ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today February 12th: ರವಿ ಕುಂಭ ರಾಶಿಗೆ ಪ್ರವೇಶ; ಯಾವ ರಾಶಿಗೆ ಶುಭಯೋಗ?

ನಿತ್ಯ ಭವಿಷ್ಯ ಫೆಬ್ರವರಿ 12, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಕೃಷ್ಣೆ ಪಕ್ಷದ, ದಶಮಿ ತಿಥಿ, ಜೇಷ್ಠ ನಕ್ಷತ್ರದ ಫೆಬ್ರವರಿ 12ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಈ ರಾಶಿಯವರಿಗೆ ಇಂದು ಯಶಸ್ಸಿನ ಫಲ ಪ್ರಾಪ್ತಿ!

(ಸಂಗ್ರಹ ಚಿತ್ರ) -

Profile
Pushpa Kumari Feb 12, 2026 8:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಕೃಷ್ಣೆ ಪಕ್ಷದ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಜೇಷ್ಠ ನಕ್ಷತ್ರ ಇದ್ದು ರವಿ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಮೇಷ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮಿತ್ರರಿಂದ ಧನ ಆಗಮನ ವಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಕೆಲಸದಲ್ಲಿ ಪ್ರಮೋಷನ್ ಸಿಗಲಿದೆ. ಉತ್ತಮ ಹುದ್ದೆಗಳು ನಿಮಗೆ ಪ್ರಾಪ್ತಿ ಯಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಕ್ಲೇಷಗಳು ಮಾಯವಾಗುತ್ತದೆ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:



ಕಟಕ ರಾಶಿ: ಕಟಕ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಅತೀ ಹೆಚ್ಚಿನ ಕ್ಲೇಷ ಉಂಟಾಗಲಿದ್ದು ಹಿಂಸೆಯಾಗುವ ಸಾಧ್ಯತೆ ಇದೆ. ಯಾರ ಸಹಕಾರ ಕೂಡ ಇಂದು ಇರುವುದಿಲ್ಲ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ.‌ ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ನಿಮ್ಮ ಪ್ರೀತಿ ಪಾತ್ರರ ಜೊತೆ ಕಲಹ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗಲಿದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕೂಡ ಪ್ರಾಪ್ತಿ ಯಾಗುತ್ತದೆ.

Vastu Tips: ಮನೆ ಗುಡಿಸುವುದಕ್ಕೆ ಮಾತ್ರವಲ್ಲ ಒರೆಸುವುದಕ್ಕೂ ಇದೆ ವಾಸ್ತು ನಿಯಮ! ಈ ಸಮಯದಲ್ಲಿ ನೆಲ ಒರೆಸಿದ್ರೆ ಅಪಾಯ ತಪ್ಪಿದ್ದಲ್ಲ

ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟಕರವಾದ ಗೋಚರ ಇರಲಿದೆ. ಪ್ರೀತಿ,ಪ್ರೇಮ ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಹಣಕಾಸಿನ ವಿಚಾರದಲ್ಲೂ ಕಷ್ಟ ಎದುರಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ಇರಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಸಂಸಾರದಲ್ಲಿ ಕೂಡ ತಾಪತ್ರಯಗಳು ಕಾಡುವ ಸಾಧ್ಯತೆ ಹೆಚ್ಚು ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಮಾರುಕಟ್ಟೆ ವ್ಯವಹಾರದಲ್ಲಿ ಯಶಸ್ಸು ಕಾಣುತ್ತೀರಿ.

ಮಕರ ರಾಶಿ: ಮಕರ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ. ಮನೆಯಲ್ಲಿ ಕುಟುಂಬದ ಜೊತೆ ಸಮಾಧಾನ ಕರವಾಗಿ ವ್ಯವಹಾರ ಮಾಡಬೇಕು‌

ಕುಂಭರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿ ಜಾಸ್ತಿಯಾಗಲಿದ್ದು ಯಶಸ್ಸು ಪ್ರಾಪ್ತಿಯಾಗುತ್ತದೆ‌. ಉತ್ತ‌ಮ ಗೌರವವನ್ನು ಇಂದು ನೀವು ಪಡೆದುಕೊಳ್ಳುತ್ತೀರಿ.

ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ಹಣಕಾಸಿನ ವಿಚಾರವಾಗಿಯೂ ತೊಂದರೆ ಆಗಬಹುದು‌ ಹಾಗಾಗಿ ಧ್ಯಾನಾಧಿಗಳನ್ನು ಮಾಡಿ ಸಮಯ ಕಳೆಯಬೇಕಾಗುತ್ತದೆ.