ದಿನ ಭವಿಷ್ಯ, ಮಾರ್ಚ್ 31, 2026: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಭಾರೀ ಯಶಸ್ಸು
Horoscope Today March 31: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ,ಪೂರ್ವ ಫಾಲ್ಗುಣ ನಕ್ಷತ್ರದ ಮಾರ್ಚ್ 31ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು ಚೈತ್ರ ಮಾಸೆ, ಪೂರ್ವ ಫಾಲ್ಗುಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಪೂರ್ವ ಫಾಲ್ಗುಣ ನಕ್ಷತ್ರದ ಅಧಿಪತಿ ಶುಕ್ರ ಆಗಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಆದರೆ ಪ್ರೇಮ, ಪ್ರೀತಿ ಪ್ರಕರಣದಲ್ಲಿ ಕ್ಲಿಷ್ಟಕರವಾದ ದಿನವಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಹೆಂಗಸರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿನಯತೆಯಿಂದ ನೀವು ನಡೆಸಿಕೊಳ್ಳಬೇಕಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ವಾದ ದಿನವಾಗಿದೆ. ಕಾರ್ಯ ಕ್ಷೇತ್ರದಲ್ಲಿ ಲಾಭ ಉಂಟಾಗಲಿದ್ದು ಎಲ್ಲರ ಸಹಕಾರ ಕೂಡ ನಿಮಗೆ ಸಿಗುತ್ತದೆ.
ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:
ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಆದರೆ ಸ್ನೇಹ ಸಂಬಂಧದಲ್ಲಿ ನೀವು ಜಾಗರೂಕತೆಯಿಂದ ಇರ ಬೇಕಾಗುತ್ತದೆ. ಸಮತೋಲ ರೀತಿಯಲ್ಲಿ ನೀವು ವ್ಯವಹಾರ ಮಾಡಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಶತ್ರುನಾಶ, ಶತ್ರು ದ್ವಂಸ ಆಗುತ್ತದೆ. ಎಲ್ಲ ಕೆಲಸದಲ್ಲೂ ಕೂಡ ಅತೀ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ
Vastu Tips: ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಶುಭವೇ? ವಾಸ್ತು-ಫೆಂಗ್ ಶೂಯಿ ಹೇಳೋದೇನು?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ನಿಮ್ಮ ಮಿತ್ರತ್ವದಲ್ಲಿ ಒಡಕು ಕಾಣುವ ಸಾಧ್ಯತೆಗಳು ಇರುತ್ತದೆ. ಆಧ್ಯಾತ್ಮಿಕ ಮೂಲಕ ಮನಸ್ಸಿಗೆ ಖುಷಿ ಕಾಣಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಿತ್ರರಿಂದ ಬಹಳನೇ ಒಳಿತು ನಿಮಗೆ ಸಿಗುತ್ತದೆ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಅದೇ ರೀತಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕೂಡ ಸಿಗುತ್ತದೆ. ಆದರೆ ತಾಳ್ಮೆ ನಿಮಗೆ ಬಹಳ ಮುಖ್ಯವಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಮನಸ್ಸಿಗೆ ನೆಮ್ಮದಿ ಇದ್ದು ಭಾಗ್ಯೋದಯವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ನೋವೆಲ್ಲ ಪರಿಹಾರವಾಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಹೆಂಗಸರ ಮೂಲಕ ನಿಮಗೆ ಮನಸ್ಸಿಗೆ ನೋವು ಉಂಟಾಗಬಹುದು.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ವಿನಯತೆಯಿಂದ ಎಲ್ಲರ ಜೊತೆ ನಡೆದುಕೊಳ್ಳಬೇಕು.
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ.. ಮನಸ್ಸಿಗೆ ನೆಮ್ಮದಿ ಇದ್ದು ಶತ್ರುಗಳನ್ನು ಹಿಮ್ಮೆಟ್ಟಲಿದ್ದಾರೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ.