IPL Auction 2026: 5.20 ಕೋಟಿ ರು.ಗೆ ಆರ್‌ಸಿಬಿ ಸೇರಿದ ಮಂಗೇಶ್ ಯಾದವ್ ಯಾರು?
Who is Mangesh Yadav?: ಹತ್ತೊಬ್ಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ದೇಶಿ ಆಟಗಾರರಿಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಮಧ್ಯಪ್ರದೇಶ ಮೂಲದ ಮಂಗೇಶ್ ಯಾದವ್ ಬರೋಬ್ಬರಿ 5.20 ಕೋಟಿ ರು. ಗಳಿಗೆ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.
ಆರ್‌ಸಿಬಿಗೆ ಸೇರಿದ ಮಂಗೇಶ್ ಯಾದವ್ ಯಾರು? -
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Mini Auction) ಟೂರ್ನಿಯ 19ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ದೇಶಿ ಆಟಗಾರರು ದಾಖಲೆಯ ಮೊತ್ತಕ್ಕೆ ಮಾರಾಟವಾಗುತ್ತಿದ್ದಾರೆ. 30 ಲಕ್ಷ ಮೂಲ ಬೆಲೆಯೊಂದಿಗೆ ಹರಾಜು ಪ್ರವೇಶಿಸಿದ್ದ ಮಧ್ಯಪ್ರದೇಶದ ಮಂಗೇಶ್ ಯಾದವ್ (Mangesh Yadav) ಬರೋಬ್ಬರಿ 5.20 ಕೋಟಿ ರು. ಗಳಿಗೆ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸೇರಿಕೊಂಡಿದ್ದಾರೆ. ಆರಂಭದಿಂದಲೂ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ನಡುವೆ ತೀವ್ರ ಬಿಡ್ಡಿಂಗ್ ಪೈಪೋಟಿ ನಡೆಯಿತು. ಅಂತಿಮವಾಗಿ ಎಡಗೈ ವೇಗಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಬೆಂಗಳೂರು ಫ್ರಾಂಚೈಸಿ ಯಶಸ್ವಿಯಾಯಿತು.
ಮಧ್ಯಪ್ರದೇಶದ 24ರ ವಯಸ್ಸಿನ ಮಂಗೇಶ್ ಯಾದವ್ ಮಧ್ಯಪ್ರದೇಶ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಇನ್ನು ಯಾರ್ಕರ್ ಬೌಲಿಂಗ್‌ಗೆ ಹೆಸರುವಾಸಿಯಾಗಿರುವ ಅವರು, ಗ್ವಾಲಿತರ್ ಚೀತಾಸ್ ಪರ 21 ಓವರ್‌ಗಳಲ್ಲಿ 14 ವಿಕೆಟ್ ಕಿತ್ತು ಬೀಗಿದ್ದರು. ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೂ ಪದಾರ್ಪಣೆ ಮಾಡಿದ್ದರು. ಈ ಟೂರ್ನಿಯ ಸೂಪರ್ ಲೀಗ್ ಹಂತದ ಎರಡು ಪಂದ್ಯಗಳನ್ನಾಡಿದ್ದ ಅವರು 3 ವಿಕೆಟ್ ಕಿತ್ತಿದ್ದರು. ಇತ್ತ ಬ್ಯಾಟಿಂಗ್‌ನಲ್ಲೂ ಕೂಡ 12 ಎಸೆತಗಳಲ್ಲಿ 28 ರನ್ ಕಲೆಹಾಕಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
14.20 ಕೋಟಿ ರು ಪಡೆಯುವ ಮೂಲಕ ವಿಶೇಷ ದಾಖಲೆ ಬರೆದ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ!
2 ಕೋಟಿ ರು.ಗೆ ಆರ್‌ಸಿಬಿ ಸೇರಿಕೊಂಡ ನ್ಯೂಜಿಲೆಂಡ್ ವೇಗಿ
ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಅವರನ್ನು ಮೂಲ ಬೆಲೆ 2 ಕೋಟಿ ರು.ಗಳಿಗೆ ಬೆಂಗಳೂರು ತಂಡ ಖರೀದಿಸಿದೆ. ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬಲಗೈ ವೇಗಿ ಜಾಕೋಬ್ ಡಫಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇದೇ ಮೊದಲ ಬಾರಿ ಐಪಿಎಲ್ ಪ್ರವೇಶಿಸಿರುವ ಜಾಕೋಬ್ ಡಫಿ 36 ಟಿ20 ಇನಿಂಗ್ಸ್‌ಗಳಲ್ಲಿ 53 ವಿಕೆಟ್ ಪಡೆದಿದ್ದು, 7.37ರ ಎಕಾನಮಿ ರೇಟ್ ಹೊಂದಿದ್ದಾರೆ. ಜಾಶ್ ಹೇಝಲ್‌ವುಡ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರು, ಈ ಬಾರಿ ಐಪಿಎಲ್‌ಗೆ ಅಲಭ್ಯರಾಗಬಹುದು. ಈ ಹಿನ್ನಲೆಯಲ್ಲಿ ಜಾಕೋಬ್ ಅವರನ್ನು ಖರೀದಿಸುವ ಮೂಲಕ ಬೆಂಗಳೂರು ತಂಡ ಬೌಲಿಂಗ್ ವಿಭಾಗದ ಬೆಂಚ್ ಬಲವನ್ನು ಹೆಚ್ಚಿಸಿಕೊಂಡಿದೆ.
Fresh pace, left arm variety and plenty of promise. 🔥
— Royal Challengers Bengaluru (@RCBTweets) December 16, 2025
Mangesh Yadav brings speed, handy contributions with the bat and hunger to prove himself at the highest level! 🙌
An exciting addition indeed. Welcome home, Mangesh. 🫶#PlayBold #ನಮ್ಮRCB #IPLAuction #BidForBold pic.twitter.com/eBshU4BQvJ
ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್, ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್.
Cameron Green: ಇದೀಗ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ವಿದೇಶಿ ಆಟಗಾರ ಯಾರು ಗೊತ್ತೆ?
ಮಿನಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ವೆಂಕಟೇಶ್ ಅಯ್ಯರ್ (7 ಕೋಟಿ ರು), ಜಾಕೋಬ್ ಡಫಿ (2 ಕೋಟಿ ರು.), ಸಾತ್ವಿಕ್ ದೇಶ್ವಾಲ್ ( 30 ಲಕ್ಷ), ಮಂಗೇಶ್ ಯಾದವ್ ( 5.20 ಕೋಟಿ)
ಒಬ್ಬ ವಿದೇಶಿ ಆಟಗಾರನನ್ನು ಸೇರಿದಂತೆ ಹರಾಜಿನಲ್ಲಿ ಒಟ್ಟು 4 ಜನ ಆಟಗಾರರನ್ನು ಖರೀದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಸ್‌ನಲ್ಲಿ ಇನ್ನೂ 1.90 ಕೋಟಿ ರು. ಉಳಿದಿದೆ.