ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಮೇ 25, 2026: ಮಿಥುನ, ಕುಂಭ ರಾಶಿಯವರಿಗೆ ನೆಮ್ಮದಿ ತರುವ ದಿನ

Horoscope Today May 25th 2026: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪೂರ್ವ ಪಲ್ಗುಣಿ ನಕ್ಷತ್ರದ ಮೇ 25ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಈ ರಾಶಿಯವರಿಗೆ ಇಂದು ಅತ್ಯುತ್ತಮ ದಿನ

ಸಂಗ್ರಹ ಚಿತ್ರ -

ಬೆಂಗಳೂರು, ಮೇ 25: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪೂರ್ವ ಪಲ್ಗುಣಿ ನಕ್ಷತ್ರದ ಈ ದಿನ ಮೇಷ, ಮಿಥುನ, ತುಲಾ, ವೃಶ್ಚಿಕ, ಧನು, ಕುಂಭ ಮತ್ತು ಮೀನ‌ ರಾಶಿಗಳಿಗೆ ಅತ್ಯುತ್ತಮ (Daily Horoscope) ದಿನವಾಗಿರಲಿದೆ. ಉಳಿದ ರಾಶಿಗಳವರಿಗೆ ಸ್ವಲ್ಪ ಮಟ್ಟಿನ ತೊಂದರೆ ಕಾಣಿಸಿಕೊಳ್ಳಲಿದ್ದು, ಮುಖ್ಯ ನಿರ್ಧಾರಗಳು ಬೇಡ ಎನ್ನುತ್ತಾರೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ. ಮೇ 25ರ ಸೋಮವಾರ ಯಾರಿಗೆ ಹೆಚ್ಚು ಸಂತೋಷ ಕೊಡುತ್ತದೆ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕೊಡುತ್ತದೆ ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ.

ಮೇಷ ರಾಶಿ: ಉತ್ತಮ ದಿನ. ಪ್ರೇಮ, ಪ್ರೀತಿ ಪ್ರಕರಣದಲ್ಲಿ ಸ್ವಲ್ಪ ಸಮಾಧಾನವಿರಲಿದೆ. ಇದನ್ನು ಹೆಚ್ಚಾಗಿ ತೋರ್ಪಡಿಸಿಕೊಳ್ಳಲು ಹೋದರೆ ತೊಂದರೆ ಎದುರಾಗುತ್ತದೆ. ದಾಂಪತ್ಯದಲ್ಲಿ ವಿನಯಪೂರ್ವಕವಾಗಿ, ಸಮತೋಲನದಿಂದ ಇರುವುದು ಉತ್ತಮ. ಕಲಾವಿದರಿಗೆ ಯಶಸ್ಸು ದೊರೆಯಲಿದೆ.

ಭಾನುವಾರ ಸೂರ್ಯಾರಾಧನೆ ಮಾಡಿದರೆ ಉದ್ಯೋಗದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ವೃಷಭ ರಾಶಿ: ಸಂಸಾರದ ತಾಪತ್ರಯದಿಂದ ಮನಸ್ಸಿಗೆ ಕ್ಲೇಶ. ಸಂಸಾರದ ನೆಮ್ಮದಿ ಕಡಿಮೆಯಾದಂತೆ ಭಾಸವಾಗುತ್ತದೆ. ಕೋರ್ಟ್, ಕಚೇರಿ ವ್ಯವಹಾರಗಳು, ತೆರಿಗೆ ಸಂಬಂಧಿತ ಕಾರ್ಯಗಳಲ್ಲಿ ಸ್ವಲ್ಪ ಕಷ್ಟ ಎದುರಾಗಲಿದೆ.

ಮಿಥುನ ರಾಶಿ: ಅತ್ಯುತ್ತಮ ದಿನ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ. ಸಾಮಾಜಿಕ ಚಟುವಟಿಕೆಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. ಆತ್ಮವಿಶ್ವಾಸ ತುಂಬಾ ಹೆಚ್ಚಾಗಿರುವುದರಿಂದ ಅನೇಕ ಕಾರ್ಯಗಳಲ್ಲಿ ಜಯ ಸಾಧಿಸಬಹುದು.

ಕಟಕ ರಾಶಿ: ಸ್ವಲ್ಪ ಕಷ್ಟದ ದಿನ. ಮನೆಯ ಜವಾಬ್ದಾರಿಗಳಿಂದ, ಕುಟುಂಬದವರ ಒಡನಾಟದಿಂದ ಇವತ್ತು ಸಂತೋಷವನ್ನು ಕಾಣುತ್ತೀರಿ.

ಸಿಂಹ ರಾಶಿ: ಉತ್ತಮ ದಿನ. ಮನಸ್ಸಿಗೆ ನೆಮ್ಮದಿ. ಹಿಂದಿನ ಎರಡು ಮೂರು ದಿನಗಳಿಂದ ಇದ್ದ ತೊಂದರೆಗಳೆಲ್ಲ ಮಾಯವಾಗಲಿದೆ.

ಕನ್ಯಾ ರಾಶಿ: ಸ್ವಲ್ಪ ಕಷ್ಟದ ದಿನ. ಇನ್ನು ಕೂಡ ಬೇರೆಯವರಿಂದ ಸಹಕಾರ ಪ್ರಾಪ್ತಿಯಾಗುತ್ತಿಲ್ಲ. ಸಂಬಂಧಗಳು, ಮಿತ್ರರ ನಡುವೆ ಇದ್ದ ಒಡಕುಗಳು ಇನ್ನೂ ಹಾಗೆ ಮುಂದುವರಿಯಲಿದೆ. ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ.

ತುಲಾ ರಾಶಿ: ಇಷ್ಟಾರ್ಥ ಸಿದ್ದಿ. ಮನಸ್ಸಿಗೆ ನೆಮ್ಮದಿ. ಶುಭ ಶಕುನ ಗೋಚರವಾಗುತ್ತದೆ.

ವೃಶ್ಚಿಕ ರಾಶಿ: ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಮುಂದುವರಿಯಲಿದೆ. ಜವಾಬ್ದಾರಿಗಳು ಹೆಚ್ಚಾಗುತ್ತದೆ.

ಧನಸ್ಸು ರಾಶಿ: ಅದೃಷ್ಟ ನಿಮ್ಮದಾಗುತ್ತದೆ. ಆದರೆ ಹಿರಿಯರ ಸಹಕಾರ ಮತ್ತು ಅವರ ಆಶೀರ್ವಾದ ಇಲ್ಲದೆ ಯಾವ ಕಾರ್ಯವೂ ನಡೆಯುವುದಿಲ್ಲ ಎಂಬುದು ನಿಮ್ಮ ಅನುಭವಕ್ಕೆ ಬರಲಿದೆ.

ಮಕರ ರಾಶಿ: ಸ್ವಲ್ಪ ಕಷ್ಟದ ದಿನ. ಮುಖ್ಯವಾದ ನಿರ್ಧಾರ ಬೇಡ. ಪ್ರೇಮ, ಪ್ರೀತಿ, ದಾಂಪತ್ಯಗಳಲ್ಲಿ ಯಾರ ಸಹಕಾರವೂ ಸಿಗುವುದಿಲ್ಲ. ಇದರಿಂದ ಎರಡು ದಿನಗಳು ಮನಸ್ಸಿಗೆ ಕ್ಲೇಶ ಉಂಟಾಗಲಿದೆ.

ಕುಂಭ ರಾಶಿ: ಅತ್ಯುತ್ತಮ ದಿನ. ಎಲ್ಲ ರೀತಿಯಲ್ಲಿ ಸಹಕಾರ ಪ್ರಾಪ್ತಿಯಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ. ಪ್ರೇಮ, ಪ್ರೀತಿ, ವ್ಯವಹಾರ ಪಾಲುದಾರಿಕೆಯಲ್ಲಿ ಯಶಸ್ಸು ದೊರೆಯಲಿದೆ.

ಶನಿವಾರ ಈ ವಸ್ತುಗಳನ್ನು ಖರೀದಿಸಬೇಡಿ; ಶನಿ ಕೋಪಕ್ಕೆ ಗುರಿಯಾಗಬಹುದು!

ಮೀನ ರಾಶಿ: ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು. ಶತ್ರುಗಳು ಹಿಮ್ಮೆಟ್ಟುತ್ತಾರೆ. ಎಲ್ಲ ರೀತಿಯಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.