ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 20th: ಇಂದು ಧನು ರಾಶಿಗೆ ಶುಕ್ರನ ಪ್ರವೇಶ: ಯಾರಿಗೆ ಒಳಿತು?

ನಿತ್ಯ ಭವಿಷ್ಯ ಡಿಸೆಂಬರ್ 20, 2025: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಪೌಸ ಮಾಸೆ, ಶುಕ್ಷ ಪಕ್ಷದ, ಪ್ರತಿಪಾತಿತ್ವ ತಿಥಿ, ಮೂಲ ನಕ್ಷತ್ರದ ಡಿಸೆಂಬರ್ 20ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಶುಕ್ರನ ಪ್ರಭಾವ: ಈ ರಾಶಿಯವರ ಬೇಡಿಕೆಗಳೆಲ್ಲವೂ ಇಂದು ಪೂರೈಕೆ!

(ಸಂಗ್ರಹ ಚಿತ್ರ) -

Profile
Pushpa Kumari Dec 20, 2025 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಹಿಮದೃತು, ಪೌಸ ಮಾಸೆ ಕೃಷ್ಣ ಪಕ್ಷದ, ಪ್ರತಿಪಾತಿತ್ವ ತಿಥಿ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಧನು ರಾಶಿಗೆ ಶುಕ್ರ ಪ್ರವೇಶ ಮಾಡ್ತಾ ಇದ್ದಾನೆ. ಮೇಷ ರಾಶಿ ಯವರಿಗೆ ಇಂದು ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ಬಹಳಷ್ಟು ನೆಮ್ಮದಿ ಇರುತ್ತದೆ. ಮಿತ್ರರಿಂದ ಎಲ್ಲ ರೀತಿಯ ಸಹಕಾರ ಸಿಗಲಿದ್ದು ಕಾರ್ಯಕ್ಷೇತ್ರದಲ್ಲಿ ಕೂಡ ಯಶಸ್ಸು ಸಿಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತೀ ಉತ್ತಮ ವಾದ ದಿನವಾಗಿದೆ. ಹಿಂದಿನ ಕೆಲವೊಂದು ದಿನದಲ್ಲಿ ನಿಮಗೆ ತೊಂದರೆಗಳು ಆಗಿದ್ದರೆ ಅದೆಲ್ಲವೂ ಇಂದು ಬಗೆಹರೆಯಲಿದೆ.‌ ಬಹಳಷ್ಟು ನೆಮ್ಮದಿಯಿಂದ ಇಂದು ದಿನವನ್ನು ಕಳೆಯುತ್ತೀರಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ.ನಿಮ್ಮ ಪ್ರೀತಿ ಪಾತ್ರರಿಂದ ಹಾಗೂ ಪಾರ್ಟ್ನರ್ ಶೀಪ್ ಗಳಿಂದ ಒಡಕು ಉಂಟಾಗುವ ಸಾಧ್ಯತೆ ಇದೆ. ಹುಷಾರಾಗಿ ಎಲ್ಲರ ಜೊತೆ ಇರಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಪಾರ್ಟ್ನರ್ ಶೀಪ್ ನಲ್ಲಿ ಹಾಗೂ ಹೆಂಗಸರಿಂದ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ‌. ಹಾಗಾಗಿ ಎಲ್ಲರ ಜೊತೆ ವಿನಯತೆಯಿಂದ ಕೆಲಸ ಮಾಡಬೇಕಾಗುತ್ತದೆ.

Vastu Tips: ಮನೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಈ ಫೋಟೊ ಇಡಬೇಕು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ಗೋಚರ ಆಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ.ಪ್ರೀತಿ ,ಪ್ರೇಮ ದಾಂಪತ್ಯದಲ್ಲಿ ನೆಮ್ಮದಿ ಹಾಗೂ ಮಕ್ಕಳಿಂದಲೂ ನಿಮಗೆ ಒಳಿತು ಆಗಲಿದೆ

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತೀ ಉತ್ತಮವಾದ ದಿನ ವಾಗಿದೆ. ಮನೆಯಲ್ಲೂ ನೆಮ್ಮದಿ ಸಿಗುತ್ತದೆ .ಎಲ್ಲ ಕಡೆಯಿಂದಲೂ ನಿಮಗೆ ಒಳ್ಳೆಯ ವಾತಾವರಣ ಸಿಗಲಿದ್ದು ಭಗವಂತನ ಪೂಜಾ ಕಾರ್ಯಗಳು ನಿಮ್ಮ ಮನೆಯಲ್ಲಿ ನಡೆಯಬಹುದು.

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ಗೋಚರ ಇರುತ್ತದೆ. ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸೋಷಿಯಲ್ ಮೀಡಿಯಾ, ಮಾರ್ಕೆಟಿಂಗ್ ಇತ್ಯಾದಿ ಯಲ್ಲಿ ನೀವು ಪ್ರಗತಿಯನ್ನು ಕಾಣುತ್ತೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ಗೋಚರ ಇರುತ್ತದೆ. ಮನೆಯಲ್ಲಿ ನೆಮ್ಮದಿ, ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ. ಇಂದು ಅತೀ ಹೆಚ್ಚಿನ ಸಂತೋಷವನ್ನು ಕಾಣುವ ದಿನವಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಒಳ್ಳೆಯ ಗೋಚರದದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಶತ್ರುಗಳಿಂದ ಜಯವನ್ನು ಕಾಣುತ್ತೀರಿ. ಹೊಸ ಸ್ನೇಹಿತರ ಪರಿಚಯ ಕೂಡ ಆಗಲಿದೆ.

ಮಕರ ರಾಶಿ: ಈ ರಾಶಿಯವರಿಗೆ ಕಷ್ಟಕರವಾದ ಗೋಚರ ಇರಲಿದ್ದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮುಖ್ಯವಾದ ಕೆಲಸ ಕಾರ್ಯದಲ್ಲಿ ಇಂದು ಒಡಕು ಉಂಟಾಗುವ ಸಾಧ್ಯತೆ ಇದೆ

ಕುಂಭರಾಶಿ: ಇಂದು ಅತೀ ಉತ್ತಮವಾದ ಗೋಚರ ಇರುತ್ತದೆ. ಮನಸ್ಸಿಗೆ ನೆಮ್ಮದಿ ಮಿತ್ರರಿಂದ ನೆಮ್ಮದಿ ಇಷ್ಟಾರ್ಥ ಸಿದ್ದಿಯಾಗಲಿದೆ. ಧನ ಆಗಮನ ಕೂಡ ಆಗುತ್ತದೆ

ಮೀನ ರಾಶಿ: ಮೀನ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಕಿರಿ ಕಿರಿ ಆಗಬಹುದು.ಹೆಂಗಸರಿಂದ ನಿಮಗೆ ತೊಂದರೆ ಆಗ ಬಹುದು.ಹಾಗಾಗಿ ಸ್ವಲ್ಪ ತಾಳ್ಮೆಯಿಂದಲೇ ಎಲ್ಲರ ಜೊತೆ ವರ್ತಿಸಬೇಕಾಗುತ್ತದೆ. ಆದರೆ ಬೇರೆ ಗೋಚರಗಳು ನಿಮಗೆ ಅನುಕೂಲಕರ ವಾಗಿದೆ.