ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಫೆಬ್ರವರಿ 19, 2026; ಗುರುವಿನ ಪ್ರಭಾವದಿಂದ ಈ ರಾಶಿಗೆ ವೃತ್ತಿ- ವ್ಯವಹಾರದಲ್ಲಿ ಲಾಭ!

Horoscope Today February 19: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು ಪಾಲ್ಗುಣಿ ಮಾಸೆ, ಶುಕ್ಷ ಪಕ್ಷದ, ದ್ವೀತಿಯ ತಿಥಿ, ಪೂರ್ವಾಭಾದ್ರಾ ಪದ ನಕ್ಷತ್ರದ ಫೆಬ್ರವರಿ 19ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಗುರುವಿನಿಂದ ಯಾವ ರಾಶಿಗೆ ಇಂದು ಒಳಿತಾಗಲಿದೆ?

ಇಂಟರ್ ನೆಟ್ ಚಿತ್ರ -

Profile
Pushpa Kumari Feb 19, 2026 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಪಾಲ್ಗುಣಿ ಮಾಸೆ, ಪೂರ್ವಾಭಾದ್ರಾ ಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಪೂರ್ವಾಭಾದ್ರಾಪದ ನಕ್ಷತ್ರ ಇದ್ದು ಅಧಿಪತಿ ಗುರು ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮವಾದ ದಿನ ವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಬಂಧು ಮಿತ್ರರಿಂದ ಧನ‌ ಆಗಮನವಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಎಲ್ಲ ಕೆಲಸದಲ್ಲೂ ಗೌರವ ಪ್ರಾಪ್ತಿಯಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಭಾಗ್ಯೋದಯವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನಗಳ ಕ್ಲೇಷ ಎಲ್ಲವೂ ಮಾಯವಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ನಿಮ್ಮ ಪ್ರೀತಿ ಪಾತ್ರರಿಂದ ನಿಮಗೆ ಬೇಕಾದ ಸಹಕಾರ ಸಿಗುವುದಿಲ್ಲ.ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ರೀತಿಯಿಂದಲೂ ಸಹಕಾರ ಸಿಗಲಿದೆ.

Vastu Tips: ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕಾ..?; ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದ್ದು ಸಾಮಾಜಿಕ ಚಟುವಟಿಕೆ ಯಲ್ಲಿ ಜಯ ಸಿಗುತ್ತದೆ. ಶತ್ರುಗಳನ್ನು ನೀವು ಹಿಮ್ಮೆಟ್ಟಬಹುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಮುಖ್ಯವಾದ ಹಣಕಾಸಿನ ವಿಚಾರವಾಗಿ ತೊಂದರೆಯಾಗಬಹುದು. ಪ್ರೇಮ, ಪ್ರೀತಿ ಪ್ರಕರಣದಲ್ಲೂ ಮನಸ್ಸಿಗೆ ಕಷ್ಟವಾಗುವ ಸಾಧ್ಯತೆ ಇರುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ತಾಯಿಯ ಆರೋಗ್ಯ, ಸಂಸಾರದ ತಾಪತ್ರಯಗಳು,ಆಸ್ತಿ ಪಾಸ್ತಿ ವಿಚಾರಗಳು ಇದರ ತಲೆನೋವು ಹೆಚ್ಚಾಗಿಯೇ ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಾಧ್ಯಮ, ಮಾರ್ಕೆಟಿಂಗ್ ವ್ಯವಹಾರದಲ್ಲಿ ಇರೋರಿಗೆ ಈ ದಿನ ಉತ್ತಮವಾಗಿದೆ.

ಮಕರ ರಾಶಿ: ಮಕರ ರಾಶಿಯವರು ಸಂಸಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಪ್ರೀತಿ ಪಾತ್ರರಿಂದ ಅತೀ ಹೆಚ್ಚು ಸಹಕಾರ ನಿಮಗೆ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಬಂದಿರುವುದರಿಂದ ಮುಖ್ಯವಾದ ಬದಲಾವಣೆಯನ್ನು ನೀವು ಕಾಣಬಹುದು.

ಮೀನ ರಾಶಿ: ಮೀನ ರಾಶಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ನಿಮಗೆ ಸಿಗುವುದಿಲ್ಲ.