Horoscope Today January 16th: ಇಂದು ಈ ರಾಶಿಯವರಿಗೆ ಹಿಂದೆಂದೂ ಕಾಣದಷ್ಟು ಅದೃಷ್ಟ
ನಿತ್ಯ ಭವಿಷ್ಯ ಜನವರಿ 16, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಹಿಮದೃತು ಪೌಸ ಮಾಸೆ, ಕೃಷ್ಣ ಪಕ್ಷದ, ಮೂಲ ನಕ್ಷತ್ರದ ಜನವರಿ 16ನೇ ತಾರೀಖಿನ ಈ ದಿನ ಕುಜ ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಹಾಗಾದರೆ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು, ಜ. 16: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಕುಜ ಮಕರ ರಾಶಿಗೆ ಪ್ರವೇಶ ಮಾಡ್ತಾ ಇದ್ದಾನೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಹಿಂದಿನ ಎರಡು ವರ್ಷದಲ್ಲಿ ಕಾಣದಂತಹ ಯಶಸ್ಸು ಸಿಗುತ್ತದೆ. ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಅದೇ ರೀತಿ ಎಲ್ಲರಿಂದಲೂ ಗೌರವ ಪ್ರಾಪ್ತಿಯಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಆದ್ದರಿಂದ ನಿಮ್ಮ ಅದೃಷ್ಟ ಪರೀಕ್ಷೆ ನಡೆಯಲಿದ್ದು, ಈ ಬಗ್ಗೆ ಜಾಗೃತರಾಗಿರಿ. ಇಂದು ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಬೇಡ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮನಸ್ಸಿಗೆ ಕ್ಷೇಷದ ದಿನವಾಗಲಿದೆ. ಹಾಗಾಗಿ ಮನಸ್ಸಿನ ವ್ಯಥೆಯನ್ನು ನೀವು ಕಡಿಮೆ ಮಾಡಬೇಕಾಗುತ್ತದೆ. ಪ್ರೀತಿ ಪಾತ್ರರಿಂದಲೇ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಆತಂಕ, ಆಲೋಚನೆ ಹೆಚ್ಚಾಗಿ ಇದ್ದು ಧ್ಯಾನಾದಿಗಳನ್ನು ಮಾಡಿ ಸಮಯ ಕಳೆಯಬೇಕು.
ಕಟಕ ರಾಶಿ: ಕಟಕ ರಾಶಿಯವರಿಗೆ ಕಷ್ಟ ಗೋಚರವಾಗಲಿದೆ. ಮುಖ್ಯವಾದ ಸಂಬಂಧದಲ್ಲಿ ಒಡಕು ಕಾಣುವ ಸಾಧ್ಯತೆ ಇದೆ. ಉದ್ಯಮಿಗಳು, ಉದ್ಯೋಗಿಗಳಿಗೆ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಿಶ್ರ ಫಲ ಕಂಡು ಬರಲಿದೆ. ಶತ್ರುಗಳು ಮಿತ್ರರಾಗುವ ಸಾಧ್ಯತೆ ಇದ್ದರೂ ಒಡಕು ಉಂಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ನೀವು ಪರಾಕ್ರಮದಿಂದ ಏನೇ ಮಾಡಿದರೂ ಕೆಲವೊಮ್ಮೆ ಜಯ ಆದರೂ ಅಪಜಯವಾಗುತ್ತದೆ. ಆರೋಗ್ಯ ಬಗ್ಗೆಯೂ ಜಾಗೃತಿ ವಹಿಸಬೇಕಾಗುತ್ತದೆ.
ಆಪತ್ತು ತರಬಹುದು ಅಡುಗೆ ಮನೆಯಲ್ಲಿರುವ ತೆರೆದ ಕಸದ ಬುಟ್ಟಿ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಹಣಕಾಸಿನ ವಿಚಾರ. ವ್ಯವಹಾರದಲ್ಲಿ ಖರ್ಚು ವೆಚ್ಚಗಳು ಜಾಸ್ತಿಯಾಗಬಹುದು. ಹಾಗಾಗಿ ತಾಳ್ಮೆಯಿಂದ ಇರುವುದು ಮುಖ್ಯ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟ ಗೋಚರವಾಗಲಿದೆ. ಮನಸ್ಸಿಗೆ ನಾನಾ ರೀತಿಯ ಗೊಂದಲ ಇರಬಹುದು. ಆಸ್ತಿ ಪಾಸ್ತಿ ವಿಚಾರ, ಮನೆಯ ವಿಚಾರ, ತಾಯಿಯ ಆರೋಗ್ಯ ಬಗ್ಗೆ ಜಾಗೃತೆ ವಹಿಸಬೇಕು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಒಳಿತಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅತ್ಯುತ್ತಮ ಲಕ್ಷಣ ಗೋಚರವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಮಾಸ್ ಮೀಡಿಯಾ, ಟೆಲಿವಿಷನ್, ಮಾರ್ಕೆಟಿಂಗ್ ಕ್ಷೇತ್ರದಲ್ಲಿಇರುವವರಿಗೆ ಉತ್ತಮ ದಿನವಾಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಸಂಸಾರಿಕ ತೊಂದರೆಗಳು ಜಾಸ್ತಿಯಾಗಬಹುದು. ಹಣಕಾಸಿನ ತೊಂದರೆಗಳು ಕಾಡಬಹುದು. ಮುಖ್ಯವಾದ ಆದಾಯ ಕೈ ಬಿಟ್ಟು ಹೋಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಕದ ದಿನವಾಗಲಿದೆ. ಮುಖ್ಯವಾದ ಕೆಲವು ಬದಲಾವಣೆಗಳನ್ನು ನೀವು ಮಾಡ ಬೇಕಾಗುತ್ತದೆ. ನಿಮ್ಮ ವ್ಯಕ್ತಿತ್ವ ಬಗ್ಗೆ ಟೀಕೆಗಳು ಕೂಡ ಬರಬಹುದು.
ಕುಂಭರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆದಾಯದ ಮಾರ್ಗಗಳು ಕಡಿಮೆಯಾಗಬಹುದು. ಹಣಕಾಸಿನ ವಿಚಾರದಲ್ಲಿ ತೊಂದರೆಯಾಗಬಹುದು. ಮುಖ್ಯವಾದ ಪಾರ್ಟ್ನರ್ ಶೀಪ್ ವ್ಯವಹಾರದಲ್ಲಿ ಒಡಕು ಮೂಡಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಇಷ್ಟಾರ್ಥ ಸಿದ್ಧಿಯಾಗಲಿದ್ದು, ಧನಾಗಮನವಾಗುತ್ತದೆ. ಮಿತ್ರರಿಂದ, ಗುಂಪುಗಳಿಂದ ಯಶಸ್ಸು ಸಿಗುತ್ತದೆ.