ದಿನ ಭವಿಷ್ಯ, ಸೆಪ್ಟೆಂಬರ್ 27, 2026: ಹೊಸ ಉದ್ಯಮ ಆರಂಭಿಸಲು ಉತ್ತಮ ದಿನ
Horoscope Today September 27th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ತೃತೀಯ ತಿಥಿ, ಹಸ್ತ ನಕ್ಷತ್ರದ, ಸೆಪ್ಟೆಂಬರ್ 27ನೇ ತಾರೀಕಿನ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ
ಮೇಷ ರಾಶಿ: ಈ ರಾಶಿಯವರಿಗೆ ಅದೃಷ್ಟದ ದಿನವಾಗಲಿದ್ದು, ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ವೃಷಭ ರಾಶಿ: ಇಂದು ಈ ರಾಶಿಯವರಿಗೆ ಅಂದುಕೊಂಡ ಕೆಲಸ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತದೆ. ಉದ್ಯೋಗದಲ್ಲಿ ಬಡ್ತಿ, ಮೆಚ್ಚುಗೆ ಸಿಗಬಹುದು.
ಮಿಥುನ ರಾಶಿ: ಕೆಲವು ಹೊಸ ಸಂಪರ್ಕಗಳು ಭವಿಷ್ಯದಲ್ಲಿ ನಿಮಗೆ ಒಳಿತು ಮಾಡಬಹುದು. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡು ಬರಲಿದೆ. ಆದರೆ ಹೆಚ್ಚು ತಾಳ್ಮೆಯಿಂದ ಇದ್ದರೆ ಒಳಿತು.
ಕಟಕ ರಾಶಿ: ಕುಟುಂಬದ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಖರ್ಚು ವೆಚ್ಚಗಳು ಇಂದು ಹೆಚ್ಚಾಗಬಹುದು.
ಲಿವಿಂಗ್ ರೂಮ್ ವಾಸ್ತು: ಮನೆಗೆ ಸುಖ, ಸಮೃದ್ಧಿ ತರಲು ಪಾಲಿಸಬೇಕಾದ ಪ್ರಮುಖ ನಿಯಮಗಳು
ಸಿಂಹ ರಾಶಿ: ಪ್ರಯತ್ನಗಳಿಗೆ ಸರಿಯಾದ ಪ್ರತಿಫಲ ನಿಮಗೆ ಸಿಗಬಹುದು. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಿದ್ದರೂ ಯಶಸ್ಸು ಕಾಣುತ್ತೀರಿ.
ಕನ್ಯಾ ರಾಶಿ: ಈ ರಾಶಿಯವರಿಗೆ ಹಿಂದೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಸಂಬಂಧ, ಪ್ರೀತಿಯಲ್ಲಿ ಒಳಿತಾಗಬಹುದು. ಆದರೆ ಖರ್ಚಿನ ಮೇಲೆ ನಿಯಂತ್ರಣ ಇರಲಿ.
ತುಲಾ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ಹೊಸ ಯೋಜನೆ ಆರಂಭಿಸಲು ಉತ್ತಮ ದಿನವಾಗಲಿದೆ.
ವೃಶ್ಚಿಕ ರಾಶಿ: ಇಂದು ಯಾವುದೇ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ.
ಧನು ರಾಶಿ: ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ. ದೂರ ಪ್ರಯಾಣದ ಸಾಧ್ಯತೆ ಇದೆ. ಆರ್ಥಿಕವಾಗಿಯೂ ಹೆಚ್ಚಿನ ಲಾಭ ಗಳಿಸುತ್ತೀರಿ.
ಮಕರ ರಾಶಿ: ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಬಹುದು. ಆರ್ಥಿಕ ಸ್ಥಿರತೆ ಹೆಚ್ಚಾಗಲಿದೆ. ಆರೋಗ್ಯದ ಕಡೆ ಗಮನ ಹರಿಸಿ.
ಕುಂಭ ರಾಶಿ: ಇಂದು ನಿಮ್ಮ ಬುದ್ಧಿವಂತಿಕೆ ಹೊಸ ಯಶಸ್ಸಿಗೆ ದಾರಿ ಮಾಡಿಕೊಡಬಹುದು. ಕೆಲಸದಲ್ಲಿ ಸ್ನೇಹಿತರ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ.
ಮೀನ ರಾಶಿ: ಇಂದು ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ. ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತೀರಿ.