Vastu Tips: ಮನೆಯಲ್ಲಿ ಖಾಲಿ ಬಿಡಬಾರದ ಸ್ಥಳ ಯಾವುದು, ಏಕೆ ಗೊತ್ತೇ?
ಸಕಾರಾತ್ಮಕ ಶಕ್ತಿಗಳು ಮನೆಯಲ್ಲಿ ವಾಸವಾಗಿದ್ದರೆ ಮಾತ್ರ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದರೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಮನೆಯಲ್ಲಿ ಸಕಾರಾತ್ಮಕ ಅಂಶಗಳು ವೃದ್ಧಿಯಾಗಬೇಕಾದರೆ ಮನೆಯ ಕೆಲವೊಂದು ಜಾಗಗಳನ್ನು ಖಾಲಿ ಬಿಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ. ಅಂತಹ ಜಾಗ ಯಾವುದು, ಈ ಬಗ್ಗೆ ವಾಸ್ತು ತಜ್ಞರು ಹೇಳುವುದೇನು ? ಎನ್ನುವ ಕುರಿತು ಇಲ್ಲಿದೆ ಮಾಹಿತಿ.

-

ಬೆಂಗಳೂರು: ಮನೆಯಲ್ಲಿ (Vastu for home) ಶಕ್ತಿಯ ಸಮತೋಲನಕ್ಕೆ ವಾಸ್ತು ನಿಯಮಗಳನ್ನು (vastu shastra) ಅನುಸರಿಸಬೇಕು. ಆದರೆ ನಾವು ಮನೆಯ ಸೌಂದರ್ಯ, ಅಲಂಕಾರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಈ ವೇಳೆ ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು ಮನೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಾವು ಹೆಚ್ಚು ಗಮನ ಹರಿಸಬೇಕಾದ ಸ್ಥಳಗಳೆಂದರೆ ಮೂಲೆಗಳು (vastu about house empty corner). ಇವುಗಳಲ್ಲಿ ಕೆಲವೊಂದು ಸ್ಥಳಗಳನ್ನು ಖಾಲಿ ಬಿಡುವುದು ಎಷ್ಟು ಮುಖ್ಯವೋ ಇನ್ನು ಕೆಲವು ಸ್ಥಳಗಳನ್ನು ವಸ್ತುಗಳಿಂದ ತುಂಬುವುದು ಕೂಡ ಮುಖ್ಯವಾಗಿರುತ್ತದೆ.
ಮನೆಯ ಕೆಲವು ಪ್ರದೇಶಗಳನ್ನು ಖಾಲಿ ಬಿಟ್ಟರೆ ಅದು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದನ್ನು ತಪ್ಪಿಸಲು ಕೆಲವೊಂದು ವಾಸ್ತು ನಿಯಮಗಳ ಪಾಲನೆ ಮುಖ್ಯವಾಗಿದೆ. ಮನೆಯ ಪ್ರತಿಯೊಂದು ಸ್ಥಳವು ವಾಸ್ತು ತತ್ತ್ವಗಳಿಗೆ ಅನುಗುಣವಾಗಿರಬೇಕು. ಇದಕ್ಕಾಗಿ ಮನೆಯ ಮೂಲೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕೆಲವೊಂದು ಮೂಲೆಗಳನ್ನು ಖಾಲಿ ಬಿಟ್ಟರೆ ಅಲ್ಲಿ ನಕಾರಾತ್ಮಕ ಶಕ್ತಿಗಳು ಸಂಗ್ರಹವಾಗುತ್ತದೆ. ಇದರಿಂದ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರಾದ ಅಮಿತಾ ರಾವಲ್.
ಈಶಾನ್ಯ ಭಾಗ
ಮನೆಯ ಈಶಾನ್ಯ ಮೂಲೆಯನ್ನು ಎಂದಿಗೂ ಖಾಲಿ ಬಿಡಬಾರದು. ಇದು ಶಿವನ ದಿಕ್ಕು. ಈ ಜಾಗವನ್ನು ಖಾಲಿ ಬಿಡುವುದರಿಂದ ದೇವರ ಆಶೀರ್ವಾದ ದೊರೆಯುವುದಿಲ್ಲ. ಈ ಪ್ರದೇಶದಲ್ಲಿ ಎಂದಿಗೂ ಕಸದ ಬುಟ್ಟಿ, ಪೊರಕೆ, ಸ್ವಚ್ಛಗೊಳಿಸುವ ಸಾಮಗ್ರಿಗಳನ್ನು, ಭಾರವಾದ ವಸ್ತುಗಳನ್ನು ಇರಿಸಬಾರದು. ಈ ಪ್ರದೇಶವು ಪೂಜಾ ಸ್ಥಳಕ್ಕೆ ಯೋಗ್ಯವಾಗಿದೆ. ಈ ಮೂಲೆಯನ್ನು ಖಾಲಿ ಬಿಟ್ಟರೆ ಅದು ನಕಾರಾತ್ಮಕ ಶಕ್ತಿಗಳಿಗೆ ಆಹ್ವಾನಕೊಟ್ಟಂತಾಗುತ್ತದೆ.
ಆಗ್ನೇಯ ಮೂಲೆ
ಮನೆಯ ಆಗ್ನೇಯ ಮೂಲೆಯನ್ನು ಶನಿ ದೇವರ ವಾಸಸ್ಥಾನ ಎಂದು ಹೇಳಲಾಗುತ್ತದೆ. ಈ ಪ್ರದೇಶವನ್ನು ಎಂದಿಗೂ ಖಾಲಿ ಬಿಡಬಾರದು. ಇಲ್ಲಿ ಕಸದ ಬುಟ್ಟಿ, ಸ್ವಚ್ಛಗೊಳಿಸುವ ಸಾಮಗ್ರಿಗಳನ್ನು ಇರಿಸುವುದು ಒಳ್ಳೆಯದಲ್ಲ. ಅಗ್ನಿ ಮೂಲೆಯನ್ನು ಎಂದಿಗೂ ಖಾಲಿ ಬಿಡಬಾರದು. ಇಲ್ಲಿ ಕೃತಕ ಸಸ್ಯವನ್ನು ಇರಿಸಬಹುದು.
ನೈಋತ್ಯ ಮೂಲೆ
ಮನೆಯ ನೈಋತ್ಯ ಮೂಲೆಯು ಸಂಬಂಧಗಳ ಮೇಲೆ ಪರಿಣಾಮ ಬಿರುವಂತ ಸ್ಥಳವಾಗಿದೆ. ಇಲ್ಲಿ ಖಾಲಿ ಬಿಡುವುದು ನಕಾರಾತ್ಮಕ ಶಕ್ತಿಯ ಆಹ್ವಾನಕ್ಕೆ ಕಾರಣವಾಗುತ್ತದೆ. ಇಲ್ಲಿ ಕಸ ಸಂಗ್ರಹಕ್ಕೆ ಅವಕಾಶ ನೀಡಬೇಡಿ. ಈ ಪ್ರದೇಶವನ್ನು ರಾಹುವಿನ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಜಗದಲ್ಲಿ ಶುಭ ವಸ್ತುಗಳನ್ನು ಇರಿಸಬಹುದಾಗಿದೆ.
ಇದನ್ನೂ ಓದಿ: Vastu Tips: ಅದೃಷ್ಟ, ಸಮೃದ್ಧಿಯನ್ನು ಆಹ್ವಾನಿಸುತ್ತದೆ ಬಿದಿರು
ಬ್ರಹ್ಮ ಸ್ಥಾನ
ಮನೆಯ ಮಧ್ಯ ಭಾಗವನ್ನು ಎಂದಿಗೂ ಖಾಲಿ ಬಿಡಬಾರದು. ಇದನ್ನು ಖಾಲಿ ಬಿಡುವುದು ದುಷ್ಟಶಕ್ತಿಗಳ ಒಳಹರಿವಿಗೆ ಕಾರಣವಾಗುತ್ತದೆ. ಅಲ್ಲದೇ ವಾಸ್ತು ದೋಷಗಳಿಗೂ ಕಾರಣವಾಗುತ್ತದೆ. ಬ್ರಹ್ಮ ಸ್ಥಾನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲಿ ಯಾವುದೇ ರೀತಿಯ ಭಾರವಾದ ವಸ್ತುಗಳನ್ನು ಇರಿಸಬಾರದು. ಶುಭ ಪರಿಣಾಮಗಳು ನಿಮ್ಮ ಜೀವನದಲ್ಲಿ ಗೋಚರಿಸುತ್ತವೆ.