ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

U19 Asia Cup: ಅಭಿಗ್ಯಾನ್ ಕುಂಡು ದಾಖಲೆಯ ದ್ವಿಶತಕ; ಭಾರತಕ್ಕೆ 315ರನ್‌ ಭರ್ಜರಿ ಗೆಲುವು

Abhigyan Kundu: 2002 ರಲ್ಲಿ ಟೌಂಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಂಬಾಟಿ ರಾಯುಡು ಅಜೇಯ 177 ರನ್‌ಗಳನ್ನು ಬಾರಿಸಿದ್ದು ಯೂತ್ ಏಕದಿನ ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದುವರೆಗಿನ ದಾಖಲೆ ಆಗಿತ್ತು. ಆದರೆ ಈ ದಾಖಲೆ ಈಗ ಪತನಗೊಂಡಿತು.

ಅಂಡರ್‌-19 ಏಷ್ಯಾಕಪ್‌ನಲ್ಲಿ ದ್ವಿಶತಕ ಬಾರಿಸಿದ ಅಭಿಗ್ಯಾನ್ ಕುಂಡು

Abhigyan Kundu -

Abhilash BC
Abhilash BC Dec 16, 2025 4:54 PM

ದುಬೈ, ಡಿ.16: ಮಂಗಳವಾರ ನಡೆದ U19 ಪುರುಷರ ಏಷ್ಯಾಕಪ್‌ನಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಅಭಿಗ್ಯಾನ್ ಕುಂಡು ಅದ್ಭುತ ದ್ವಿಶತಕ ಬಾರಿಸುವ ಮೂಲಕ ಇತಿಹಾಸ ಬರೆದರು. ದುಬೈನ ಸೆವೆನ್ಸ್ ಕ್ರೀಡಾಂಗಣದಲ್ಲಿ, 17 ವರ್ಷದ ಅಭಿಗ್ಯಾನ್ ಕುಂಡು ಅಜೇಯ 209 ರನ್‌ ಬಾರಿಸುವ ಮೂಲಕ ಯೂತ್ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ ಎರಡನೇ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷದ ಆರಂಭದಲ್ಲಿ, ದಕ್ಷಿಣ ಆಫ್ರಿಕಾದ ಜೋರಿಚ್ ವ್ಯಾನ್ ಶಾಲ್ಕ್‌ವೈಕ್ ಈ ಸಾಧನೆ ಮಾಡಿದ ಮೊದಲ ಆಟಗಾರ.

ಗ್ರೂಪ್ ಎ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಪರ ಕುಂದು, 125 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ 209 ರನ್ ಗಳಿಸಿದರು. ಅವರ ಈ ಬ್ಯಾಟಿಂಗ್‌ ಆರ್ಭಟದ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 408 ರನ್ ಗಳಿಸಿತು. ಬೃಹತ್‌ ಮೊತ್ತ ಬೆನ್ನಟ್ಟಿದ ಮಲೇಷ್ಯಾ ತಂಡ ಕೇವಲ 93ರನ್‌ಗೆ ಸರ್ವಪತನ ಕಂಡಿತು. ಭಾರತ 315 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

2002 ರಲ್ಲಿ ಟೌಂಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಂಬಾಟಿ ರಾಯುಡು ಅಜೇಯ 177 ರನ್‌ಗಳನ್ನು ಬಾರಿಸಿದ್ದು ಯೂತ್ ಏಕದಿನ ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದುವರೆಗಿನ ದಾಖಲೆ ಆಗಿತ್ತು. ಆದರೆ ಈ ದಾಖಲೆ ಈಗ ಪತನಗೊಂಡಿತು.



ಉಳಿದಂತೆ ವೈಭವ್‌ ಸೂರ್ಯವಂಶಿ ಮತ್ತು ವೇದಾಂತ್ ತ್ರಿವೇದಿ ಅರ್ಧಶತಕ ಬಾರಿಸಿದರು. ಸೂರ್ಯವಂಶಿ ಭರ್ತಿ 50 ರನ್‌ ಗಳಿಸಿ ಔಟಾದರೆ, ತ್ರಿವೇದಿ 90 ರನ್‌ ಗಳಿಸಿ ಕೇವಲ 10 ರನ್‌ ಅಂತರದಿಂದ ಶತಕ ವಂಚಿತರಾದರು.

"ನಾವು ನಾಕೌಟ್ ಹಂತಗಳಿಗೆ ಮುನ್ನಡೆಯುತ್ತಿದ್ದಂತೆ, ಅವಕಾಶಗಳನ್ನು ಪರಿವರ್ತಿಸುವುದು ನನ್ನ ಏಕೈಕ ಗುರಿಯಾಗಿದೆ. ಮುಂದೆ ಅದು ನನ್ನ ಆಲೋಚನೆಯಾಗಿರುತ್ತದೆ" ಎಂದು ಕುಂಡು ಮಿಡ್-ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಹೇಳಿದರು.

ಇದನ್ನೂ ಓದಿ Venkatesh Iyer: ಆರ್‌ಸಿಬಿ ಸೇರಿದ ಸ್ಫೋಟಕ ಬ್ಯಾಟರ್‌ ವೆಂಕಟೇಶ್‌ ಅಯ್ಯರ್‌

ಅಂಬಟಿ ರಾಯುಡು ಅವರ 23 ವರ್ಷಗಳ ಹಳೆಯ ದಾಖಲೆಯನ್ನು ಮುರಿದ ಬಗ್ಗೆ ಮಾತನಾಡಿದ ಅಭಿಗ್ಯಾನ್ ಕುಂಡು, "ನಾನು ದಾಖಲೆ ಸೃಷ್ಟಿಸಿದ್ದೇನೆ ಎಂದು ತಿಳಿದುಕೊಳ್ಳುವುದು ನಿಜಕ್ಕೂ ಸಂತೋಷ ತಂದಿದೆ. ಮುಂದೆ, ದೊಡ್ಡ ವೇದಿಕೆಯಲ್ಲಿ ನನ್ನದೇ ದಾಖಲೆಯನ್ನು ಮತ್ತೊಮ್ಮೆ ಮುರಿಯಲು ಪ್ರಯತ್ನಿಸುತ್ತೇನೆ" ಎಂದು ಹೇಳಿದರು. ಕುಂಡು ಪ್ರಸ್ತುತ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಮೂರು ಪಂದ್ಯಗಳಿಂದ 263 ಸರಾಸರಿ ಮತ್ತು 151.14 ಸ್ಟ್ರೈಕ್ ರೇಟ್‌ನೊಂದಿಗೆ 263 ರನ್ ಗಳಿಸಿದ್ದಾರೆ.

ಯೂತ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌ಗಳು

ಜೋರಿಚ್ ವ್ಯಾನ್ ಶಾಲ್ಕ್‌ವಿಕ್; 215

ಅಭಿಜ್ಞಾನ್ ಕುಂಡು; 209*

ಹಸಿತ ಬೋಯಗೋಡ; 191

ಜಾಕೋಬ್ ಭುಲಾ; 180

ಥಿಯೋ ಡೊರೊಪೌಲೋಸ್; 179*

ಅಂಬಾಟಿ ರಾಯುಡು; 177*

ಡೊನೊವನ್ ಪ್ಯಾಗನ್; 176

ಡಾನ್ ಲಾರೆನ್ಸ್; 174