ದಿನ ಭವಿಷ್ಯ, ಎಪ್ರಿಲ್ 21, 2026: ಈ ರಾಶಿಗಳಿಗೆ ಇಂದು ಗಜಕೇಸರಿ ಯೋಗ
Horoscope Today April 21: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ಪಂಚಮಿ ತಿಥಿ ಮೃಗಶಿರ ನಕ್ಷತ್ರದ ಎಪ್ರಿಲ್ 21ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು, ವೈಶಾಖ ಮಾಸೆ, ಪಂಚಮಿ ತಿಥಿ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೃಗಶಿರ ನಕ್ಷತ್ರದ ಅಧಿಪತಿ ಕುಜ ಆಗಿದ್ದಾನೆ. ಅದೇ ರೀತಿ ಮಿಥುನ ರಾಶಿಯಲ್ಲಿ ಗುರು ಕೂಡ ಇದ್ದಾನೆ. ಹಾಗಾಗಿ ಇಂದು ಕೆಲವು ರಾಶಿಗೆ ಗಜಕೇಸರಿ ಯೋಗವು ಇರಲಿದೆ. ಮೇಷ ರಾಶಿಗೆ ಉತ್ತಮವಾದ ದಿನವಾಗಿದ್ದು ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ,ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಲಾಭದಾಯಕ ದಿನವಾಗಿದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮನೆಯಲ್ಲಿ ಅತೀ ಸಂಭ್ರಮದ ವಾತಾವರಣ ಇಂದು ಇರುತ್ತದೆ. ನಿಮ್ಮ ಫ್ಯಾಮಿಲಿ ಜೊತೆ ಸೇರಿ ಖುಷಿಯಾದ ದಿನವನ್ನು ನೀವು ಕಳೆಯಲಿದ್ದೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಗಜಕೇಸರಿ ಯೋಗ ಇರುತ್ತದೆ. ಬಹಳ ಮುಖ್ಯವಾದ ವೈಯಕ್ತಿಕ ನಿರ್ಧಾರವನ್ನು ನೀವು ಇಂದು ಕೈಗೊಳ್ಳಬಹುದು. ಇಷ್ಟು ದಿನ ಕೊರಗುತ್ತಿದ್ದ ಕೆಲವೊಂದು ವಿಚಾರಕ್ಕೆ ಇಂದು ಪರಿಹಾರ ಸಿಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಸೋಲು ನಿಮಗೆ ಉಂಟಾಗಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗುಂಪು ಕೆಲಸದಲ್ಲೂ ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ನೀವು ಗಳಿಸುತ್ತೀರಿ.
Vastu Tips: ವಾಸ್ತು ಶಾಸ್ತ್ರ ಹೇಳುವ ರಹಸ್ಯ ಇದು; ಮನೆಯ ಸಂಪತ್ತು ಹೆಚ್ಚಾಗಲು ಈ ದೇವರ ಫೋಟೋಗಳನ್ನ ಇಡಿ
ತುಲಾ ರಾಶಿ: ತುಲಾ ರಾಶಿಯವರಿಗೆ ನಿಮ್ಮ ಭಾಗ್ಯ ಸ್ಥಾನಕ್ಕೆ ಚಂದ್ರ ಬಂದಿದ್ದಾನೆ. ಇದರಿಂದ ಕೆಲವು ವಿಚಾರಕ್ಕೆ ನಿಮಗೆ ಒಳ್ಳೆದಾಗುತ್ತದೆ. ಕೆಲವು ವಿಚಾರದಲ್ಲಿ ಸೋಲು ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ಇರುತ್ತದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಅತೀ ಉತ್ತಮವಾದ ದಿನವಾಗಿದೆ. ಸಪ್ತಮದಲ್ಲಿ ಗಜ ಕೇಸರಿ ಯೋಗ ಇದೆ. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ತೊಂದರೆ ಇದ್ದರೆ ಪರಿಹಾರ ವಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಶತ್ರುಗಳನ್ನು ಹಿಮ್ಮೆಟ್ಟಬಹುದು. ಮಾತಿನಲ್ಲಿ ನಿಗಾ ಇಟ್ಟರೆ ಒಳ್ಳೆಯದು
ಕುಂಭರಾಶಿ: ಈ ರಾಶಿಯವರಿಗೆ ಅತೀ ಉತ್ತಮವಾಗಿದೆ. ಮಕ್ಕಳಿನಿಂದ ಬಹಳ ದೊಡ್ಡ ಕೀರ್ತಿಯನ್ನು ನೀವು ಪಡೆಯಬಹುದು.
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಗಜಕೇಸರಿ ಯೋಗ ನಿಮಗೆ ಇದ್ದು ದೊಡ್ಡದಾದ ಲಾಭ ಪಡೆಯಬಹುದು. ಆಸ್ತಿ ಪಾಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪಾಲು ನಿಮ್ಮದು ಆಗಬಹುದು.