ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಊಟದ ಮೇಜಿನ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ಮನೆಯಲ್ಲಿ ಪ್ರತಿಯೊಂದು ವಸ್ತುಗಳನ್ನು ಇಡುವಾಗಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲು ಸಾಧ್ಯವಿದೆ. ನಾವು ಮಾಡುವ ಕೆಲವೊಂದು ತಪ್ಪುಗಳು ವಾಸ್ತು (Vastu tips) ದೋಷವನ್ನು ಉಂಟು ಮಾಡುತ್ತದೆ. ಅಂತಹ ಒಂದು ತಪ್ಪನ್ನು ನಾವು ಹೆಚ್ಚಾಗಿ ಊಟದ ಟೇಬಲ್ ನಲ್ಲಿ ಮಾಡುತ್ತೇವೆ. ಅದು ಯಾವುದು, ಅದಕ್ಕೆ ಏನು ಪರಿಹಾರ ಇಲ್ಲಿದೆ ಈ ಕುರಿತು ಮಾಹಿತಿ.

ಸ್ವಚ್ಛವಾಗಿರಲಿ ಊಟದ ಮೇಜು

ಕೆಲವೊಂದು ವಸ್ತುಗಳನ್ನು ಊಟದ ಟೇಬಲ್ ( vastu for dining table ) ಮೇಲೆ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು (Vastu for home) ಶಾಸ್ತ್ರಜ್ಞರು. ಮನೆಯಲ್ಲಿ ಊಟದ ಮೇಜನ್ನು (vastu for table) ತಪ್ಪು ದಿಕ್ಕಿನಲ್ಲಿ ಇಡುವುದು ಮಾತ್ರವಲ್ಲ ಅದರ ಮೇಲೆ ಅನುಚಿತ ವಸ್ತುಗಳನ್ನು ಇಡುವುದು ಕೂಡ ಮನೆಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಿಂದ ಕುಟುಂಬ ಸದಸ್ಯರ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಊಟದ ಟೇಬಲ್ ಮೇಲೆ ವಿಚಾರದಲ್ಲಿ ಕೆಲವು ವಿಷಯಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಬಹುದು.

ಊಟದ ಮೇಜು ಹೇಗಿರಬೇಕು?

ಊಟದ ಮೇಜನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ ಕುಟುಂಬ ಸದಸ್ಯರ ಆರೋಗ್ಯ ಹದಗೆಡಬಹುದು. ಆರ್ಥಿಕ ತೊಂದರೆಯ ಎದುರಾಗಬಹುದು. ಅಲ್ಲದೇ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಕುಟುಂಬದಲ್ಲಿ ಒಗ್ಗಟ್ಟು ಮತ್ತು ಶಾಂತಿ ನೆಲೆಸುವಂತೆ ಮಾಡಲು ಊಟದ ಟೇಬಲ್ ಅನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು. ಊಟದ ಮೇಜನ್ನು ಗೋಡೆಯ ಹತ್ತಿರ ಇಡಬಾರದು. ಅದರ ಸುತ್ತಲೂ ಸಾಕಷ್ಟು ಸ್ಥಳವಿರಬೇಕು. ಊಟ ಮಾಡುವಾಗ ಯಾವುದೇ ಸದಸ್ಯರ ಮುಖ ದಕ್ಷಿಣದ ಕಡೆಗೆ ಇರದಂತೆ ಕುಳಿತುಕೊಳ್ಳಬೇಕು. ಊಟದ ಮೇಜು ಅಚ್ಚುಕಟ್ಟಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು. ಅದರ ಸುತ್ತಲೂ ಯಾವುದೇ ನಕಾರಾತ್ಮಕತೆ ಉಂಟು ಮಾಡುವ ವಸ್ತುಗಳನ್ನು ಇಡಬಾರದು.

v2

ಇದನ್ನೂ ಓದಿ: Vastu Tips: ಸಮಸ್ಯೆಗಳಿಗೆ ಅಹ್ವಾನ ಕೊಡುವ ಮೂರು ಮೂಲೆಯ ಮನೆ

ಊಟದ ಮೇಜಿನ ಮೇಲೆ ಇವುಗಳನ್ನು ಇಡಬೇಡಿ

ಊಟದ ಮೇಜಿನ ಮೇಲೆ ಔಷಧಗಳನ್ನು ಇಡಬಾರದು. ಯಾಕೆಂದರೆ ಇದು ಇತರರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಊಟವಾದ ಬಳಿಕ ಕಟ್ಲರಿ ಸೆಟ್ ಅನ್ನು ಮೇಜಿನಿಂದ ತೆಗೆಯಬೇಕು. ಫೋರ್ಕ್‌, ಕತ್ತರಿ ಮತ್ತು ಚಾಕುಗಳಂತಹ ಚೂಪಾದ ವಸ್ತುಗಳನ್ನು ಅಲ್ಲಿ ಇದಕೂಡದು.

ಊಟದ ಮೇಜಿನ ಮೇಲೆ ಯಾವುದೇ ಕೀ ಗಳನ್ನು ಇಡುವುದು ಸರಿಯಲ್ಲ. ಇದರಿಂದ ನಕಾರಾತ್ಮಕ ಪರಿಣಾಮ ಎದುರಿಸಬೇಕಾಗಬಹುದು. ಚೀಲ, ಪುಸ್ತಕ, ಸ್ವಚ್ಛತೆಗೆ ಬಳಸುವ ವಸ್ತುಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಊಟದ ಮೇಜಿನ ಮೇಲೆ ಇಡಕೂಡದು ಎನ್ನುತ್ತಾರೆ ವಾಸ್ತು ತಜ್ಞರು.