ದಿನ ಭವಿಷ್ಯ, ಸೆಪ್ಟೆಂಬರ್ 26, 2026: ಬಹಳ ದಿನದಿಂದ ಕಾಯುತ್ತಿದ್ದ ಯಶಸ್ಸು ಇಂದು ಸಿಗಲಿದೆ
Horoscope Today September 26th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಏಕಾದಶಿ ತಿಥಿ, ಶ್ರವಣ ನಕ್ಷತ್ರದ, ಸೆಪ್ಟೆಂಬರ್ 26ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ವಿವರ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಬಹುದು. ಅದೇ ರೀತಿ ಕುಟುಂಬದಲ್ಲಿಯೂ ಇಂದು ಸಂತೋಷದ ವಾತಾವರಣ ನಿಮ್ಮದಾಗುತ್ತದೆ.
ವೃಷಭ ರಾಶಿ: ನಿಮ್ಮ ಪ್ರಯತ್ನಗಳಿಗೆ ಇಂದು ಸರಿಯಾದ ಪ್ರತಿಫಲ ಸಿಗಲಿದೆ. ಉದ್ಯೋಗದಲ್ಲೂ ಹಿರಿಯರ ಮೆಚ್ಚುಗೆ ಸಿಗಲಿದ್ದು, ಗೌರವಕ್ಕೆ ಕಾರಣರಾಗುತ್ತೀರಿ.
ಮಿಥುನ ರಾಶಿ: ಹೊಸದಾದ ವ್ಯವಹಾರ ಹಾಗೂ ಹೊಸ ಯೋಜನೆಗಳು ಯಶಸ್ಸಿನತ್ತ ಇಂದು ಸಾಗಲಿವೆ. ಆದರೆ ಇಂದು ಅನಗತ್ಯ ಖರ್ಚು ತಪ್ಪಿಸಿದರೆ ಒಳಿತು.
ಕಟಕ ರಾಶಿ: ಕುಟುಂಬದೊಂದಿಗೆ ಇಂದು ಜಗಳ ನಡೆಯುವ ಸಾಧ್ಯತೆ ಇದೆ. ಅದೇ ರೀತಿ ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು.
ಸಿಂಹ ರಾಶಿ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವ ಸಾಧ್ಯತೆ ಇದೆ. ಆದರೆ ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಕನ್ಯಾ ರಾಶಿ: ವಿದ್ಯಾರ್ಥಿಗಳಿಗೆ ಇಂದು ಓದಿನಲ್ಲಿ ಆಸಕ್ತಿ ಕಡಿಮೆ ಇರಬಹುದು. ಹಾಗಾಗಿ ಏಕಾಗ್ರತೆ ಕೊಟ್ಟು ಗಮನ ಹರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಇಂದು ಲಾಭ ಸಾಧ್ಯತೆ.
ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ
ತುಲಾ ರಾಶಿ: ಈ ರಾಶಿಯವರಿಗೆ ಇಂದು ಹೊಸ ಸಂಪರ್ಕಗಳು ಹೆಚ್ಚು ಪ್ರಯೋಜನ ನೀಡಬಹುದು. ವ್ಯಾಪಾರಿಗಳು ಉತ್ತಮ ಅಭಿವೃದ್ಧಿಯನ್ನು ಇಂದು ಕಾಣಬಹುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಕೆಲಸದಲ್ಲಿ ಸವಾಲು ಇದ್ದರೂ ಅದೃಷ್ಟದಿಂದ ಯಶಸ್ಸು ಸಿಗಬಹುದು. ಅಂದುಕೊಂಡ ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.
ಧನು ರಾಶಿ: ಈ ರಾಶಿಯವರಿಗೆ ಪ್ರಯಾಣ ಅಥವಾ ಹೊಸ ಯೋಜನೆಗೆ ಅವಕಾಶ ಸಿಗಬಹುದು. ಹಿರಿಯರ ಸಹಕಾರದಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ.
ಮಕರ ರಾಶಿ: ಈ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆ ಅಥವಾ ಹೊಸ ಜವಾಬ್ದಾರಿ ಎದುರಾಗಬಹುದು. ಆರ್ಥಿಕವಾಗಿಯೂ ಹೆಚ್ಚಿನ ಸದೃಢತೆಯನ್ನು ನೀವು ಕಾಣಬಹುದು.
ಕುಂಭ ರಾಶಿ: ನಿಮ್ಮ ಹೊಸ ಆಲೋಚನೆಗಳಿಗೆ ಮೆಚ್ಚುಗೆ ಸಿಗಬಹುದು. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮೀನ ರಾಶಿ: ದಿನದ ಆರಂಭದಲ್ಲಿ ಸ್ವಲ್ಪ ಒತ್ತಡವಿದ್ದರೂ ನಂತರ ಪರಿಸ್ಥಿತಿ ಸುಧಾರಣೆಯಾಗಲಿದೆ. ಆದರೆ ಆರೋಗ್ಯದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ.