Vastu Tips: ಸಹಿಯ ಕೆಳಗೆ ನೀವು ಹಾಕುವ ಗೆರೆ ಸರಿಯಾಗಿದೆಯೇ ?
ಯಾವುದೇ ಅರ್ಜಿಯಾಗಿರಲಿ, ಪತ್ರವಾಗಿರಲಿ ಕೊನೆಯಲ್ಲೊಂದು ಸಹಿ ಇದ್ದರೆ ಮಾತ್ರ ಅದಕ್ಕೆ ಮಹತ್ವ. ಇಲ್ಲವಾದರೆ ಕಸದ ಬುಟ್ಟಿ ಸೇರುತ್ತದೆ. ಹೀಗಾಗಿ ಶಾಲಾ ದಿನಗಳಲ್ಲೇ ನಾವು ಸಹಿ ಹಾಕುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೇವೆ. ಇದು ಮುಂದೆ ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ. ಕೆಲವೊಂದು ಶುಭ ಕಾರ್ಯದ ಪತ್ರಗಳಿಗೆ ಸಹಿ ಹಾಕುವಾಗ ದಿನ, ಘಳಿಗೆ ನೋಡುತ್ತೇವೆ. ಆದರೆ ಸಹಿ ಹಾಕುವ ವಿಧಾನಕ್ಕೆ ವಾಸ್ತು ನೋಡಿದ್ದೇವೆಯೇ? ಬಹುಶಃ ಯಾರೂ ನೋಡಿರಲಿಕ್ಕಿಲ್ಲ. ಸಹಿ ಹಾಕುವ ವಿಧಾನಕ್ಕೂ ವಾಸ್ತುವಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.


ಬೆಂಗಳೂರು: ಯಾವುದೇ ಅರ್ಜಿಯಾಗಿರಲಿ, ಪತ್ರವಾಗಿರಲಿ ಕೊನೆಯಲ್ಲೊಂದು ಸಹಿ (Signature) ಇದ್ದರೆ ಮಾತ್ರ ಅದಕ್ಕೆ ಮಹತ್ವ. ಇಲ್ಲವಾದರೆ ಕಸದ ಬುಟ್ಟಿ ಸೇರುತ್ತದೆ. ಹೀಗಾಗಿ ಶಾಲಾ ದಿನಗಳಲ್ಲೇ ನಾವು ಸಹಿ ಹಾಕುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೇವೆ. ಇದು ಮುಂದೆ ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ. ಕೆಲವೊಂದು ಶುಭ ಕಾರ್ಯದ ಪತ್ರಗಳಿಗೆ ಸಹಿ ಹಾಕುವಾಗ ದಿನ, ಘಳಿಗೆ ನೋಡುತ್ತೇವೆ. ಆದರೆ ಸಹಿ ಹಾಕುವ ವಿಧಾನಕ್ಕೆ ವಾಸ್ತು (Vastu for signature) ನೋಡಿದ್ದೇವೆಯೇ? ಬಹುಶಃ ಯಾರೂ ನೋಡಿರಲಿಕ್ಕಿಲ್ಲ. ಸಹಿ ಹಾಕುವ ವಿಧಾನಕ್ಕೂ (Signature line) ವಾಸ್ತುವಿಗೂ (Vastu tips) ಏನು ಸಂಬಂಧ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ನಾವು ಸಹಿಯಲ್ಲಿ ಪೂರ್ತಿ ಹೆಸರು ಬರೆಯುವುದಿಲ್ಲ. ನಮ್ಮ ಹೆಸರಿನ ಒಂದೆರಡು ಪದಗಳನ್ನು ವಿಶೇಷ ರೀತಿಯಲ್ಲಿ ಬರೆದು ಅದರ ಕೆಳಗೆ ಗೆರೆ ಎಳೆಯುತ್ತೇವೆ. ಈ ಗೆರೆಯೇ ನಮ್ಮ ಭವಿಷ್ಯವನ್ನು ಬರೆಯುತ್ತದೆ. ಹೀಗಾಗಿ ಈ ಗೆರೆಯನ್ನು ವಾಸ್ತು ಪ್ರಕಾರವೇ ಎಳೆಯಬೇಕು. ಇಲ್ಲವಾದರೆ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು.
ಸಹಿಯ ಕೆಳಗೆ ನಾವು ಎಳೆಯುವ ಗೆರೆ ಹೇಗಿದೆ ಎನ್ನುವುದರ ಆಧಾರದಲ್ಲಿ ಅದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ.
ಸಹಿಯ ಕೆಳಗೆ ರೇಖೆ ಎಳೆಯುವುದು ಒಳ್ಳೆಯ ಅಭ್ಯಾಸವೇ ಅಥವಾ ಅಲ್ಲವೇ ಎನ್ನುವುದರ ಕುರಿತು ಅವರು ಹೇಳಿರುವ ಕೆಲವು ಮಹತ್ವದ ಅಂಶಗಳು ಇಲ್ಲಿವೆ.
ಸಹಿ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಸ್ಥಾನವನ್ನು ಹೊಂದಿದೆ. ಇದು ವ್ಯಕ್ತಿಯ ಗುರುತು ಮತ್ತು ವಿಶ್ವಾಸಾರ್ಹತೆಯ ಭಾಗವಾಗಿದೆ. ಇದು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯವಾಗಿ ಸಹಿಗಳಲ್ಲಿ ಕೆಳಗೆ ಒಂದು ಅಥವಾ ಎರಡು ರೇಖೆಗಳನ್ನು ಎಳೆಯಲಾಗುತ್ತದೆ. ಆದರೆ ಇದು ಸರಿಯೋ ತಪ್ಪೋ ಎಂಬ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ ಎನ್ನುತ್ತಾರೆ ಅವರು.
ವಾಸ್ತು ಶಾಸ್ತ್ರದ ಪ್ರಕಾರ ಸಹಿಯ ಕೆಳಗೆ ಎಳೆಯುವ ಗೆರೆಯ ಆಕಾರ ಮತ್ತು ದಿಕ್ಕು ನಮ್ಮ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮವನ್ನು ಬೀರಬಹುದು.
ಇದನ್ನೂ ಓದಿ: Vastu Tips: ಪಕ್ಷಿಗಳಿಗೆ ಆಹಾರ ನೀಡಿ; ಮನೆಗೆ ಸುಖ ಸಮೃದ್ಧಿಯನ್ನು ಆಹ್ವಾನಿಸಿ

ಹೇಗಿರಬೇಕು ?
ಸಹಿಯ ಕೆಳಗೆ ಉದ್ದವಾದ ನೇರ ಗೆರೆ ಎಳೆಯುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚು ದೃಢವಾಗುತ್ತದೆ. ಈ ಗೆರೆಯು ಸಹಿಯ ಉದ್ದವನ್ನು ಮೀರಿ ವಿಸ್ತರಿಸಬೇಕು. ಯಾವುದೇ ರೀತಿಯಲ್ಲಿ ವಕ್ರವಾಗಿರಬಾರದು. ಸಹಿಗಿಂತ ಚಿಕ್ಕದಾದ ಅಥವಾ ವಕ್ರವಾದ ಗೆರೆ ಮನದಲ್ಲಿ ಗೊಂದಲ, ಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ.
ಸಹಿಯ ಕೆಳಗೆ ಒಂದಕ್ಕಿಂತ ಹೆಚ್ಚು ಗೆರೆಗಳು ಇರಬಾರದು. ಹೆಚ್ಚಿನ ಗೆರೆಗಳು ಮಾನಸಿಕ ಗೊಂದಲ ಮತ್ತು ಅನಿಶ್ಚಿತತೆಯನ್ನು ಉಂಟು ಮಾಡುತ್ತವೆ. ಇದು ನಮ್ಮ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ತಡೆಯುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳಿಗೆ ಕಾರಣವಾಗುತ್ತದೆ.
ಏನು ಪರಿಣಾಮ?
ಸಹಿಯನ್ನು ಛೇದಿಸುವ ಅಥವಾ ಬಾಗುವ ಗೆರೆಯನ್ನು ಬಳಸಬಾರದು. ಯಾಕೆಂದರೆ ಇದು ವ್ಯಕ್ತಿಯ ಪ್ರಗತಿಗೆ ತಡೆಯೊಡ್ಡುತ್ತದೆ. ಯಶಸ್ಸಿಗೆ ಸ್ಪಷ್ಟವಾದ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಡೆತಡೆಗಳನ್ನು ನಿವಾರಣೆ ಮಾಡಲು ರೇಖೆಯನ್ನು ನೇರವಾಗಿ ಎಳೆಯಬೇಕು ಎನ್ನುತ್ತಾರೆ ವಾಸ್ತು ತಜ್ಞರು.
ಸಹಿಯಲ್ಲಿ ಮಾರ್ಪಾಡು, ಗೆರೆಯನ್ನು ಸೇರಿಸುವುದು ಪ್ರಯೋಜನಕಾರಿ. ಸಹಿಯ ಕೆಳಗೆ ನೇರ ಮತ್ತು ಉದ್ದವಾದ ಗೆರೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಯಶಸ್ಸನ್ನು ಆಹ್ವಾನಿಸುತ್ತದೆ. ತುಂಬಾ ಚಿಕ್ಕದಾದ, ಬಾಗಿದ ಅಥವಾ ಜಟಿಲವಾಗಿರುವ ಗೆರೆಯು ಬದುಕಿನಲ್ಲಿ ತೊಂದರೆಗಳಿಗೆ ಅಹ್ವಾನ ನೀಡುತ್ತದೆ.
ಸಹಿಯ ಕೆಳಗಿನ ಗೆರೆಯು ಸಹಿಗಿಂತ ನೇರ, ಉದ್ದ ಮತ್ತು ಸ್ಪಷ್ಟವಾಗಿರಬೇಕು. ಇದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ವಾಸ್ತು ತಜ್ಞರು.