ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ vs ಪಾಕ್‌ ಪಂದ್ಯಕ್ಕೆ ಮತ್ತೊಂದು ಕಂಟಕ; ಪಂದ್ಯ ನಡೆಯುವುದು ಅನುಮಾನ!

IND vs PAK T20 World Cup clash:ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ನಡೆಯದಿದ್ದರೆ ₹2200 ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ಐಸಿಸಿಯೇ ನೇರ ಅಥವಾ ಪರೋಕ್ಷವಾಗಿ ₹1500 ಕೋಟಿ ನಷ್ಟಕ್ಕೊಳಗಾಗುತ್ತಿತ್ತು. ಸದ್ಯಕ್ಕೆ ಇದರಿಂದ ಪಾರಾಗಿದೆ. ಪಂದ್ಯದ ಪ್ರಸಾರ ಹಕ್ಕಿನ ಮೊತ್ತ, ಪ್ರಾಯೋಜಕತ್ವ, ಟಿಕೆಟ್‌ ಹಣ, ಜಾಹೀರಾತುಗಳಿಂದ ಆಗುತ್ತಿದ್ದ ನಷ್ಟವನ್ನು ತಪ್ಪಿಸಿಕೊಂಡಿದೆ.

ಫೆ.15ಕ್ಕೆ ಭಾರತ vs ಪಾಕ್‌ ಪಂದ್ಯ ನಡೆಯುವುದು ಅನುಮಾನ!

Colombo weather forecast on Sunday is not great -

Abhilash BC
Abhilash BC Feb 12, 2026 11:26 AM

ಕೊಲಂಬೊ, ಫೆ.12: ಟಿ20 ವಿಶ್ವಕಪ್‌(T20 World Cup 2026)ನಲ್ಲಿ ಭಾರತ ವಿರುದ್ಧ ಫೆ.15ರಂದು ನಿಗದಿಯಾಗಿರುವ ಪಂದ್ಯದಲ್ಲಿ ಆಡಲ್ಲ ಎಂದಿದ್ದ ಪಾಕಿಸ್ತಾನ ತನ್ನ ನಿರ್ಧಾರದಿಂದ ಈಗಾಗಲೇ ಹಿಂದೆ ಸರಿದಿದೆ. ಅದರಂತೆ ಭಾರತ-ಪಾಕ್‌(IND vs PAK T20 World Cup clash) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿದ್ದರೂ ಪಂದ್ಯ ನಡೆಯುವುದು ಅನುಮಾನ.

ಹೌದು, ಈ ತಿಂಗಳು ಕೊಲಂಬೊದಲ್ಲಿ ಮಳೆಯ ವಾತಾವರಣವಿದ್ದು, ಹಲವಾರು ಅಭ್ಯಾಸ ಪಂದ್ಯಗಳು ಸಹ ಮಳೆಯಿಂದ ರದ್ದಾಗಿವೆ. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರೀ ಮಳೆಯ ಭೀತಿ ಎದುರಾಗಿದೆ. ಭಾನುವಾರದ ಮೊದಲು ಕೊಲಂಬೊದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 14 ರಂದು, ಭಾರೀ ಮಳೆಯಾಗುವ ಸಾಧ್ಯತೆ 65% ರಷ್ಟಿದೆ, ಭಾನುವಾರವೂ ಸಹ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿಲ್ಲ.

ಗೂಗಲ್ ಹವಾಮಾನದ ಪ್ರಕಾರ, ಫೆಬ್ರವರಿ 15 ರ ಭಾನುವಾರ ಕೊಲಂಬೊದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಮತ್ತು ಅದೇ ಕಾರಣಕ್ಕಾಗಿ, ಬಹುನಿರೀಕ್ಷಿತ ಟಿ20 ವಿಶ್ವಕಪ್ ಪಂದ್ಯ ವಿಳಂಬವಾಗಿ ಆರಂಭವಾಗಬಹುದು. ರಾತ್ರಿಯೂ ಮಳೆ ನಿರೀಕ್ಷಿಸಲಾಗಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಹಂಚಲಾಗುತ್ತದೆ.

ಪಾಕಿಸ್ತಾನ ಪಂದ್ಯಕ್ಕೆ ಭಾರತ ಈಗಾಗಲೇ ಸಿದ್ಧವಾಗಿದೆ; ತಿಲಕ್ ವರ್ಮಾ

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣವು ಈಗಾಗಲೇ ಶ್ರೀಲಂಕಾ ವಿರುದ್ಧ ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್ ಪಂದ್ಯಗಳನ್ನು ಆಯೋಜಿಸಿದೆ. ಮತ್ತು ಭಾನುವಾರ ಭಾರತ ಪಾಕಿಸ್ತಾನ ವಿರುದ್ಧ ಆಡುವ ಮೊದಲು ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಮುಖಾಮುಖಿಯನ್ನೂ ಆಯೋಜಿಸಲಿದೆ.

ಭದ್ರತೆ ಕಾರಣ ನೀಡಿ ಬಾಂಗ್ಲಾ ತಂಡ ಭಾರತದಲ್ಲಿ ವಿಶ್ವಕಪ್‌ ಪಂದ್ಯ ಆಡಲ್ಲ ಎಂದು ಪಟ್ಟುಹಿಡಿದಿತ್ತು. ಹೀಗಾಗಿ ಬಾಂಗ್ಲಾವನ್ನು ಐಸಿಸಿ ವಿಶ್ವಕಪ್‌ನಿಂದಲೇ ಹೊರಗಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಪಾಕ್‌ ಸರ್ಕಾರ, ಭಾರತ ವಿರುದ್ಧ ಫೆ.15ರ ಪಂದ್ಯ ಆಡಲ್ಲ ಎಂದು ಹೇಳಿತ್ತು. ಬಳಿಕ ಇದನ್ನು ಪುನರುಚ್ಚರಿಸಿದ್ದ ಪ್ರಧಾನಿ ಶೆಹಬಾಜ್‌ ಶರೀಫ್‌, ಪಂದ್ಯ ಆಡಲ್ಲ ಎಂದಿದ್ದರು. ಬಳಿಕ ಐಸಿಸಿ ಸಭೆ ನಡೆಸಿ ಪಂದ್ಯವನ್ನು ಆಡುವಂತೆ ಮನವೊಲಿಸಿದ ಬಳಿಕ ಪಾಕ್‌ ಸಮ್ಮತಿ ಸೂಚಿಸಿತ್ತು.

ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ನಡೆಯದಿದ್ದರೆ ₹2200 ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ಐಸಿಸಿಯೇ ನೇರ ಅಥವಾ ಪರೋಕ್ಷವಾಗಿ ₹1500 ಕೋಟಿ ನಷ್ಟಕ್ಕೊಳಗಾಗುತ್ತಿತ್ತು. ಸದ್ಯಕ್ಕೆ ಇದರಿಂದ ಪಾರಾಗಿದೆ. ಪಂದ್ಯದ ಪ್ರಸಾರ ಹಕ್ಕಿನ ಮೊತ್ತ, ಪ್ರಾಯೋಜಕತ್ವ, ಟಿಕೆಟ್‌ ಹಣ, ಜಾಹೀರಾತುಗಳಿಂದ ಆಗುತ್ತಿದ್ದ ನಷ್ಟವನ್ನು ತಪ್ಪಿಸಿಕೊಂಡಿದೆ.