Astro Tips: ದಾರಿದ್ರ್ಯ ನಿವಾರಣೆಗಾಗಿ ಶನಿವಾರದಂದು ತಪ್ಪದೇ ಈ ಮಂತ್ರ ಪಠಿಸಿ
ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಭಕ್ತಿಭಾವದಿಂದ ಪಠಿಸಿದರೆ, ಶನಿ ದೇವನು ಶೀಘ್ರ ಪ್ರಸನ್ನನಾಗಿ ತನ್ನ ಅನುಗ್ರಹವನ್ನು ಭಕ್ತರ ಮೇಲೆ ಸುರಿಸುತ್ತಾನೆ ಎಂಬ ನಂಬಿಕೆಯಿದೆ. ಹಾಗಾದ್ರೆ ಬನ್ನಿ ಶನಿದೇವನ ಕೃಪೆಗೆ ಪಾತ್ರರಾಗಲು ಇಂದು ಯಾವೆಲ್ಲಾ ಮಂತ್ರ ಪಠಿಸಬೇಕು..? ಹೇಗೆ ಪಠಿಸಬೇಕು..? ಎಂಬುದನ್ನು ತಿಳಿದುಕೊಳ್ಳೋಣ.
ಶನಿ ದೇವ (ಸಂಗ್ರಹ ಚಿತ್ರ) -
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ (Hindu Religion) ಶನಿವಾರದ (Saturday) ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ನ್ಯಾಯದ ದೇವರಾದ ಶನಿ ದೇವರಿಗೆ (Shani God) ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಶನಿ ದೇವರ ಆರಾಧನೆಯಿಂದ ಜೀವನದಲ್ಲಿನ ಸಂಕಷ್ಟಗಳು ದೂರವಾಗುತ್ತವೆ. ದುಃಖ ನಿವಾರಣೆ ಆಗುತ್ತದೆ ಮತ್ತು ಕಷ್ಟಕರ ಪರಿಸ್ಥಿತಿಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಶನಿವಾರದ ದಿನವು ಶನಿ ದೇವನ ಆರಾಧನೆಗೆ ಸೂಕ್ತವಾದ ದಿನವಾಗಿದ್ದು, ಯಾವ ವ್ಯಕ್ತಿ ಶನಿ ದೇವನನ್ನು ಶುದ್ಧವಾದ ಮತ್ತು ಪೂರ್ಣವಾದ ಮನಸ್ಸಿನಿಂದ ಪೂಜಿಸುತ್ತಾನೋ ಆ ವ್ಯಕ್ತಿಯ ಇಷ್ಟಾರ್ಥಗಳೆಲ್ಲವೂ ಈಡೇರುವುದು. ಶನಿವಾರದಂದು ವಿಧಿ ವಿಧಾನಗಳೊಂದಿಗೆ ಶನಿ ದೇವರನ್ನು ಪೂಜಿಸುವುದರ ಜೊತೆಗೆ, ಶಕ್ತಿಶಾಲಿ ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿನ ದಾರಿದ್ರ್ಯ, ಅಡೆತಡೆಗಳು ಮತ್ತು ನಕಾರಾತ್ಮಕ ಪರಿಣಾಮಗಳಿಂದ ಮುಕ್ತಿ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಗಳು (Astro Tips) ತಿಳಿಸುತ್ತವೆ.
ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಭಕ್ತಿಭಾವದಿಂದ ಪಠಿಸಿದರೆ, ಶನಿ ದೇವನು ಶೀಘ್ರ ಪ್ರಸನ್ನನಾಗಿ ತನ್ನ ಅನುಗ್ರಹವನ್ನು ಭಕ್ತರ ಮೇಲೆ ಸುರಿಸುತ್ತಾನೆ ಎಂಬ ನಂಬಿಕೆಯಿದೆ. ಹಾಗಾದ್ರೆ ಬನ್ನಿ ಶನಿದೇವನ ಕೃಪೆಗೆ ಪಾತ್ರರಾಗಲು ಇಂದು ಯಾವೆಲ್ಲಾ ಮಂತ್ರ ಪಠಿಸಬೇಕು..? ಹೇಗೆ ಪಠಿಸಬೇಕು..? ಎಂಬುದನ್ನು ತಿಳಿದುಕೊಳ್ಳೋಣಾ...
‘ಓಂ ಶಂ ಶನೈಶ್ಚರಾಯ ನಮಃ’
ಈ ಮಂತ್ರವು ಶನಿ ದೇವನಿಗೆ ನಮಸ್ಕಾರ ಸಲ್ಲಿಸುವ ಅತ್ಯಂತ ಸರಳ ಮತ್ತು ಶಕ್ತಿಶಾಲಿ ಮಂತ್ರವಾಗಿದೆ. ಇದರ ನಿಯಮಿತ ಜಪದಿಂದ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಆರ್ಥಿಕ ಸ್ಥಿರತೆ ಲಭಿಸುತ್ತದೆ ಎನ್ನಲಾಗುತ್ತದೆ.
‘ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ’
ಈ ಶ್ಲೋಕವು ಶನಿ ದೇವನ ಸ್ತುತಿಗೆ ಪ್ರಸಿದ್ಧವಾದ ಮಂತ್ರವಾಗಿದೆ. ಇದನ್ನು ಭಕ್ತಿಯಿಂದ ಪಠಿಸುವುದರಿಂದ ಶನಿ ದೇವನ ಕೃಪೆ ಲಭಿಸಿ ಕಷ್ಟದ ಪರಿಸ್ಥಿತಿಗಳಿಂದ ಹೊರಬರಬಹುದಾಗಿದೆ.
Astro Tips: ಸೂರ್ಯ ತೇಜಸ್ಸು ಸಿಗಬೇಕಾದರೆ ಭಾನುವಾರ ಹೀಗೆ ಪೂಜಿಸಿ
‘ಓಂ ಪ್ರಾಂ ಪ್ರೀಂ ಪ್ರಂ ಸಃ ಶನೈಶ್ಚರಾಯ ನಮಃ’
ಶನಿ ದೇವರನ್ನು ಮೆಚ್ಚಿಸುವ ಸರಳ ಮಂತ್ರಗಳಲ್ಲಿ ಇದೂ ಒಂದು. ಈ ಮಂತ್ರ ಜಪದಿಂದ ಜೀವನದಲ್ಲಿನ ಅಡ್ಡಿಗಳು ನಿಧಾನವಾಗಿ ದೂರವಾಗುತ್ತವೆ ಎಂಬ ನಂಬಿಕೆ ಇದೆ.
‘ಓಂ ಶಂ ಶನಿಶ್ಚರಾಯ ನಮಃ’
ಈ ಮಂತ್ರವನ್ನು ಶನಿವಾರದಂದು ಪಠಿಸುವುದರಿಂದ ಶನಿ ದೇವನ ಅನುಗ್ರಹ ಲಭಿಸಿ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
‘ಓಂ ಜೈ ಶನಿದೇವ ನಮಃ’
ಈ ಮಂತ್ರವು ಶನಿ ದೇವನಿಗೆ ಜಯಕಾರ ಸಲ್ಲಿಸುವ ಮಂತ್ರವಾಗಿದೆ. ಇದನ್ನು ಜಪಿಸುವುದರಿಂದ ಜೀವನದಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕತೆ ವೃದ್ಧಿ ಆಗುತ್ತದೆ.
‘ಓಂ ಐಂ ಶನೈಶ್ಚರಾಯ ನಮಃ’
ಆರೋಗ್ಯ ಸಮಸ್ಯೆಗಳು ಹಾಗೂ ರೋಗಗಳಿಂದ ಮುಕ್ತಿ ಪಡೆಯಲು ಈ ಮಂತ್ರವನ್ನು ಪಠಿಸುವುದು ಒಳಿತು ಎಂದು ನಂಬಲಾಗಿದೆ.
ಶನಿವಾರದಂದು ಬೆಳಿಗ್ಗೆ ಸ್ನಾನ ಮಾಡಿ ಶುಭ್ರವಾದ ವಸ್ತ್ರ ಧರಿಸಿ, ಶನಿ ದೇವರ ವಿಗ್ರಹ ಅಥವಾ ಚಿತ್ರದ ಮುಂದೆ ಕುಳಿತು ದೀಪ ಹಚ್ಚಿ ಪೂಜೆ ಸಲ್ಲಿಸಬೇಕು. ನಂತರ ಜಪಮಾಲೆಯೊಂದಿಗೆ ಪ್ರತಿಯೊಂದು ಮಂತ್ರವನ್ನೂ 108 ಬಾರಿ ಜಪಿಸಿ, ಆರತಿ ಸಲ್ಲಿಸುವುದರಿಂದ ಶುಭ ಫಲಗಳು ಸಿದ್ಧಿಯಾಗುತ್ತದೆ. ಈ ಮಂತ್ರಗಳನ್ನು ನಿಯಮಿತವಾಗಿ ಜಪಿಸುವುದರಿಂದ ಶನಿ ದೇವನ ಕೃಪೆಯಿಂದ ಜೀವನದಲ್ಲಿ ಸಮೃದ್ಧಿ, ಆರೋಗ್ಯ, ಯಶಸ್ಸು ಮತ್ತು ರಕ್ಷಣೆಯನ್ನು ಪಡೆಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.