Chanakya Niti: ಇಂತಹ ವ್ಯಕ್ತಿಗಳ ಜೊತೆ ಎಂದಿಗೂ ಸ್ನೇಹ ಮಾಡಬೇಡಿ ಅಂತಾರೆ ಚಾಣಕ್ಯ
Chanakay's Principles for Friendship: ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಬರಲು ಸ್ನೇಹವೂ ಪ್ರಮುಖ ಅಂಶ ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದ್ರೆ, ಸ್ನೇಹ ಮಾಡುವಾಗ ಯಾವ ಗುಣಗಳಿರುವವರ ಜೊತೆ ಸ್ನೇಹ ಮಾಡಬೇಕು? ಯಾರನ್ನು ದೂರವಿರಿಸಬೇಕು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದ್ದು, ಸ್ನೇಹದ ಬಗ್ಗೆ ಚಾಣಕ್ಯ ನೀಡಿದ ಸೂಚನೆಗಳು ಇಂದಿಗೂ ಪ್ರಸ್ತುತವಾಗಿವೆ.
ಚಾಣಕ್ಯ -
ಬೆಂಗಳೂರು: ಆಚಾರ್ಯ ಚಾಣಕ್ಯರು(Chanakya Niti) ತಮ್ಮ ನೀತಿ‐ಸಿದ್ಧಾಂತಗಳಲ್ಲಿ ಮಾನವನ ಜೀವನಕ್ಕೆ ಅತ್ಯಂತ ಮುಖ್ಯವಾದ ಕೆಲವು ಸ್ನೇಹ(Friendship) ನಿಯಮಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಸ್ನೇಹ ಎಂದರೆ ಕೇವಲ ಒಬ್ಬರನ್ನೊಬ್ಬರು ಇಷ್ಟಪಡುವುದು ಮಾತ್ರವಲ್ಲ, ಅದರಲ್ಲಿ ನಂಬಿಕೆ, ಒಳ್ಳೆಯ ಮನಸ್ಸು ಮತ್ತು ನಿಷ್ಠೆಯಂತಹ ಮೌಲ್ಯಗಳು ಮುಖ್ಯವಾಗಿರುತ್ತದೆ.
ಹಾಗೇ ವ್ಯಕ್ತಿಯ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಬರಲು ಸ್ನೇಹವೂ ಪ್ರಮುಖ ಅಂಶ ಎಂದು ಅವರು ಹೇಳುತ್ತಾರೆ. ಹಾಗಾದ್ರೆ, ಸ್ನೇಹ ಮಾಡುವಾಗ ಯಾವ ಗುಣಗಳಿರುವವರ ಜೊತೆ ಸ್ನೇಹ ಮಾಡಬೇಕು? ಯಾರನ್ನು ದೂರವಿರಿಸಬೇಕು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದ್ದು, ಸ್ನೇಹದ ಬಗ್ಗೆ ಚಾಣಕ್ಯ(Chanakya) ನೀಡಿದ ಸೂಚನೆಗಳು ಇಂದಿಗೂ ಪ್ರಸ್ತುತವಾಗಿವೆ.
ನಂಬಿಕೆ ಮತ್ತು ಬದ್ಧತೆ – ಸ್ನೇಹದ ಬುನಾದಿ
ಚಾಣಕ್ಯರು ನೀತಿಯ ಪ್ರಕಾರ ಯಾರು ನಿಜವಾದ ಸ್ನೇಹಿತರಾಗುತ್ತಾರೆ ಅವರು ಪರಸ್ಪರ ನಂಬಿಕೆ ಮತ್ತು ಸಮರ್ಪಣ ಭಾವವನ್ನು ಹೊಂದಿರುತ್ತಾರೆ. ಸ್ನೇಹಿತನ ಯಶಸ್ಸು ಕಂಡು ಸಂತೋಷಪಡುವುದು ನಿಜವಾದ ಸ್ನೇಹವೇ ಹೊರತು ಅವನ ಗೆಲುವಿನ ಬಗ್ಗೆ ಅಸೂಯೆ ಪಡುವವನ್ನು ನಕಲಿ ಸ್ನೇಹಿತನಾಗಿರುತ್ತಾನೆ. ಒಬ್ಬರ ಬೆಳವಣಿಗೆಯಲ್ಲಿ ಮತ್ತೊಬ್ಬರೂ ಸಹಭಾಗಿಯಾಗಬೇಕು ಇದೇ ನಿಜವಾದ ಸ್ನೇಹದ ಅರ್ಥವಾಗಿದೆ.
ಸ್ವಾರ್ಥ ಮನೋಭಾವ
ಸ್ವಾರ್ಥ ಮನೋಭಾವ ಇರುವವರು ನಿಜವಾದ ಸ್ನೇಹಿತರಾಗಲು ಸಾಧ್ಯವಿಲ್ಲ. ಅವರು ನಿಮ್ಮೊಂದಿಗೆ ಇರುವುದೇ ನಿಮ್ಮಿಂದ ಅವರಿಗೆ ಲಾಭವಿರೋದಕ್ಕೆ ಮಾತ್ರ. ಅವರ ಅಗತ್ಯ ಮುಗಿದಾಗ ಅವರು ದೂರವಾಗುತ್ತಾರೆ. ಇಂತವರು ನಿಜವಾದ ಸ್ನೇಹಿತರು ಅಲ್ಲ, ಅವರು ಗೆಳೆತನಕ್ಕೆ ಅರ್ಹರಾಗುವುದಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ.
Chanakya Nit: ಜೀವನವನ್ನೇ ಹಾಳು ಮಾಡುತ್ತದೆ ನಿಮ್ಮ ಹೆಂಡತಿಯಲ್ಲಿರುವ ಈ ಗುಣಗಳು
ಹೊಟ್ಟೆಕಿಚ್ಚು ಇರುವವರಿಂದ ದೂರವಿರಿ
ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳಲಾಗದವರ ಸ್ನೇಹ ಅಪಾಯಕಾರಿ ಎಂದು ಚಾಣಕ್ಯ ಎಚ್ಚರಿಸುತ್ತಾನೆ. ಅವರು ನಿಮಗೆ ಸಹಾಯಹಸ್ತ ನೀಡಿದರೂ ಅದರ ಹಿಂದೆ ದುರುದ್ದೇಶ ಇರುತ್ತದೆ. ನಿಮ್ಮ ಜೀವನ ಹಾಳಾಗಬೇಕು ಎಂಬ ದ್ವೇಷ ಮನೋಭಾವ ಇರುತ್ತದೆ. ಇಂತಹವರಿಗೆ ತಪ್ಪೇನು, ಸರಿಯೇನು ಎಂದು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಕಡಿಮೆ. ಆದ್ದರಿಂದ ಇಂತಹ ವ್ಯಕ್ತಿಗಳ ಸ್ನೇಹ ಅಪಾಯಕರ ಎಂದು ಚಾಣಕ್ಯ ಹೇಳುತ್ತಾರೆ.
ಅಹಂಕಾರಿ ವ್ಯಕ್ತಿಯೊಂದಿಗೆ ಸ್ನೇಹ ಬೇಡ
ತಾನೇ ಜ್ಞಾನಿಯೆಂದು ಭಾವಿಸುವ, ಇತರರನ್ನು ತುಚ್ಚವಾಗಿ ಕಾಣುವ, ಮತ್ತೊಬ್ಬರನ್ನು ತುಳಿದು ಮೇಲೆ ಬರುವ ಮನೋಭಾವ ಇರುವವರೊಂದಿಗೆ ಸ್ನೇಹ ಮಾಡಿದರೆ ನಿಮ್ಮ ಪ್ರತಿಷ್ಠೆ ಹಾಳಾಗುವ ಸಾಧ್ಯತೆ ಹೆಚ್ಚು. ಇವರು ತಮ್ಮ ಇಮೇಜ್ ಉಳಿಸಿಕೊಳ್ಳಲು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಿದ್ಧರಿರುತ್ತಾರೆ.
ವ್ಯಂಗ್ಯ ಮಾಡುವ, ಅವಮಾನಿಸುವ ಜನರಿಂದ ದೂರವಿರಿ
ಪ್ರತಿ ವಿಷಯವನ್ನೂ ಹಾಸ್ಯವಾಗಿ, ಕಟುವಾಗಿ ಹೇಳುವ ಸ್ವಭಾವ ಹೊಂದಿರುವವರು ಅವರು ಮುಂದೆ ನಿಮ್ಮನ್ನೇ ಅವಮಾನ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಇಂತವರಿಗೆ ಎಲ್ಲಿ, ಹೇಗೆ ಮಾತನಾಡಬೇಕು ಎಂಬ ಅರಿವು ಕಡಿಮೆ ಇರಲಿದ್ದು, ಇವರಿಂದ ದೂರ ಇರುವುದೇ ಉತ್ತಮ ಎಂಬುದು ಚಾಣಕ್ಯರ ಸಲಹೆ ಆಗಿದೆ.
ಒಟ್ಟಾರೆ ಚಾಣಕ್ಯ ಹೇಳಿದ್ದು ಏನು?
- ನಿಜವಾದ ಸ್ನೇಹ ನಿಷ್ಠೆ, ವಿಶ್ವಾಸ, ಸಹಾನುಭೂತಿ ಮೇಲೆ ನಿಂತಿರಬೇಕು.
- ಸ್ವಾರ್ಥಿ, ಅಹಂಕಾರಿ, ಅಸೂಯೆಪಡುವ, ಇತರರನ್ನು ಅವಮಾನಿಸುವ ಮತ್ತು ದುರಾಸೆಯುಳ್ಳ ಜನರನ್ನು ಸ್ನೇಹಿತರನ್ನಾಗಿ ಆರಿಸಬಾರದು.
- ಒಳ್ಳೆಯ ಸ್ನೇಹಿತನು ಜೀವನದಲ್ಲಿ ಪ್ರೋತ್ಸಾಹ, ಬಲ, ಮಾರ್ಗದರ್ಶನ ನೀಡುವ ಅಮೂಲ್ಯ ಆಸ್ತಿಯಂತೆ.