ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಎಪ್ರಿಲ್ 3, 2026: ಈ ರಾಶಿಗೆ ವೃತ್ತಿಜೀವನದಲ್ಲಿ ಏರುಪೇರು ಸಾಧ್ಯತೆ!

Horoscope Today April 3: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ಪ್ರತಿಭಾ ತಿಥಿ, ಚಿತ್ತ ನಕ್ಷತ್ರದ ಎಪ್ರಿಲ್ 3ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಬದಲಾವಣೆ ಸಾಧ್ಯ

ಇಂಟರ್ ನೆಟ್ ಚಿತ್ರ -

Profile
Pushpa Kumari Apr 3, 2026 7:00 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು ಚೈತ್ರ ಮಾಸೆ, ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೆ ನಾನಾ ರೀತಿಯ ಯೋಚನೆಗಳು ಕಾಡುತ್ತಿರುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರಿಂದ ನೆಮ್ಮದಿ ಸಿಗುತ್ತದೆ‌

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಮಧ್ಯಾಹ್ನವರೆಗೂ ಅನೇಕ ರೀತಿಯ ಸಮಸ್ಯೆಗಳು ಇರುತ್ತವೆ. ಮಧ್ಯಾಹ್ನ ಬಳಿಕ ನಿಮಗೆ ಇದ್ದ ತೊಂದರೆಗಳು ಮಾಯವಾಗುತ್ತದೆ. ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯಗಳು ಜಾಸ್ತಿಯಾಗುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿವಂತಿಕೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ

ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಮಧ್ಯಾಹ್ನ ಬಳಿಕ ಮನೆಯ ತಾಪತ್ರಯಗಳು ಜಾಸ್ತಿಯಾಗುತ್ತವೆ. ಹಾಗಾಗಿ ಎರಡನ್ನು ನೀವು ಸರಿದೂಗಿಸಿಕೊಳ್ಳಬೇಕು‌.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:



ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೆ ಕುಟುಂಬದ ಆಗು- ಹೋಗುಗಳ ಬಗ್ಗೆ ಯೋಚನೆ ಮಾಡುತ್ತೀರಿ. ಮಧ್ಯಾಹ್ನ ಬಳಿಕ ಬಂಧು ಮಿತ್ರರ ಸಮಾಗಮದಿಂದ ಸಂತೋಷ ಪ್ರಾಪ್ತಿಯಾಗುತ್ತದೆ.

Vastu Tips: ಮನೆಯಲ್ಲಿ ದೇವರ ಮೂರ್ತಿ ಹೇಗಿರಬೇಕು? ವಾಸ್ತು ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ?

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಇರಿಸು- ಮುರಿಸು ಜಾಸ್ತಿಯಾಗಬಹುದು. ಮಧ್ಯಾಹ್ನ ಬಳಿಕ ನೆಮ್ಮದಿ ಸಿಗಲಿದ್ದು ಕುಟುಂಬದಿಂದ ಬಹಳ ಸಂತೋಷದ ಸುದ್ದಿ ಕೇಳಿಬರುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಮದ್ಯಾಹ್ನವರೆಗೂ ಮನಸ್ಸಿಗೆ ನಾನಾ ರೀತಿಯ ಯೋಚನೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದ್ದು ಶುಭದಾಯಕವಾಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಬಹಳನೇ ಸಂತೋಷಕರವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ನಿಮ್ಮ ಸ್ನೇಹಿತರ ಜೊತೆ ಬೇಸರ ಉಂಟಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಗೆ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚು ಇರುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಇಷ್ಟಾರ್ಥ ಸಿದ್ದಿಯಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಏರು ಪೇರು ಉಂಟಾಗಬಹುದು. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ತೊಂದರೆಗಳು ಉಂಟಾಗಬಹುದು.ಮಧ್ಯಾಹ್ನ ಬಳಿಕ ನೀವು ಖುಷಿಯಿಂದ ದಿನವನ್ನು ಕಳೆಯಬಹುದು.

ಮೀನ ರಾಶಿ: ಮೀನ ರಾಶಿಗೆ ಮಧ್ಯಾಹ್ನವರೆಗೆ ಎಲ್ಲವೂ ನಿಮ್ಮ ಪರವಾಗಿ ಇರುತ್ತದೆ. ಮಧ್ಯಾಹ್ನ ಬಳಿಕ ಸ್ನೇಹಿತರ ಜೊತೆ ಕಲಹ ಉಂಟಾಗಬಹುದು.. ಮನಸ್ಸಿಗೆ ಬೇಸರ ಕೂಡ ಮೂಡಬಹುದು.