ದಿನ ಭವಿಷ್ಯ, ಎಪ್ರಿಲ್ 15, 2026: ಈ ರಾಶಿಗೆ ಇಂದು ಹಣಕಾಸಿನ ವಿಚಾರದಲ್ಲಿ ತೊಂದರೆ!
Horoscope Today April 15: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ತ್ರಯೋದಶಿ ತಿಥಿ, ಪೂರ್ವಭಾದ್ರಾ ನಕ್ಷತ್ರದ ಎಪ್ರಿಲ್ 15ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಪೂರ್ವಭಾದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೇಷ ರಾಶಿಗೆ ಬಹಳ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಮಿತ್ರರಿಂದ ಕೂಡ ಅತೀ ಹೆಚ್ಚಿನ ಖುಷಿ ನಿಮಗೆ ಸಿಗುತ್ತದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಎಲ್ಲರಿಂದಲೂ ನಿಮಗೆ ಹೊಗಳಿಕೆ ಪ್ರಾಪ್ತಿಯಾಗಲಿದ್ದು ಖುಷಿಯಿಂದ ದಿನ ಕಳೆಯುತ್ತೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ಫಲ ಇರುತ್ತದೆ. ಇಂದು ಭಾಗ್ಯೋದಯವಾದ ದಿನವಾಗಲಿದ್ದು ಆಧ್ಯಾತ್ಮಿಕವಾಗಿ ಹೆಚ್ಚಿನ ಖುಷಿ ನಿಮಗೆ ಸಿಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ. ಆದರೆ ಆಧ್ಯಾತ್ಮಿಕವಾಗಿ ನೀವು ಮನಸ್ಸಿಗೆ ತೃಪ್ತಿ ಪಡೆಯಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ನೀವು ಮತ್ತು ಪ್ರೀತಿ ಪಾತ್ರರ ಜೊತೆ ಬಹಳ ಉತ್ತಮವಾದ ಭಾಂದವ್ಯವನ್ನು ನೀವು ಬೆಳೆಸಿಕೊಳ್ಳುತ್ತೀರಿ. ಉತ್ತಮವಾದ ಫಲಗಳೇ ನಿಮಗೆ ಇಂದು ಸಿಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಶತ್ರುಗಳನ್ನು ನೀವು ಹಿಮ್ಮೆಟ್ಟಬಹುದು. ಆಧ್ಯಾತ್ಮಿಕವಾಗಿ ನೀವು ಅತೀ ಹೆಚ್ಚಿನ ಯಶಸ್ಸು ಕಾಣುತ್ತೀರಿ.
Vastu Tips: ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವಾಗ ಈ ನಿಯಮ ಪಾಲಿಸಿ; ಇಲ್ಲವಾದರೆ ಅಶುಭ ಫಲವೇ ಹೆಚ್ಚು
ತುಲಾ ರಾಶಿ: ತುಲಾ ರಾಶಿಯವರಿಗೆ ಹಣಕಾಸಿನ ವಿಚಾರವಾಗಿ ಕಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಟೀಕೆಯನ್ನು ಕೂಡ ಇತರರಿಂದ ನೀವು ಕೇಳಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ನಿಶ್ಚಿಂತವಾದ ವಾತಾವರಣ ಇಂದು ಮೂಡಬಹುದು. ಕೆಲಸ ಕಾರ್ಯದಲ್ಲಿ ಇಂದು ನಿಮಗೆ ಕಷ್ಟವಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ಎಲ್ಲ ಕೆಲಸ ಕಾರ್ಯದಲ್ಲೂ ಜಯ ಪ್ರಾಪ್ತಿಯಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಸಂಸಾರದ ವಿಚಾರಕ್ಕೆ ನೆಮ್ಮದಿ ಇರುವುದಿಲ್ಲ. ಇದನ್ನು ಸುಲಭವಾಗಿ ನೀವು ಬಗೆ ಹರಿಸಲು ಪ್ರಯತ್ನ ಪಡಬೇಕಾಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಇರುತ್ತದೆ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಸಮಸ್ಯೆ ಮಯವಾಗುತ್ತದೆ. ಮುಂದಿನ ಕೆಲಸಕ್ಕೆ ಉತ್ತಮ ಮಾರ್ಗದರ್ಶನ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ಯಾವುದೇ ರೀತಿಯ ಸಹಕಾರ ನಿಮಗೆ ಸಿಗುವುದಿಲ್ಲ. ನಾನಾ ರೀತಿಯ ಸಮಸ್ಯೆ ಇಂದು ಕಾಡುವ ಸಾಧ್ಯತೆ ಇರುತ್ತದೆ.