ದಿನ ಭವಿಷ್ಯ, ಮೇ 15, 2026: ಈ ರಾಶಿಯವರಿಗೆ ಇಂದು ಆರ್ಥಿಕ ಯಶಸ್ಸಿಗೆ ಪ್ರಶಸ್ತ ಕಾಲ!
Horoscope Today May 15th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷದ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರದ ಮೇ 15 ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷದ ಚತುರ್ದಶಿ ತಿಥಿ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಇಂದು ರವಿ ಮತ್ತು ಬುಧ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಮೇಷ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಹಣಕಾಸಿನ ತೊಂದರೆ ಇಂದು ಉಂಟಾಗಲಿದ್ದು ಹಣ ವ್ಯಯವಾಗುವ ಸಾಧ್ಯತೆ ಇದೆ.
ವೃಷಭ ರಾಶಿ: ಈ ರಾಶಿಗೆ ಇಂದು ವೈಯಕ್ತಿಕವಾಗಿ ಕೆಲವೊಂದು ಟೀಕೆಯನ್ನು ಕೇಳಬೇಕಾಗಿ ಬರಬಹುದು. ಇದರಿಂದ ನೀವು ಬಹಳಷ್ಟು ನೊಂದುಕೊಳ್ಳಬಹುದು. ಅದೇ ರೀತಿ ಮನಸ್ಸಿಗೆ ಬೇಸರವಾಗುವ ಸಾಧ್ಯತೆಗಳು ಕೂಡ ಇರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ರವಿ ಹಾಗೂ ಬುಧ ನಿಮ್ಮ ವ್ಯಯ ಭಾವಕ್ಕೆ ಬಂದಿರುವುದರಿಂದ ದೊಡ್ಡದಾದ ಬದಲಾವಣೆಗಳು ಇಂದು ಸಾಧ್ಯವಾಗುತ್ತದೆ. ಕೆಲಸ ಕಾರ್ಯದಲ್ಲಿ ಕೂಡ ಇಂದು ನೀವು ಜಯವನ್ನು ಕಾಣುತ್ತೀರಿ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಇಷ್ಟಾರ್ಥ ಸಿದ್ದಿ ಯಾಗಲಿದ್ದು ಮನಸ್ಸಿಗೆ ಅತೀಯಾದ ನೆಮ್ಮದಿ ಸಿಗುವ ದಿನ ವಾಗಿದೆ. ಧನ ಆಗಮನದ ಸೂಚನೆಗಳು ಇದ್ದು ಮಿತ್ರರಿಂದ ಹೆಚ್ಚಿನ ಸಹಕಾರ ನಿಮಗೆ ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಇಷ್ಟಾರ್ಥ ಸಿದ್ದಿಯಾಗಲಿದ್ದು ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಹೆಚ್ಚಿದೆ. ಅತೀ ಹೆಚ್ಚಿನ ಹಣಕಾಸಿನ ಲಾಭ ನಿಮಗೆ ಸಿಗಲಿದ್ದು ಈ ಹಿಂದೆ ಕಾಣದಷ್ಟು ಜಯವನ್ನು ಕಾಣುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಭಾಗ್ಯ ಸ್ಥಾನಕ್ಕೆ ರವಿ ಬಂದಿದ್ದಾನೆ. ಸ್ವಲ್ಪ ಕಠಿಣವಾದ ಸಂದರ್ಭ ನೀವು ಎದುರಿಸ ಬೇಕಾಗಿ ಬರಬಹುದು. ಯಾವುದೇ ರೀತಿಯಾಗಿ ನೀವು ತಲೆ ಕೆಡಿಸಿಕೊಳ್ಳದೆ ತಾಳ್ಮೆಯಿಂದ ಇದ್ದರೆ ಒಳಿತು
ತುಲಾ ರಾಶಿ: ತುಲಾ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ತೆಗೆದು ಕೊಳ್ಳಬೇಡಿ. ಯಾರ ಸಹಕಾರ ಕೂಡ ನಿಮಗೆ ಸಿಗದೇ ಇರಬಹುದು.
ವೃಶ್ಚಿಕ ರಾಶಿ: ಈ ರಾಶಿಗೆ ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ತೊಂದರೆ ಹಾಗೂ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲೂ ಬಹಳಷ್ಟು ತೊಂದರೆಗಳು ಕಾಡುವ ಸಾಧ್ಯತೆ ಇರುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಎಲ್ಲವೂ ಮಾಯವಾಗುತ್ತದೆ. ಹಣಕಾಸಿನ ಅಭಾವ ಇಂದು ಬಗೆಹರಿಯುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ತೊಂದರೆಗಳು ಎದುರಿಸಬೇಕಾಗಿ ಬರಬಹುದು. ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಎದುರಾಗಬಹುದು.
ಕುಂಭ ರಾಶಿ: ಈ ರಾಶಿಯವರಿಗೆ ಆಸ್ತಿ ಪಾಸ್ತಿ ವಿಚಾರವಾಗಿ ತೊಂದರೆ ಕಾಡಬಹುದು. ಮನೆಯವರ ಜೊತೆ ಕಲಹ ಉಂಟಾಗುವ ಸಾಧ್ಯತೆಗಳು ಹೆಚ್ಚು ಇರಬಹುದು.
ಮೀನ ರಾಶಿ: ಮೀನ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಮಯ ವಾಗುತ್ತದೆ. ಈ ಹಿಂದೆ ಕಾಣದಷ್ಟು ಯಶಸ್ಸು ನೀವು ಇಂದು ಕಾಣಬಹುದು.