ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಅಪ್ಪಿತಪ್ಪಿಯೂ ಟೆರೇಸ್ ಮೇಲೆ ಇವುಗಳನ್ನು ಇಡಬೇಡಿ

ಸಾಮಾನ್ಯವಾಗಿ ಮನೆಯಲ್ಲಿ ಅಲಂಕಾರಿಕ, ಅನುಪಯುಕ್ತವಾದ ಕೆಲವು ವಸ್ತುಗಳನ್ನು ಟೆರೇಸ್ ಮೇಲೆ ತೆಗೆದುಕೊಂಡು ಹೋಗಿ ಇಡುತ್ತೇವೆ. ಹೀಗೆ ಇಡುವಾಗ ಎಚ್ಚರ ವಹಿಸಬೇಕು. ಯಾಕೆಂದರೆ ಇದು ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಬಗ್ಗೆ ತಿಳಿದುಕೊಂಡಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.

ಟೆರೇಸ್ ಇಡಲೇಬಾರದ ವಸ್ತುಗಳು

-

ಬೆಂಗಳೂರು: ಮನೆಯಲ್ಲಿ (Vastu for home) ಪ್ರತಿಯೊಂದು ವಸ್ತುಗಳನ್ನು ಇಡಲು ನಿರ್ದಿಷ್ಟ ಜಾಗ ಎಂಬುದಿದೆ. ಈ ಬಗ್ಗೆ ತಿಳಿಯದೆ ಯಾವುದಾದರೂ ವಸ್ತುವನ್ನು ಇಟ್ಟರೆ ಅದು ಮನೆ ಮಂದಿಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮನೆಯ ಪ್ರತಿಯೊಂದು ಮೂಲೆಯಲ್ಲೂ ವಾಸ್ತು ನಿಯಮ (Vastu tips) ಪಾಲನೆ ಮಾಡಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ. ಇದರಲ್ಲಿ ನಾವು ಮನೆಯ ಮೇಲ್ಛಾವಣಿಯನ್ನು (Vastu for Terrace) ನಿರ್ಲಕ್ಷಿಸಿವಂತಿಲ್ಲ. ಈ ಸ್ಥಳವು ಕೂಡ ಅತ್ಯಂತ ಮಹತ್ವದ್ದಾಗಿದೆ. ಇದು ಮನೆಯಲ್ಲಿರುವ ಶಕ್ತಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ವಾಸ್ತು ಶಾಸ್ತ್ರದಲ್ಲಿ ಮನೆಯ ಮೇಲ್ಛಾವಣಿಗೆ ಸಂಬಂಧಿಸಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಇಲ್ಲಿ ಅನಗತ್ಯ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಇದು ನಾನಾ ವಿಧವಾದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಮನೆ ಛಾವಣಿ ಮೇಲೆ ಕೆಲವೊಂದು ವಸ್ತುಗಳನ್ನು ಇಡಬಾರದು. ಅವುಗಳು ಯಾವುದು ಎನ್ನುವ ಕುರಿತು ವಾಸ್ತು ತಜ್ಞರು ಹೇಳುವುದು ಹೀಗೆ...

ಬಿದಿರು ಅಥವಾ ಅದರಿಂದ ಮಾಡಿದ ವಸ್ತುಗಳನ್ನು ಎಂದಿಗೂ ಮನೆಯ ಛಾವಣಿಯ ಮೇಲೆ ಇಡಬಾರದು. ಛಾವಣಿಯ ಮೇಲೆ ಬಿದಿರನ್ನು ಇಡುವುದರಿಂದ ಮನೆಯ ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ವಸ್ತುಗಳನ್ನು ಯಾವಾಗಲೂ ಶೇಖರಣಾ ಕೋಣೆಯಲ್ಲಿ ಇಡಬೇಕು.

ಇದನ್ನೂ ಓದಿ: Vastu Tips: ಮನೆಗೆ ಸುಖ, ಶಾಂತಿ, ಸಮೃದ್ಧಿ ತರುವ ತುಳಸಿ

ಮನೆಯ ಛಾವಣಿಯ ಮೇಲೆ ಪೊರಕೆಯನ್ನು ಎಂದಿಗೂ ಇಡಬಾರದು. ಯಾಕೆಂದರೆ ಪೊರಕೆಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಛಾವಣಿಯ ಮೇಲೆ ಪೊರಕೆ ಇಡುವುದರಿಂದ ಇದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಮನೆಯ ಛಾವಣಿಯ ಮೇಲೆ ಯಾವತ್ತೂ ತುಕ್ಕು ಹಿಡಿದ ಕಬ್ಬಿಣವನ್ನು ಇಡಬಾರದು. ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಮನೆಯ ಛಾವಣಿಯ ಮೇಲೆ ಹಗ್ಗಗಳನ್ನು ರಾಶಿ ಹಾಕಿಡಬಾರದು. ಇವು ವಾಸ್ತು ದೋಷಗಳಿಗೆ ಕಾರಣವಾಗಬಹುದು. ಒಂದು ವೇಳೆ ಇದ್ದರೆ ಕೂಡಲೇ ತೆಗೆದು ಹಾಕಿ.

ಸಾಮಾನ್ಯವಾಗಿ ಮನೆಗಳ ಸೌಂದರ್ಯ ಹೆಚ್ಚಿಸಲು ಛಾವಣಿಯ ಮೇಲೆ ಗಿಡ ಮರಗಳನ್ನು ಇಡಲಾಗುತ್ತದೆ. ಈ ವೇಳೆ ಮುಳ್ಳಿನ ಸಸ್ಯಗಳು ಇಡದಂತೆ ಎಚ್ಚರಿಕೆ ವಹಿಸಬೇಕು. ಮುಳ್ಳಿನ ಸಸ್ಯಗಳು ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಖಾಲಿ ಬಿಡಬಾರದ ಸ್ಥಳ ಯಾವುದು, ಏಕೆ ಗೊತ್ತೇ?

ಮನೆಯ ಛಾವಣಿ ಮೇಲೆ ಎಂದಿಗೂ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ಮನೆಯ ಛಾವಣಿಯ ಮೇಲೆ ಕಸ ತುಂಬಿಕೊಂಡರೆ ಇದು ಬಡತನವನ್ನು ತರುತ್ತದೆ ಎನ್ನಲಾಗುತ್ತದೆ.

ಮನೆಯ ಛಾವಣಿಯ ಮೇಲೆ ಮುರಿದ ವಸ್ತುಗಳನ್ನು ಇಡುವುದು ಕೂಡ ಅಶುಭ ಎಂದು ಪರಿಗಣಿಸಲಾಗುತ್ತದೆ. ಮುರಿದ ಮಡಕೆಗಳು, ಬಕೆಟ್‌ಗಳು ಅಥವಾ ಇತರ ಪಾತ್ರೆಗಳಲ್ಲಿ ಎಂದಿಗೂ ಛಾವಣಿ ಮೇಲೆ ಇಡಬೇಡಿ. ಯಾಕೆಂದರೆ ಇಂತಹ ವಸ್ತುಗಳು ವಾಸ್ತು ದೋಷಗಳನ್ನು ಉಂಟು ಮಾಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.