ದಿನ ಭವಿಷ್ಯ, ಸೆಪ್ಟೆಂಬರ್ 29, 2026: ಆರ್ಥಿಕವಾಗಿ ಅಭಿವೃದ್ಧಿ ಕಾಣುವ ದಿನ ಇಂದು
Horoscope Today September 29th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದ್ವೀತಿಯ ತಿಥಿ, ಅಶ್ವಿನಿ ನಕ್ಷತ್ರದ, ಸೆಪ್ಟೆಂಬರ್ 29ನೇ ತಾರೀಕಿನ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ
ಮೇಷ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ದಿನದಲ್ಲಿ ಇದ್ದ ತೊಂದರೆಗಳೆಲ್ಲ ಮಾಯವಾಗುವ ದಿನ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.
ವೃಷಭ ರಾಶಿ: ಇಂದು ಈ ರಾಶಿಯವರಿಗೆ ಕ್ಷೇಶ ಕಂಡು ಬರುವ ದಿನವಾಗಲಿದೆ. ಯಾವುದೇ ಮುಖ್ಯ ನಿರ್ಧಾರ ಇಂದು ಕೈಗೊಳ್ಳಲು ಹೋಗಬೇಡಿ. ಕೆಲಸ ಕಾರ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಮಿಥುನ ರಾಶಿ: ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು, ತೃಪ್ತಿ ಸಿಗುತ್ತದೆ. ಧನ ಲಾಭದ ಸೂಚನೆ ಇದೆ. ಸಂತೋಷದಿಂದ ಇಂದು ಸಮಯವನ್ನು ಕಳೆಯುತ್ತೀರಿ.
ಕಟಕ ರಾಶಿ: ಇಂದು ಕಷ್ಟದ ದಿನವಾಗಲಿದೆ. ಕಾರ್ಯಕ್ಷೇತ್ರದ ಜವಾಬ್ದಾರಿ ಇಂದು ಹೆಚ್ಚಾಗಬಹುದು. ಯಾವುದೇ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಿ.
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ತೊಂದರೆ ಮಾಯವಾಗಬಹುದು. ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತದೆ.
ಕನ್ಯಾ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಪ್ರೀತಿ ಪಾತ್ರರ ಸಹಕಾರ ಸಿಗದೇ ಇರಬಹುದು. ದಾಂಪತ್ಯದಲ್ಲೂ ತೊಂದರೆ ಎದುರಿಸಬೇಕಾಗಿ ಬರಬಹುದು.
ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ
ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಮಾತುಕತೆಯಲ್ಲಿ ಯಾರು ಕೂಡ ನಿಮ್ಮ ಪರವಾಗಿ ಇಂದು ನಿಲ್ಲುವುದಿಲ್ಲ.
ವೃಶ್ಚಿಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಶಸ್ಸು ಸಿಗುತ್ತದೆ. ಶತ್ರು ನಾಶವಾಗಲಿದೆ.
ಧನು ರಾಶಿ: ಇಂದು ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರದಲ್ಲಿ ಯಶಸ್ಸು ನಿಮ್ಮದಾಗುವುದಿಲ್ಲ. ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಮಕರ ರಾಶಿ: ಇಂದು ಕಷ್ಟದ ದಿನವಾಗಲಿದ್ದು ಪರಿಶ್ರಮಕ್ಕೆ ತಕ್ಕ ಫಲ ದೊರೆಯದೇ ಇರಬಹುದು. ಆರ್ಥಿಕವಾಗಿ ತೊಂದರೆ ಎದುರಿಸಬೇಕಾಗಿ ಬರಬಹುದು.
ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದ್ದು, ನೆಮ್ಮದಿಯನ್ನು ಕಾಣುತ್ತೀರಿ. ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು, ಸಮೃದ್ಧಿ ನಿಮ್ಮದಾಗುತ್ತದೆ.
ಮೀನ ರಾಶಿ: ಇಂದು ಕಷ್ಟದ ದಿನವಾಗಲಿದೆ. ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಹೋಗಬೇಡಿ. ವ್ಯವಹಾರದಲ್ಲೂ ತೊಂದರೆ ಎದುರಾಗಬಹುದು.