂ, ಸರ್ಪದ ಶ್ರೀರಕ್ಷೆಯಿಂದಾಗಿ ಪರಿಹಾರವಾಗಲಿವೆ. ಆದರೂ, ಧನು ರಾಶಿಯವರು ಪ್ರೇಮ ಹಾಗೂ ಮದುವೆಯ ವಿಚಾರದಲ್ಲಿ ಎಚ್ಚರವಹಿಸುವ ಅಗತ್ಯವಿದೆ.

ಈ ಧನು ರಾಶಿಯವರು 'ವಿಷ್ಣುಮಾಯಾ ಚಕ್ರ' ಎಂಬ ತಾಯತವನ್ನು ಈ ವರ್ಷ ಧರಿಸುವುದರಿಂದ ಎದುರಾಗಬುದಾದಂತ ಹಲವಾರು ತೊಂದರೆಗಳು ಪರಿಹಾರವಾಗಲಿವೆ ಎಂದು ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.