Vastu Tips: ಬೆಂಕಿಕಡ್ಡಿ ಪೆಟ್ಟಿಗೆ ಎಲ್ಲೆಂದರಲ್ಲಿ ಇಟ್ಟರೆ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆ..!
ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ ಬಹು ಉಪಯೋಗವಾಗುವ ಬೆಂಕಿ ಕಡ್ಡಿ ಪೆಟ್ಟಿಗೆಯನ್ನು ಅಲ್ಲಿ ಇಲ್ಲಿ ಇಡಬಾರದು ಎನ್ನುತ್ತಾರೆ ಮನೆ ಹಿರಿಯರು. ಏನೋ ಬೆಂಕಿಯ ಭಯ ಇರಬಹುದು ಎಂದು ಎಲ್ಲರೂ ಅಂದುಕೊಂಡಿರಬಹುದು. ಆದರೆ ಇದು ವಾಸ್ತು ದೋಷಕ್ಕೂ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹೌದು ಮನೆಯಲ್ಲಿ ಬೆಂಕಿ ಕಡ್ಡಿ ಪೆಟ್ಟಿಗೆಯನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಅದರಲ್ಲೂ ಮುಖ್ಯವಾಗಿ ದೇವರ ಪೂಜಾ ಕೋಣೆಯಲ್ಲಿ ಅದನ್ನು ಇರಿಸಲೇಬಾರದು.


ಬೆಂಗಳೂರು: ಅಡುಗೆ ಮನೆಯಲ್ಲಿ (kitchen vastu), ಪೂಜಾ ಕೋಣೆಯಲ್ಲಿ ಬಹು ಉಪಯೋಗವಾಗುವ ಬೆಂಕಿ ಕಡ್ಡಿ (Matchbox) ಪೆಟ್ಟಿಗೆಯನ್ನು ಅಲ್ಲಿ ಇಲ್ಲಿ ಇಡಬಾರದು ಎನ್ನುತ್ತಾರೆ ಮನೆ ಹಿರಿಯರು. ಏನೋ ಬೆಂಕಿಯ (Fire) ಭಯ ಇರಬಹುದು ಎಂದು ಎಲ್ಲರೂ ಅಂದುಕೊಂಡಿರಬಹುದು. ಆದರೆ ಇದು ವಾಸ್ತು ದೋಷಕ್ಕೂ (Vastu Tips) ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹೌದು ಮನೆಯಲ್ಲಿ ಬೆಂಕಿ ಕಡ್ಡಿ ಪೆಟ್ಟಿಗೆಯನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಅದರಲ್ಲೂ ಮುಖ್ಯವಾಗಿ ದೇವರ ಪೂಜಾ ಕೋಣೆಯಲ್ಲಿ ಅದನ್ನು ಇರಿಸಲೇಬಾರದು. ಧೂಪದ್ರವ್ಯ, ದೀಪಗಳನ್ನು ಬೆಳಗಲು ಇದು ಮುಖ್ಯವಾದರೂ ದೇವರ ಕೋಣೆಯೊಳಗೆ ಬೆಂಕಿಕಡ್ಡಿ ಪೆಟ್ಟಿಗೆ ಇಡುವುದು ಸೂಕ್ತವಲ್ಲ. ಪವಿತ್ರ ಸ್ಥಳದಲ್ಲಿ ಸುಡುವ ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ದೇವರ ಕೋಣೆಯನ್ನು ಮನೆಯ ಅತ್ಯಂತ ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ. ಇದಕ್ಕಾಗಿಯೇ ನಿತ್ಯವೂ ದೇವರ ಕೋಣೆಯನ್ನು ಸ್ವಚ್ಛ ಮಾಡಿ, ತಾಜಾ ಹೂವುಗಳಿಂದ ಅಲಂಕರಿಸಿ ಧೂಪದ್ರವ್ಯ, ದೀಪಗಳನ್ನು ಬೆಳಗಲಾಗುತ್ತದೆ. ಇದರಿಂದ ಮನೆಯಲ್ಲಿ ಆಧ್ಯಾತ್ಮಿಕ ಶಕ್ತಿಯ ಸಂಚಾರವಾಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಯಾಗುತ್ತದೆ ಎನ್ನುವ ನಂಬಿಕೆ ಇದೆ.

ಅನೇಕರು ತಿಳಿಯದೆಯೇ ದೇವರ ಕೋಣೆಗಳಲ್ಲಿ ಬೆಂಕಿಕಡ್ಡಿಯ ಪೊಟ್ಟಣವನ್ನು ಇಡುತ್ತಾರೆ. ವಾಸ್ತು ಪ್ರಕಾರ ಈ ಅತ್ಯಲ್ಪ ಕಾರಣವೂ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಮನೆಗೆ ನಕಾರಾತ್ಮಕ ಶಕ್ತಿ ಮತ್ತು ದುರದೃಷ್ಟವನ್ನು ಆಕರ್ಷಿಸುತ್ತದೆ. ಧೂಪದ್ರವ್ಯದ ಕಡ್ಡಿಗಳು, ದೀಪಗಳು ಉರಿಸಲು ಬೆಂಕಿಕಡ್ಡಿಗಳನ್ನು ಬಳಸುವುದು ಅನಿವಾರ್ಯವಾದರೂ ಇಲ್ಲಿ ಯಾವುದೇ ಕಾರಣಕ್ಕೂ ಬೆಂಕಿ ಕಡ್ಡಿ ಅಥವಾ ಅದರ ಪೊಟ್ಟಣವನ್ನು ಇರಿಸುವಂತಿಲ್ಲ. ಪೂಜಾ ಕೊನೆಯೆಂದರೆ ಪವಿತ್ರ ಸ್ಥಳ. ಇಲ್ಲಿ ಸುಡುವ ವಸ್ತುಗಳು ಇಡುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಯಾಕೆಂದರೆ ಸುಡುವ ವಸ್ತುವಿಗೆ ಸಕಾರಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಬೆಂಕಿಯು ವಿನಾಶ ಮತ್ತು ಅಸ್ಥಿರತೆಯನ್ನು ಸೂಚಿಸುತ್ತದೆ. ಇದನ್ನು ದೇವರ ಕೋಣೆಯಲ್ಲಿ ಇರಿಸುವುದರಿಂದ ಅದು ಶಾಂತಿಯುತ ಮತ್ತು ಶುದ್ಧ ವಾತಾವರಣಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಮನೆಯವರಲ್ಲಿ ಮಾನಸಿಕ ಅಶಾಂತಿ ಉದ್ಭವವಾಗುತ್ತದೆ. ಇದರಿಂದ ಮನೆಯಲ್ಲಿ ಕಿರಿಕಿರಿ, ಜಗಳಗಳು ಉಂಟಾಗುತ್ತದೆ. ಮಾನಸಿಕ ನೆಮ್ಮದಿಗಾಗಿ ನಾವು ಮಾಡುವ ದೇವರ ಪ್ರಾರ್ಥನೆಯಿಂದ ಯಾವುದೇ ರೀತಿಯ ಪ್ರಯೋಜನಗಳೂ ಸಿಗುವುದಿಲ್ಲ.
ಇದನ್ನೂ ಓದಿ: Vastu Tips: ಕಚೇರಿ ಮೇಜಿನಲ್ಲಿ ಲಕ್ಷ್ಮೀ ಪಾದುಕೆ ಇರಿಸಿ; ಕಷ್ಟಗಳನ್ನೂ ದೂರವಿರಿಸಿ

ಯಾಕೆ ಇಡಬಾರದು?
ವಾಸ್ತು ಪ್ರಕಾರ,ದೇವರ ಕೋಣೆಯಲ್ಲಿ ನಾವು ನಿತ್ಯ ಮಾಡುವ ಆಧ್ಯಾತ್ಮಿಕ ಕಾರ್ಯಗಳಿಂದ ಮನೆ ಮಂದಿಯ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಉಂಟಾಗುತ್ತದೆ. ಇಲ್ಲಿ ಮಾತ್ರವಲ್ಲ ಮಲಗುವ ಕೋಣೆಯಲ್ಲೂ ಬೆಂಕಿಕಡ್ಡಿಗಳ ಪೊಟ್ಟಣವನ್ನು ಇಡಬಾರದು. ಯಾಕೆಂದರೆ ಇದು ದಂಪತಿಯ ನಡುವೆ ಕಲಹಕ್ಕೆ ಕಾರಣವಾಗುತ್ತದೆ. ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಹತ್ತಿರದಲ್ಲಿ ಸುಡುವ ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕ ಕಂಪನಗಳು ಉಂಟಾಗಿ ಆತಂಕ ಹೆಚ್ಚಾಗುತ್ತದೆ.
ವಾಸ್ತು ದೋಷವನ್ನು ದೂರ ಮಾಡಲು ಬೆಂಕಿಯ ಪೆಟ್ಟಿಗೆಗಳನ್ನು ಸೂಕ್ತ ಸ್ಥಳಗಳಲ್ಲಿ ಇಡಬೇಕು. ಅದನ್ನು ಅಡುಗೆ ಮನೆಯಲ್ಲಿ ಮುಚ್ಚಿದ ಕಪಾಟುಗಳಲ್ಲಿ ಇಡಬಹುದು. ಒಂದು ವೇಳೆ ದೇವರ ಕೋಣೆಯಲ್ಲಿ ಬೆಂಕಿಕಡ್ಡಿ ಪೊಟ್ಟಣವನ್ನು ಇರಿಸಬೇಕಾದರೆ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಅದನ್ನು ಶುದ್ಧ ಬಟ್ಟೆಯಲ್ಲಿ ಸುತ್ತಿ ಇಡಬಹುದು.
ಅದೇ ರೀತಿ ಲೈಟರ್‌ಗಳು ಅಥವಾ ಯಾವುದೇ ಇತರ ಸುಡುವ ವಸ್ತುಗಳನ್ನು ಪ್ರಾರ್ಥನಾ ಕೋಣೆಯಲ್ಲಿ ಇಡಬಾರದು. ಧೂಪದ್ರವ್ಯ ಅಥವಾ ದೀಪಗಳನ್ನು ಬೆಳಗಿಸಿದ ಅನಂತರ ಸುಟ್ಟ ಬೆಂಕಿಕಡ್ಡಿಗಳನ್ನು ಕೂಡ ಅಲ್ಲಿ ಇರಿಸಬಾರದು. ಯಾಕೆಂದರೆ ಇದು ಬಡತನ ಮತ್ತು ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಧೂಪದ್ರವ್ಯದ ತುಂಡುಗಳ ಬೂದಿಯನ್ನು ಸಹ ಪ್ರತಿನಿತ್ಯ ತೆಗೆದುಹಾಕಬೇಕು. ಇಲ್ಲವಾದರೆ ಇದು ಪಿತೃ ದೋಷಕ್ಕೆ ಕಾರಣವಾಗುತ್ತದೆ ಮತ್ತು ಮನೆಗೆ ದುರದೃಷ್ಟವನ್ನು ಆಹ್ವಾನಿಸುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.