ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಪಕ್ಷಿಗಳಿಗೆ ಆಹಾರ ನೀಡಿ; ಮನೆಗೆ ಸುಖ ಸಮೃದ್ಧಿಯನ್ನು ಆಹ್ವಾನಿಸಿ

ಹಸಿದವರಿಗೆ ಅನ್ನ, ನೀರು ನೀಡುವುದು ಪುಣ್ಯದ ಕೆಲಸವೆಂದೇ ಹಿಂದೂ ಸಂಪ್ರದಾಯಗಳು ಹೇಳುತ್ತವೆ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ಆಹಾರ ನೀಡುವ ಸಂಪ್ರದಾಯ ಹಿಂದೂಗಳದ್ದು. ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಕೊಡಲು ಏನಾದರೂ ನಿಯಮಗಳಿವೆಯೇ, ಹೀಗೆ ಮಾಡುವುದರಿಂದ ಏನು ಪ್ರಯೋಜನವಿದೆ? ಈ ಕುರಿತು ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಅದಕ್ಕೆಲ್ಲ ಉತ್ತರ ಇಲ್ಲಿದೆ.

ಪಕ್ಷಿಗಳಿಗೆ ಆಹಾರ ನೀಡುವಾಗಲೂ ಪಾಲಿಸಬೇಕಿದೆ  ಈ ನಿಯಮ

ಬೆಂಗಳೂರು: ದಾನ ಮಾಡುವುದು ಸರ್ವ ಶ್ರೇಷ್ಠ ಕಾರ್ಯಗಳಲ್ಲಿ ಒಂದು ಎನ್ನುವುದನ್ನು ಎಲ್ಲ ಧರ್ಮಗಳಲ್ಲೂ ಹೇಳಲಾಗುತ್ತದೆ. ಅದರಲ್ಲೂ ಹಸಿದವರಿಗೆ ಅನ್ನ, ನೀರು ನೀಡುವುದು ಪುಣ್ಯದ ಕೆಲಸವೆಂದೇ ಹಿಂದೂ ಸಂಪ್ರದಾಯಗಳು ಹೇಳುತ್ತವೆ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ಆಹಾರ (Feed the birds) ನೀಡುವ ಸಂಪ್ರದಾಯ ಹಿಂದೂಗಳದ್ದು. ಹೀಗಾಗಿಯೇ ಶಾಸ್ತ್ರ (Vastu Shastra) ಸಂಪ್ರದಾಯಗಳನ್ನು ಪಾಲಿಸುವವರ ಮನೆಗಳಲ್ಲಿ ಹಸಿದ ಪ್ರಾಣಿಪಕ್ಷಿಗಳಿಗೆ ಪ್ರತಿನಿತ್ಯವೂ ಆಹಾರ, ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಕೊಡಲು ಏನಾದರೂ ನಿಯಮಗಳಿವೆಯೇ? ಹೀಗೆ ಮಾಡುವುದರಿಂದ ಏನು ಪ್ರಯೋಜನವಿದೆ? ಈ ಕುರಿತು ವಾಸ್ತು ಶಾಸ್ತ್ರ (Vastu Tips) ಏನು ಹೇಳುತ್ತದೆ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಅದಕ್ಕೆಲ್ಲ ಉತ್ತರ ಇಲ್ಲಿದೆ.

ಹೆಚ್ಚಾಗಿ ಮನೆ ಛಾವಣಿ ಮೇಲೆ ಪಕ್ಷಿಗಳಿಗೆ ಆಹಾರ ನೀಡುವುದು ಒಳ್ಳೆಯದು ಎನ್ನುತ್ತಾರೆ ನಮ್ಮ ಹಿರಿಯರು. ಇದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿಯಾಗುತ್ತದೆ. ಮಾತ್ರವಲ್ಲದೇ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸಾಕಷ್ಟು ಮಂದಿ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದು ಧಾರ್ಮಿಕವಾಗಿ ಮಾತ್ರವಲ್ಲ ವಾಸ್ತು ಶಾಸ್ತ್ರದ ದೃಷ್ಟಿಯಿಂದಲೂ ಹೆಚ್ಚು ಮಹತ್ವವನ್ನು ಹೊಂದಿದೆ.

ಮನೆಯ ಛಾವಣಿಯ ಮೇಲೆ ಪಕ್ಷಿಗಳಿಗೆ ಆಹಾರ ನೀಡುವುದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಆದರೆ ಕೆಲವೊಮ್ಮೆ ಇದು ಶುಭ ಅಥವಾ ಅಶುಭ ಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ.

vas (1)

ಶುಭ ಪರಿಣಾಮಗಳು

ಪಕ್ಷಿಗಳಿಗೆ ಆಹಾರ ನೀಡುವುದು ಮನೆಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಯಾಕೆಂದರೆ ಪಕ್ಷಿಗಳು ಒಟ್ಟುಗೂಡಿದಾಗ ಅದು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಹೀಗಾಗಿ ಮನೆಯ ಛಾವಣಿಯ ಮೇಲೆ ಪಕ್ಷಿಗಳಿಗೆ ಆಹಾರ ನೀಡುವುಡ್ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯನ್ನು ಮನೆಗೆ ಆಹ್ವಾನಿಸಿದಂತೆ. ಪಕ್ಷಿಗಳಿಗೆ ಆಹಾರ ನೀಡುವುದು ದಯೆ ತೋರುವ ಒಂದು ಕ್ರಿಯೆಯಾಗಿದೆ. ಇದು ಕುಟುಂಬ ಸದಸ್ಯರಲ್ಲಿ ಸಹಾನುಭೂತಿಯನ್ನು ಬೆಳೆಸುತ್ತದೆ. ಇದು ಮಾನಸಿಕ ಶಾಂತಿಯನ್ನು ಹೆಚ್ಚಿಸುತ್ತದೆ, ಮನೆಯ ಸದಸ್ಯರಲ್ಲಿ ಪರಸ್ಪರ ಸಹಕಾರ, ಬೆಂಬಲ ನೀಡುವುದನ್ನು ಉತ್ತೇಜಿಸುತ್ತದೆ.

ಪಕ್ಷಿಗಳಿಗೆ ಆಹಾರ ನೀಡುವುದರಿಂದ ಮನೆಯ ಗ್ರಹಗಳ ಅನುಕೂಲಕರ ಪ್ರಭಾವವನ್ನು ಹೆಚ್ಚು ಸದೃಢಗೊಳಿಸುತ್ತದೆ. ಇದು ಮನೆ ಮಂದಿಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಪಕ್ಷಿಗಳಿಗೆ ನಿಯಮಿತವಾಗಿ ಆಹಾರ ನೀಡುವುದರಿಂದ ಕೋಪ ಮತ್ತು ದ್ವೇಷದಂತಹ ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಅಶುಭ ಪರಿಣಾಮಗಳು

ಪಕ್ಷಿಗಳಿಗೆ ಮನೆಯ ಛಾವಣಿಯ ಮೇಲೆ ಆಹಾರ ನೀಡುವ ಸಂಪ್ರದಾಯವನ್ನು ಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಮಾಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅದು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ಪಕ್ಷಿಗಳಿಗೆ ಆಹಾರ ನೀಡುವ ಪ್ರದೇಶವು ಸ್ವಚ್ಛವಾಗಿ ಇಲ್ಲದೇ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು. ಮನೆಯಲ್ಲಿ ಉದ್ವಿಗ್ನತೆ ಮತ್ತು ಅಶಾಂತಿಗೆ ಕಾರಣವಾಗುತ್ತದೆ.

ಅಲ್ಲದೇ ಸೂಕ್ತವಲ್ಲದ ಧಾನ್ಯಗಳು ಅಥವಾ ನೈರ್ಮಲ್ಯವಿಲ್ಲದ ಆಹಾರವನ್ನು ಪಕ್ಷಿಗಳಿಗೆ ಒದಗಿಸುವುದು ಕೂಡ ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಇದನ್ನೂ ಓದಿ: Vastu Tips: ಬೆಂಕಿಕಡ್ಡಿ ಪೆಟ್ಟಿಗೆ ಎಲ್ಲೆಂದರಲ್ಲಿ ಇಟ್ಟರೆ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆ..!

vas (2)

ಈ ನಿಯಮ ಪಾಲಿಸಿ

  • ಮನೆಯ ಛಾವಣಿಯ ಮೇಲೆ ಪಕ್ಷಿಗಳಿಗೆ ಆಹಾರ ನೀಡುವ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿರಿಸಿ.
  • ಪಕ್ಷಿಗಳಿಗೆ ಆಹಾರ ನೀಡಲು ನಿರ್ದಿಷ್ಟ ಸಮಯ ಮೀಸಲಿಡಿ. ಬೆಳಗ್ಗೆ ಅಥವಾ ಸಂಜೆ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಅವುಗಳ ದಿನಚರಿಗೆ ಹೊಂದಿಕೆಯಾಗುತ್ತದೆ.
  • ಛಾವಣಿಯ ಒಂದೇ ಭಾಗದಲ್ಲಿ ಪಕ್ಷಿಗಳಿಗೆ ಆಹಾರ ನೀಡಿ. ಇದರಿಂದ ಸ್ವಚ್ಛತೆಯನ್ನು ಪಾಲಿಸುವುದು ಸುಲಭವಾಗುತ್ತದೆ. ಅಲ್ಲದೇ ಪಕ್ಷಿಗಳಿಗೆ ಇದು ಸುರಕ್ಷಿತ ಭಾವನೆಯನ್ನು ಕೊಡುತ್ತದೆ.
  • ಪಕ್ಷಿಗಳು ಆರೋಗ್ಯಕರವಾಗಿರಲು ಸ್ವಚ್ಛವಾದ ಮತ್ತು ಸೂಕ್ತವಾದ ಧಾನ್ಯ ಮತ್ತು ಬೀಜಗಳನ್ನು ನೀಡಿ. ಇದು ಅವುಗಳಲ್ಲಿ ಶಾಂತಿಯುತ ಮತ್ತು ನೈಸರ್ಗಿಕ ನಡವಳಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಮನೆಗೂ ಸಕಾರಾತ್ಮಕ ಶಕ್ತಿ ತುಂಬುತ್ತದೆ.