ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ರಾಶಿಯವರಿಗೆಲ್ಲ ಸಿಗಲಿದೆ ಪುನರ್ವಸು ನಕ್ಷತ್ರದ ಕೃಪಕಟಾಕ್ಷ

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಪುನರ್ವಸು ನಕ್ಷತ್ರದ ಈ ದಿನ ಜುಲೈ 24ನೇ ತಾರೀಖಿನ ಗುರುವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ್ದು ಹೀಗೆ:

ಈ ದಿನ ಯಾವ ರಾಶಿಯವರಿಗೆ ಕಾರ್ಯಸಿದ್ಧಿ ಯೋಗವಿದೆ ಗೊತ್ತಾ?

Horoscope

Profile Pushpa Kumari Jul 24, 2025 6:00 AM

ಬೆಂಗಳೂರು: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ (Daily Horoscope) ತಿಳಿಸಿದ್ದಾರೆ.

ಮೇಷ ರಾಶಿ: ಪುನರ್ವಸು ನಕ್ಷತ್ರದ ಈ ದಿನ ‌ಮೇಷ ರಾಶಿಯವರಿಗೆ ಸಂಸಾರದ ತಾಪತ್ರಯಗಳು ಹೆಚ್ಚಾಗಲಿದೆ. ಕೆಲವೊಂದು ಅಂಶಗಳು ನಿಮ್ಮ ನೆಮ್ಮದಿ ಕೆಡಿಸಲಿವೆ. ತಾಯಿಯ ಆರೋಗ್ಯಕ್ಕೆ ಸಮಸ್ಯೆ ಬರಲಿದೆ. ಹೃದಯ ಸಂಬಂಧಿತ ಕಾಯಿಲೆ ಇದ್ದವರು, ಒತ್ತಡ ಸಮಸ್ಯೆ ಎದುರಿಸುತ್ತಿ ರುವವರು ಸ್ವಲ್ಪ ಜಾಗೃತೆಯಿಂದ ಇರಬೇಕು.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಅವರಿಗೆ ಕಾರ್ಯ ಸಿದ್ಧಿ ಯೋಗ ದೊರೆಯಲಿದೆ. ಮಾಧ್ಯಮ ರಂಗದಲ್ಲಿ ಇರುವವರು, ರಾಜಕಾರಣಿಗಳಿಗೆ ಈ ದಿನ ಬಹಳಷ್ಟು ಉತ್ತಮ ಅವಕಾಶ ಸಿಗಲಿದ್ದು, ಸಾಕಷ್ಟು ಪ್ರಸಿದ್ಧಿ ಪಡೆಯುವ ಸಾಧ್ಯತೆ ಇದೆ.

ಮಿಥುನ ರಾಶಿ: ಆರ್ಥಿಕ ವಹಿವಾಟು ನಡೆಸುವ, ವ್ಯವಹಾರ ಕ್ಷೇತ್ರದಲ್ಲಿರುವ ಮಿಥುನ ರಾಶಿಯವರಿಗೆ ಇಂದು ಅಷ್ಟು ಉತ್ತಮವಾದ ದಿನವಲ್ಲ. ಹಣಕಾಸಿನ ವ್ಯವಹಾರ ಬಹಳ ಕಷ್ಟವಾಗಲಿದೆ. ಬರಬೇಕಾದ ಹಣ ಬರದೆ ನಿಮಗೆ ಸಮಸ್ಯೆ ಆಗುವ ಕಾರಣ ಮೊದಲೇ ಎಚ್ಚೆತ್ತುಕೊಂಡು ಮುನ್ನಡೆಯಬೇಕು.

ಕಟಕ ರಾಶಿ: ಕಟಕ ರಾಶಿಯವರಿಗೆ ತಮ್ಮ ರಾಶಿಗೆ ಚಂದ್ರ ಬರಲಿರುವ ಕಾರಣ ಬೇಜಾರು, ಒತ್ತಡ ಇತ್ಯಾದಿ ಸಮಸ್ಯೆ ಪರಿಹಾರವಾಗಲಿದೆ. ಆದರೆ ಇಂದು ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಅಷ್ಟು ಪ್ರಶಸ್ಥವಾಗಿಲ್ಲ. ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರಬೇಕು. ಮಾನಸಿಕ ಒತ್ತಡ ಸಮಸ್ಯೆ ಇಂದು ಕಂಡು ಬರಲಿದೆ. ಮುಖ್ಯವಾದ ಮಿತ್ರತ್ವದಲ್ಲಿ ಇಂದು ವೈಮನಸ್ಸು ಮೂಡಲಿದೆ. ಆದ್ದರಿಂದ ಯಾವ ನಿರ್ಧಾರವನ್ನೂ ಇಂದು ತೆಗೆದುಕೊಳ್ಳಬೇಡಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಇಂದು ಮಿತ್ರರಿಂದ ಧನಾಗಮನ ಆಗಲಿದೆ. ಈ ರಾಶಿಯವರಿಗೂ ಕಾರ್ಯ ಸಿದ್ಧಿ ಯೋಗವಿರಲಿದೆ. ಗುಂಪಿನಲ್ಲಿ ವ್ಯವಹಾರ ಮಾಡುವವರು ಈ ದಿನ ಸಾಕಷ್ಟು ವಿಚಾರದಲ್ಲಿ ಲಾಭವನ್ನು ಕಾಣಲಿದ್ದಾರೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಿಗಲಿದೆ. ಜವಾಬ್ದಾರಿಗಳು ಸಾಕಷ್ಟು ಹೆಚ್ಚಾಗಲಿದೆ. ಕೆಲವೊಂದು ಟೀಕೆಯ ಮಾತನ್ನು ಕೂಡ ಕೇಳಿ ಬರಬೇಕಾಗಲಿದೆ. ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮುನ್ನಡೆದರೆ ಸಮಸ್ಯೆಯಾಗಲಾರದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಅದೃಷ್ಟ ಪರೀಕ್ಷೆ ದಿನವಾಗಲಿದೆ. ಕೆಲವೊಂದು ಕೆಲಸಕ್ಕೆ ಗುರು ಹಿರಿಯರ ಆಶೀರ್ವಾದ ಅಗತ್ಯವಿದೆ. ಇಂದು ವಿನಯದಿಂದ ಇರುವುದು ಬಹಳ ಮುಖ್ಯ. ವಿನಯದಿಂದ ವರ್ತಿಸದಿದ್ದರೆ ಸಾಕಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರೀ ಅದೃಷ್ಟ!

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಮಾನಸಿಕ ಒತ್ತಡ, ವೈಮನಸ್ಸು ಮೂಡಲಿದೆ. ಹಳೆಯ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂಬ ಯೋಚನೆ ನಿಮಗಿದ್ದರೂ ಕೆಲವು ಸಮಸ್ಯೆ ಹಾಗೆ ಉಳಿದು ಬಿಡಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಲಿದೆ. ಜೀವನದಲ್ಲಿ ಸಾಕಷ್ಟು ವಿಷಯಕ್ಕೆ ಯಶಸ್ಸು ಸಿಗಲಿದೆ. ಕುಟುಂಬ ಮತ್ತು ಸ್ನೇಹಿತರ ಬಳಗದಿಂದ ಉತ್ತಮ ಸಹಕಾರ ಸಿಗಲಿದೆ. ಮನಸ್ಸಿಗೆ ನೆಮ್ಮದಿ, ಯಶಸ್ಸು ದೊರೆಯಲಿದೆ.

ಕುಂಭ ರಾಶಿ: ಕುಂಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಸಾಮಾಜಿಕ ವ್ಯವಹಾರದಲ್ಲಿ ಜಯ ಸಿಗಲಿದೆ. ಕ್ರೀಡೆಯಲ್ಲಿ ತೊಡಗಿರುವವರಿಗೆ ಇಂದು ಯಶಸ್ಸು ಸಿಗುವ ದಿನವಾಗಲಿದೆ. ಕೆಲ ಸಣ್ಣ ಪುಟ್ಟ ಸಮಸ್ಯೆ ಇಂದು ಬಗೆಹರಿಯಲಿದೆ.

ಮೀನ ರಾಶಿ: ಮೀನ ರಾಶಿಯವರು ಬುದ್ಧಿವಂತಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅನೇಕ ವಿಚಾರದಲ್ಲಿ ಯಶಸ್ಸು ಸಿಗಲಿದೆ. ಮೀನ ರಾಶಿಯವರಲ್ಲಿ ಶುಕ್ರ ಉಚ್ಛ ಸ್ಥಾನದಲ್ಲಿದ್ದಾನೆ. ಇಂದು ನಿಮ್ಮ ಕಲಾ ಕೌಶಲ್ಯ ಅನಾವರಣಗೊಳ್ಳುವ ದಿನವಾಗಲಿದೆ. ಹಾಗಿದ್ದರೂ ಹೊಸ ವಿಚಾರಕ್ಕೆ ಭಯ ಪಡದೆ ಮುನ್ನಡೆದರೆ ಯಶಸ್ಸು ಕೂಡ ಸಿಗಲಿದೆ.