Vishwavani Editorial: ಹೆರಿಟೇಜ್ ಕಟ್ಟಡಗಳು ಹೊಸದಾಗಲಿ
ದಿವಾನ್ ಸಿವಿ ರಂಗಾಚಾರ್ಲು ಅವರ ನೆನಪಿನಲ್ಲಿ 1884ರಲ್ಲಿ ಕಟ್ಟಲಾದ ಈ ಕಟ್ಟಡ 142 ವರ್ಷಗಳ ಬ್ರಿಟಿಷ್, ಒಡೆಯರ್ ಆಡಳಿತದ ನೆನಪುಗಳನ್ನು ಹೊತ್ತುಕೊಂಡಿದೆ. ಇದು ಹೆರಿಟೇಜ್ ಕಟ್ಟಡ ಆದುದರಿಂದ ವಿಶೇಷ ಅನುಮತಿ ದುರಸ್ತಿಗೆ ಅಗತ್ಯವಾಗಿದೆ. ಹಾಗೆಯೇ ಮೈಸೂರು ವಿಶ್ವವಿದ್ಯಾಲಯದ ಸುಪರ್ದಿಯಲ್ಲಿರುವ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಒಂದು ಕಾಲದಲ್ಲಿ ವಾಸಿಸಿದ್ದ ಭವ್ಯ ಮನೆ ಕೂಡ ಪಾಳು ಬಿದ್ದಿದ್ದು, ಇದರ ದುರಸ್ತಿಗೆ ಮೈಸೂರು ವಿವಿ ಮುಂದಾಗಿದೆ.
-
ಮೈಸೂರಿನ ಕೆಲ ಪಾರಂಪರಿಕ ಕಟ್ಟಡಗಳ ದುರಸ್ತಿ, ಮರುನಿರ್ಮಾಣಕ್ಕೆ ಸ್ಥಳೀಯಾಡಳಿತ ಮುಂದಾ ಗಿದೆ. ಮೈಸೂರಿನ ಟೌನ್‌ಹಾಲ್ ಅಥವಾ ರಂಗಾಚಾರ್ಲು ಸ್ಮಾರಕ ಹಾಲ್ ದಶಕಗಳಿಂದ ಅಲ್ಲಲ್ಲಿ ಶಿಥಿಲವಾಗಿ ದುರಸ್ತಿ ಕಾಣದೆ ನನೆಗುದಿಗೆ ಬಿದ್ದಿತ್ತು. 3 ಕೋಟಿ ರೂ. ವೆಚ್ಚದಲ್ಲಿ ಅದರ ನವೀಕರಣಕ್ಕೆ ಮೈಸೂರು ನಗರಪಾಲಿಕೆ ಮುಂದಾಗಿದೆ.
ದಿವಾನ್ ಸಿವಿ ರಂಗಾಚಾರ್ಲು ಅವರ ನೆನಪಿನಲ್ಲಿ 1884ರಲ್ಲಿ ಕಟ್ಟಲಾದ ಈ ಕಟ್ಟಡ 142 ವರ್ಷಗಳ ಬ್ರಿಟಿಷ್, ಒಡೆಯರ್ ಆಡಳಿತದ ನೆನಪುಗಳನ್ನು ಹೊತ್ತುಕೊಂಡಿದೆ. ಇದು ಹೆರಿಟೇಜ್ ಕಡ್ಡಡ ಆದುದರಿಂದ ವಿಶೇಷ ಅನುಮತಿ ದುರಸ್ತಿಗೆ ಅಗತ್ಯವಾಗಿದೆ. ಹಾಗೆಯೇ ಮೈಸೂರು ವಿಶ್ವವಿದ್ಯಾ ಲಯದ ಸುಪರ್ದಿಯಲ್ಲಿರುವ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಒಂದು ಕಾಲದಲ್ಲಿ ವಾಸಿಸಿದ್ದ ಭವ್ಯ ಮನೆ ಕೂಡ ಪಾಳುಬಿದ್ದಿದ್ದು, ಇದರ ದುರಸ್ತಿಗೆ ಮೈಸೂರು ವಿವಿ ಮುಂದಾಗಿದೆ.
ಇದಕ್ಕೆ ಪ್ರಾಚ್ಯವಸ್ತು ಹಾಗೂ ಹೆರಿಟೇಜ್ ತಜ್ಞರ, ವಾಸ್ತುಶಿಲ್ಪಿಗಳ ನೆರವು ಅಗತ್ಯವಾಗಿದೆ. ಮೈಸೂರಿ ನಲ್ಲಿ ಇವೆರಡು ಕಟ್ಟಡಗಳು ಮಾತ್ರ ದುರಸ್ತಿಯನ್ನು ಅಪೇಕ್ಷಿಸುತ್ತಿರುವುದಲ್ಲ. ಮೈಸೂರು ಒಡೆಯರ ಕಾಲದ ಹಲವು ಕಟ್ಟಡಗಳು ಸಾರ್ವಜನಿಕರ ಪ್ರವೇಶಕ್ಕೆ ಅನರ್ಹವಾಗುವ ಸ್ಥಿತಿ ತಲುಪುವ ಅಂಚಿನಲ್ಲಿವೆ.
ಇದನ್ನೂ ಓದಿ: Vishwavani Editorial: ಹಣಕಾಸು ವಂಚನೆಗೆ ಶಿಕ್ಷೆಯಾಗಲಿ
ಮೈಸೂರು ಅರಮನೆಯ ಚಾವಣಿ ಸೋರುತ್ತಿದೆ. ಮುಖ್ಯದ್ವಾರದ ಬಾಗಿಲಲ್ಲಿ ಗಾರೆ ಎದ್ದಿದೆ. ರಾಣಿ ವಾಸಗಳು, ಮಹಲ್‌ಗಳು, ಪುರಾತನ ಗುಡಿಗಳು ದುರಸ್ತಿಯನ್ನು ಅಪೇಕ್ಷಿಸುತ್ತಿವೆ. ಇವು ಬರೀ ಒಡೆಯರ್ ವಂಶದ ಆಸ್ತಿಗಳಲ್ಲ. ಇವು ನಾಡಿನ ಹೆಮ್ಮೆಯ ಸ್ವತ್ತುಗಳು.
ಇಲ್ಲಿನ ಹೆರಿಟೇಜ್ ಕಟ್ಟಡಗಳನ್ನು ನೋಡಲು, ಅಧ್ಯಯನ ಮಾಡಲು ದೇಶವಿದೇಶಗಳಿಂದ ಪ್ರವಾಸಿ ಗಳು ಬರುತ್ತಾರೆ. ಇವುಗಳ ಅಂದ ಕೆಡದಂತೆ ಕಾಪಾಡಲು, ಸುರಕ್ಷತೆ ನಿರ್ವಹಿಸಲು, ಅವಸಾನದ ಅಂಚಿನಲ್ಲಿರುವ ಕಟ್ಟಡಗಳ ನವೀಕರಣ ಮಾಡಲು ಪ್ರಯತ್ನ ಸರಕಾರದ ಕಡೆಯಿಂದ ಆಗಬೇಕು. ಇದಕ್ಕೆ ಪ್ರಾಕ್ತನವಸ್ತು ಇಲಾಖೆಯ ಅನುಮತಿ, ಸಹಕಾರ ಬೇಕಾದೀತು.
ಸರಕಾರಕ್ಕೆ ಚಾಮುಂಡಿ ಬೆಟ್ಟ ಪ್ರಾಽಕಾರದಲ್ಲಿ ಇರುವ ಆಸಕ್ತಿ ಈ ಹೆರಿಟೇಜ್ ಕಟ್ಟಡಗಳ ನವೀಕರಣ ದಲ್ಲಿ ಇದ್ದಂತಿಲ್ಲ. ಚಾಮುಂಡಿ ಬೆಟ್ಟದಿಂದ ಕೋಟ್ಯಂತರ ಆದಾಯ ಬರುತ್ತದೆ ಎಂಬುದು ಇದಕ್ಕೆ ಕಾರಣವಿದ್ದೀತು. ಈ ಹೆರಿಟೇಜ್ ಕಟ್ಟಡಗಳಿಂದ ಆದಾಯವಿರಲಿಕ್ಕಿಲ್ಲ, ಆದರೆ ಮೈಸೂರಿನ ಗತವೈಭವ, ಪರಂಪರೆಯನ್ನು ಸಾರುವ ಭವ್ಯ ನೆಲೆಗಳು ಇವು. ಇವುಗಳನ್ನು ಕಾಪಾಡಿಕೊಳ್ಳಲು ಪ್ರಾಧಿಕಾರ ರಚನೆ ಆಗಬೇಕು. ಮೈಸೂರು ಸೇರಿದಂತೆ ಇತರ ಕಡೆಯೂ ಇಂಥ ಹೆರಿಟೇಜ್ ಶಿಥಿಲ ಕಟ್ಟಡಗಳ ಗುರುತಿಸುವಿಕೆ, ದುರಸ್ತೀಕರಣದ ಯೋಜನೆ ಕೈಗೂಡಬೇಕು.