ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL Auction 2026: ಎಲ್ಲಾ 10 ತಂಡಗಳ ಸೋಲ್ಡ್‌, ಅನ್‌ಸೋಲ್ಡ್‌ ಆಟಗಾರರ ಸಂಪೂರ್ಣ ಪಟ್ಟಿ!

IPL 2026 Mini Auction Highlights: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿ ಡಿಸೆಂಬರ್‌ 16 ರಂದು ಮಂಗಳವಾರ ಅಬುಧಾಬಿಯಲ್ಲಿ ಅಂತ್ಯವಾಯಿತು. ಒಟ್ಟು 359 ಆಟಗಾರರು ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಿನಿ ಹರಾಜಿನಲ್ಲಿ ಸೋಲ್ಡ್‌ ಹಾಗೂ ಅನ್‌ ಸೋಲ್ಡ್‌ ಆಟಗಾರರ ಪಟ್ಟಿಯನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

IPL Auction 2026: ಎಲ್ಲಾ ತಂಡಗಳ ಸೋಲ್ಡ್‌, ಅನ್‌ಸೋಲ್ಡ್‌ ಆಟಗಾರರ ಪಟ್ಟಿ!

2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ಸೋಲ್ಡ್‌, ಅನ್‌ಸೋಲ್ಡ್‌ ಆದ ಆಟಗಾರರು. -

Profile
Ramesh Kote Dec 16, 2025 10:38 PM

ಅಬುಧಾಬಿ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026 Mini Auction) ಟೂರ್ನಿಯ ಮಿನಿ ಹರಾಜು ಡಿಸೆಂಬರ್‌ 16 ರಂದು ಮಂಗಳವಾರ ನಡೆದಿತ್ತು. ಈ ಮಿನಿ ಹರಾಜಿನಲ್ಲಿ ಒಟ್ಟು 359 ಆಟಗಾರರು ಕಾಣಿಸಿಕೊಂಡಿದ್ದರು. ಅಂತಿಮವಾಗಿ ಎಲ್ಲಾ 10 ತಂಡಗಳಿಂದ 215 ಕೋಟಿ ರು.ಗಳನ್ನು ಖರ್ಚು ಮಾಡಿ 77 ಆಟಗಾರರನ್ನು ಖರೀದಿಸಿವೆ ಹಾಗೂ ಇದರಲ್ಲಿ 29 ವಿದೇಶಿ ಆಟಗಾರರನ್ನು ಕೂಡ ಸೇರಿಸಿಕೊಳ್ಳಲಾಗಿದೆ. ಈ ಎಲ್ಲಾ ಆಟಗಾರರ ಪೈಕಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ (Cameron Green) ಅತ್ಯಂತ ದುಬಾರಿ ಆಟಗಾರರೆನಿಸಿಕೊಂಡರು.

ಆಸೀಸ್‌ ಆಲ್‌ರೌಂಡರ್‌ ಅನ್ನು ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ತಂಡ 25.2 ಕೋಟಿ ರು. ಗಳಿಗೆ ಖರೀದಿಸಿತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಬರೆದರು. ಅಲ್ಲದೆ ರಿಷಭ್‌ ಪಂತ್‌ (27 ಕೋಟಿ) ಹಾಗೂ ಶ್ರೇಯಸ್‌ ಅಯ್ಯರ್‌ (26.75 ಕೋಟಿ) ಅವರ ಬಳಿಕ ಐಪಿಎಲ್‌ ಹರಾಜಿನ ಮೂರನೇ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

14.20 ಕೋಟಿ ರು ಪಡೆಯುವ ಮೂಲಕ ವಿಶೇಷ ದಾಖಲೆ ಬರೆದ ಪ್ರಶಾಂತ್‌ ವೀರ್‌, ಕಾರ್ತಿಕ್‌ ಶರ್ಮಾ!

ಅನ್‌ಕ್ಯಾಪ್ಡ್‌ ಆಟಗಾರರಾದ ಉತ್ತರ ಪ್ರದೇಶದ ಪ್ರಶಾಂತ್‌ ವೀರ್‌ ಹಾಗೂ ರಾಜಸ್ಥಾನದ ವಿಕೆಟ್‌ ಕೀಪರ್‌ ಕಾರ್ತಿಕ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 14.20 ಕೋಟಿ ರು. ಗಳಿಗೆ ಖರೀದಿಸಿತು. ಆ ಮೂಲಕ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಅನ್‌ಕ್ಯಾಪ್ಡ್‌ ಆಟಗಾರ ಎಂಬ ಜಂಟಿ ದಾಖಲೆಯನ್ನು ಈ ಇಬ್ಬರೂ ಬರೆದಿದ್ದಾರೆ.

ವೆಂಕಟೇಶ್‌ ಅಯ್ಯರ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 7 ಕೋಟಿ ರು. ಗಳಿಗೆ ಖರೀದಿಸಿತ್ತು. ಕಳೆದ ಸೀಸನ್‌ನಲ್ಲಿ ಇವರು 23 ಕೋಟಿ ರು. ಗಳನ್ನು ಪಡೆದಿದ್ದರು. ಇನ್ನು ಶ್ರೀಲಂಕಾದ ವೇಗದ ಬೌಲರ್‌ ಮತೀಶ ಪತಿರಣ ಅವರನ್ನು 18 ಕೋಟಿ ರು. ಗಳಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ಖರೀದಿಸಿತ್ತು.



2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ಸೋಲ್ಡ್‌ ಆಟಗಾರರು

  1. ಡೇವಿಡ್ ಮಿಲ್ಲರ್-ಡೆಲ್ಲಿ ಕ್ಯಾಪಿಟಲ್ಸ್- 2 ಕೋಟಿ ರು
  2. ಕ್ಯಾಮೆರಾನ್‌ ಗ್ರೀನ್-ಕೋಲ್ಕತ್ತಾ ನೈಟ್ ರೈಡರ್ಸ್- 25.20 ಕೋಟಿ ರು
  3. ವಾನಿಂದು ಹಸರಂಗ-ಲಖನೌ ಸೂಪರ್‌ ಜಯಂಟ್ಸ್‌- 2 ಕೋಟಿ ರು
  4. ವೆಂಕಟೇಶ್ ಅಯ್ಯರ್-ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 7 ಕೋಟಿ ರು
  5. ಕ್ವಿಂಟನ್ ಡಿ ಕಾಕ್-ಮುಂಬೈ ಇಂಡಿಯನ್ಸ್‌- ಒಂದು ಕೋಟಿ ರು
  6. ಬೆನ್ ಡಕೆಟ್-ಡೆಲ್ಲಿ ಕ್ಯಾಪಿಟಲ್ಸ್‌- 2 ಕೋಟಿ ರು
  7. ಫಿನ್ ಅಲೆನ್-ಕೋಲ್ಕತಾ ನೈಟ್‌ ರೈಡರ್ಸ್‌- 2 ಕೋಟಿ ರು
  8. ಜಾಕೋಬ್ ಡಫಿ-ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 2 ಕೋಟಿ ರು
  9. ಮತೀಶ ಪತಿರಣ- ಕೋಲ್ಕತಾ ನೈಟ್‌ ರೈಡರ್ಸ್- 18 ಕೋಟಿ ರು
  10. ಎನ್ರಿಚ್‌ ನೊರ್ಕಿಯಾ-ಲಖನೌ ಸೂಪರ್‌ ಜಯಂಟ್ಸ್‌-2 ಕೋಟಿ ರು
  11. ರವಿ ಬಿಷ್ಣೋಯ್-ರಾಜಸ್ಥಾನ್‌ ರಾಯಲ್ಸ್‌- 7.2 ಕೋಟಿ ರು
  12. ಅಕೀಲ್ ಹೊಸೇನ್-ಚೆನ್ನೈ ಸೂಪರ್‌ ಕಿಂಗ್ಸ್‌- 2 ಕೋಟಿ ರು
  13. ಆಕಿಬ್‌ ನಬಿ ದಾರ್- ಡೆಲ್ಲಿ ಕ್ಯಾಪಿಟಲ್ಸ್‌- 8.40 ಕೋಟಿ ರು
  14. ಪ್ರಶಾಂತ್ ವೀರ್-ಚೆನ್ನೈ ಸೂಪರ್‌ ಕಿಂಗ್ಸ್‌- 14.20 ಕೋಟಿ ರು
  15. ಶಿವಂಗ್ ಕುಮಾರ್- ಸನ್‌ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  16. ಕಾರ್ತಿಕ್ ಶರ್ಮಾ- ಚೆನ್ನೈ ಸೂಪರ್‌ ಕಿಂಗ್ಸ್‌- 14.20 ಕೋಟಿ ರು
  17. ಮುಕುಲ್ ಚೌಧರಿ- ಲಖನೌ ಸೂಪರ್‌ ಜಯಂಟ್ಸ್‌- 2.60 ಕೋಟಿ ರು
  18. ತೇಜಸ್ವಿ ಸಿಂಗ್- ಕೋಲ್ಕತಾ ನೈಟ್‌ ರೈಡರ್ಸ್‌- 3 ಕೋಟಿ ರು
  19. ಅಶೋಕ್ ಶರ್ಮಾ-ಗುಜರಾತ್‌ ಟೈಟನ್ಸ್- 90 ಲಕ್ಷ ರು
  20. ಕಾರ್ತಿಕ್ ತ್ಯಾಗಿ-ಕೋಲ್ಕತಾ ನೈಟ್‌ ರೈಡರ್ಸ್‌-50 ಲಕ್ಷ ರು
  21. ನಮನ್ ತಿವಾರಿ-ಲಖನೌ ಸೂಪರ್‌ ಜಯಂಟ್ಸ್‌- ಒಂದು ಕೋಟಿ ರು
  22. ಸುಶಾಂತ್ ಮಿಶ್ರಾ-ರಾಜಸ್ಥಾನ್‌ ರಾಯಲ್ಸ್- 90 ಲಕ್ಷ ರು
  23. ಪ್ರಶಾಂತ್ ಸೋಲಂಕಿ-ಕೋಲ್ಕತಾ ನೈಟ್‌ ರೈಡರ್ಸ್‌- 30 ಲಕ್ಷ ರು
  24. ವಿಘ್ನೇಶ್ ಪುತ್ತೂರು- ರಾಜಸ್ಥಾನ್‌ ರಾಯಲ್ಸ್‌- 30 ಲಕ್ಷ ರು
  25. ಪತುಮ್‌ ನಿಸ್ಸಾಂಕ- ಡೆಲ್ಲಿ ಕ್ಯಾಪಿಟಲ್ಸ್‌- 4 ಕೋಟಿ ರು
  26. ರಾಹುಲ್ ತ್ರಿಪಾಠಿ-ಕೋಲ್ಕತಾ ನೈಟ್‌ ರೈಡರ್ಸ್‌- 75 ಲಕ್ಷ ರು
  27. ಜೇಸನ್ ಹೋಲ್ಡರ್- ಗುಜರಾತ್‌ ಟೈಟನ್ಸ್‌- 7 ಕೋಟಿ ರು
  28. ಮ್ಯಾಥ್ಯೂ ಶಾರ್ಟ್-ಚೆನ್ನೈ ಸೂಪರ್‌ ಕಿಂಗ್ಸ್‌- 1.5 ಕೋಟಿ ರು
  29. ಟಿಮ್ ಸೈಫರ್ಟ್‌-ಕೋಲ್ಕತಾ ನೈಟ್‌ ರೈಡರ್ಸ್- 1.5 ಕೋಟಿ ರು
  30. ಮುಸ್ತಾಫಿಝುರ್ ರೆಹಮಾನ್- ಕೋಲ್ಕತಾ ನೈಟ್‌ ರೈಡರ್ಸ್‌- 9.20 ಕೋಟಿ ರು
  31. ಡ್ಯಾನಿಶ್ ಮಾಲೆವಾರ್-ಮುಂಬೈ ಇಂಡಿಯನ್ಸ್‌- 30 ಲಕ್ಷ ರು
  32. ಅಕ್ಷತ್ ರಘುವಂಶಿ-ಲಖನೌ ಸೂಪರ್‌ ಜಯಂಟ್ಸ್‌- 30 ಲಕ್ಷ ರು
  33. ಸಾತ್ವಿಕ್ ದೇಸಾಯಿ- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 30 ಲಕ್ಷ ರು
  34. ಅಮನ್ ಖಾನ್-ಚೆನ್ನೈ ಸೂಪರ್‌ ಕಿಂಗ್ಸ್‌- 40 ಲಕ್ಷ ರು
  35. ಮಂಗೇಶ್ ಯಾದವ್- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 5.20 ಕೋಟಿ ರು
  36. ಸಲಿಲ್ ಅರೋರಾ- ಸನ್‌ರೈಸರ್ಸ್‌ ಹೈದರಾಬಾದ್‌- 1.50 ಕೋಟಿ ರು
  37. ಸಾಕಿಬ್ ಹುಸೇನ್- ಸನ್‌ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  38. ಮೊಹಮ್ಮದ್ ಇಝರ್- ಮುಂಬೈ ಇಂಡಿಯನ್ಸ್‌- 30 ಲಕ್ಷ ರು
  39. ಓಂಕಾರ್ ತಮಲೆ- ಸನ್‌ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  40. ಕೂಪರ್ ಕೊನೊಲಿ- ಪಂಜಾಬ್‌ ಕಿಂಗ್ಸ್‌- 3 ಕೋಟಿ ರು
  41. ಅಮಿತ್ ಕುಮಾರ್-ಸನ್‌ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  42. ಅಥರ್ವ ಅಂಕೋಲೆಕರ್-ಮುಂಬೈ ಇಂಡಿಯನ್ಸ್‌- 30 ಲಕ್ಷ ರು
  43. ಪ್ರಫುಲ್ ಹಿಂಗೆ- ಸನ್‌ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  44. ಕ್ರೇನ್ಸ್ ಫುಲೆಟ್ರಾ- ಸನ್‌ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  45. ಸಾರ್ಥನ್ ರಂಜನ್- ಕೋಲ್ಕತಾ ನೈಟ್‌ ರೈಡರ್ಸ್‌- 30 ಲಕ್ಷ ರು
  46. ದಕ್ಷ ಕರಮ್‌-ಕೋಲ್ಕತಾ ನೈಟ್‌ ರೈಡರ್ಸ್‌- 30 ಲಕ್ಷ ರು
  47. ಸರ್ಫರಾಜ್ ಖಾನ್-ಚೆನ್ನೈ ಸೂಪರ್‌ ಕಿಂಗ್ಸ್‌- 75 ಲಕ್ಷ ರು
  48. ಲಿಯಾಮ್ ಲಿವಿಂಗ್‌ಸ್ಟೋನ್‌-ಸನ್‌ರೈಸರ್ಸ್‌ ಹೈದರಾಬಾದ್‌- 13 ಕೋಟಿ ರು
  49. ರಚಿನ್ ರವೀಂದ್ರ- ಕೋಲ್ಕತಾ ನೈಟ್‌ ರೈಡರ್ಸ್‌- 2 ಕೋಟಿ ರು
  50. ಆಕಾಶ್ ದೀಪ್- ಕೋಲ್ಕತಾ ನೈಟ್‌ ರೈಡರ್ಸ್‌- ಒಂದು ಕೋಟಿ ರು
  51. ಮ್ಯಾಟ್ ಹೆನ್ರಿ- ಚೆನೈ ಸೂಪರ್‌ ಕಿಂಗ್ಸ್‌- 2 ಕೋಟಿ ರು
  52. ಶಿವಂ ಮಾವಿ- ಸನ್‌ರೈಸರ್ಸ್‌ ಹೈದರಾಬಾದ್‌- 75 ಲಕ್ಷ ರು
  53. ರಾಹುಲ್ ಚಹರ್- ಚೆನ್ನೈ ಸೂಪರ್‌ ಕಿಂಗ್ಸ್‌- 5.2 ಕೋಟಿ ರು
  54. ಬೆನ್ ದ್ವಾರ್ಶುಯಿಸ್- ಪಂಜಾಬ್‌ ಕಿಂಗ್ಸ್‌- 4.40 ಕೋಟಿ ರು
  55. ಜೋರ್ಡಾನ್ ಕಾಕ್ಸ್- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು-75 ಲಕ್ಷ ರು
  56. ಜಾಶ್ ಇಂಗ್ಲಿಸ್- ಲಖನೌ ಸೂಪರ್‌ ಜಯಂಟ್ಸ್- 8.60 ಕೋಟಿ ರು
  57. ಲುಂಗಿ ಎನ್‌ಗಿಡಿ- ಡೆಲ್ಲಿ ಕ್ಯಾಪಿಟಲ್ಸ್‌- 2 ಕೋಟಿ ರು
  58. ಮಯಾಂಕ್ ರಾವತ್- ಮುಂಬೈ ಇಂಡಿಯನ್ಸ್‌- 30 ಲಕ್ಷ ರು
  59. ಅಮನ್ ರಾವ್- ರಾಜಸ್ಥಾನ್‌ ರಾಯಲ್ಸ್‌- 30 ಲಕ್ಷ ರು
  60. ಪ್ರವೀಣ್ ದುಬೆ-ಪಂಜಾಬ್‌ ಕಿಂಗ್ಸ್‌- 30 ಲಕ್ಷ ರು
  61. ಸಾಹಿಲ್ ಪರಾಖ್- ಡೆಲ್ಲಿ ಕ್ಯಾಪಿಟಲ್ಸ್‌- 30 ಲಕ್ಷ ರು
  62. ವಿಶಾಲ್‌ ನಿಶಾದ್-ಪಂಜಾಬ್‌ ಕಿಂಗ್ಸ್‌- 30 ಲಕ್ಷ ರು
  63. ಬ್ರಿಜೇಶ್ ಶರ್ಮಾ- ರಾಜಸ್ಥಾನ್‌ ರಾಯಲ್ಸ್‌- 30 ಲಕ್ಷ ರು
  64. ಜ್ಯಾಕ್ ಎಡ್ವರ್ಡ್ಸ್- ಸನ್ರೈಸರ್ಸ್‌ ಹೈದರಾಬಾದ್‌- 30 ಲಕ್ಷ ರು
  65. ಪೃಥ್ವಿ ಶಾ-ಡೆಲ್ಲಿ ಕ್ಯಾಪಿಟಲ್ಸ್‌- 75 ಲಕ್ಷ ರು
  66. ಝ್ಯಾಕ್‌ ಫೌಕ್ಸ್‌- ಚೆನ್ನೈ ಸೂಪರ್‌ ಕಿಂಗ್ಸ್‌- 75 ಲಕ್ಷ ರು
  67. ಟಾಮ್ ಬ್ಯಾಂಟನ್- ಗುಜರಾತ್‌ ಟೈಟನ್ಸ್‌- 75 ಲಕ್ಷ ರು
  68. ಆಡಮ್ ಮಿಲ್ನೆ- ರಾಜಸ್ಥಾನ್‌ ರಾಯಲ್ಸ್‌- 2.40 ಕೋಟಿ ರು
  69. ಕುಲದೀಪ್ ಸೇನ್-ರಾಜಸ್ಥಾನ್‌ ರಾಯಲ್ಸ್‌- 75 ಲಕ್ಷ ರು
  70. ವಿಕ್ಕಿ ಒಸ್ತ್ವಾಲ್- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 30 ಲಕ್ಷ ರು
  71. ಪೃಥ್ವಿ ರಾಜ್- ಗುಜರಾತ್‌ ಟೈಟನ್ಸ್‌- 30 ಲಕ್ಷ ರು
  72. ಲ್ಯೂಕ್ ವುಡ್-ಗುಜರಾತ್‌ ಟೈಟನ್ಸ್‌- 75 ಲಕ್ಷ ರು
  73. ವಿಹಾನ್ ಮಲ್ಹೋತ್ರಾ- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 30 ಲಕ್ಷ ರು
  74. ಕನಿಷ್ ಚೌಹಾಣ್- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 30 ಲಕ್ಷ ರು
  75. ಕೈಲ್ ಜೇಮಿಸನ್-ಡೆಲ್ಲಿ ಕ್ಯಾಪಿಟಲ್ಸ್‌- 2 ಕೋಟಿ ರು

Auqib Nabi Dar: ತಮ್ಮ ಮೂಲ ಬೆಲೆಯ 28 ಪಟ್ಟು ಜಾಸ್ತಿ ಮೊತ್ತ ಜೇಬಿಗಿಳಿಸಿಕೊಂಡ ಜಮ್ಮು-ಕಾಶ್ಮೀರ ವೇಗಿ!

2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್‌ ಆಟಗಾರರು

  1. ಜೆರಾಲ್ಡ್ ಕೊಯೆಟ್ಜೀ - 2 ಕೋಟಿ
  2. ಸ್ಪೆನ್ಸರ್ ಜಾನ್ಸನ್ - 1.5 ಕೋಟಿ
  3. ಫಜಲ್ಹಕ್ ಫಾರೂಕಿ - 1 ಕೋಟಿ
  4. ಮಹೇಶ್ ತೀಕ್ಷಣ - 2 ಕೋಟಿ
  5. ಮುಜೀಬ್ ಉರ್ ರೆಹಮಾನ್ - 2 ಕೋಟಿ
  6. ರಾಜ್ ಲಿಂಬಾನಿ - 30 ಲಕ್ಷ
  7. ಸಿಮರ್ಜೀತ್ ಸಿಂಗ್ - 30 ಲಕ್ಷ
  8. ಆಕಾಶ್ ಮಧ್ವಲ್ - 30 ಲಕ್ಷ
  9. ವಹಿದುಲ್ಹಾ ಜದ್ರಾನ್ - 30 ಲಕ್ಷ
  10. ಶಿವಂ ಶುಕ್ಲಾ - 30 ಲಕ್ಷ
  11. ಕರಣ್‌ ಶರ್ಮಾ - 50 ಲಕ್ಷ
  12. ಕಾರ್ತಿಕೇಯ ಸಿಂಗ್ - 30 ಲಕ್ಷ
  13. ಚೇತನ್ ಸಕರಿಯಾ - 75 ಲಕ್ಷ
  14. ವಕಾರ್ ಸಲಾಂಖೈಲ್ - 1 ಕೋಟಿ
  15. ಕೆ.ಎಂ.ಆಸಿಫ್ - 40 ಲಕ್ಷ
  16. ಮುರುಗನ್ ಅಶ್ವಿನ್ - 30 ಲಕ್ಷ
  17. ತೇಜಸ್ ಬರೋಕಾ - 30 ಲಕ್ಷ
  18. ಕೆ.ಸಿ.ಕಾರಿಯಪ್ಪ - 30 ಲಕ್ಷ
  19. ಮೋಹಿತ್ ರಥಿ - 30 ಲಕ್ಷ
  20. ಟಾಸ್ಕಿನ್ ಅಹ್ಮದ್ - 75 ಲಕ್ಷ
  21. ರಿಚರ್ಡ್ ಗ್ಲೀಸನ್ - 75 ಲಕ್ಷ
  22. ಅಲ್ಜಾರಿ ಜೋಸೆಫ್ - 2 ಕೋಟಿ
  23. ರಿಲೆ ಮೆರೆಡಿತ್ - 1.5 ಕೋಟಿ
  24. ಜೇ ರಿಚರ್ಡ್ಸನ್ - 1.5 ಕೋಟಿ
  25. ಇರ್ಫಾನ್ ಉಮೈರ್ - 30 ಲಕ್ಷ
  26. ಮಯಾಂಕ್ ದಾಗರ್ - 30 ಲಕ್ಷ
  27. ಜಿಕ್ಕು ಬ್ರೈಟ್ - 30 ಲಕ್ಷ
  28. ಇಜಾಜ್ ಸವಾರಿಯಾ - 30 ಲಕ್ಷ
  29. ಮನಿ ಗ್ರೆವಾಲ್ - 30 ಲಕ್ಷ
  30. ಆರ್ ಎಸ್ ಅಂಬರೀಶ್‌ - 30 ಲಕ್ಷ
  31. ಗಸ್ ಅಟ್ಕಿನ್ಸನ್ - 2 ಕೋಟಿ
  32. ವಿಯಾನ್ ಮುಲ್ಡರ್ - 1 ಕೋಟಿ
  33. ದೀಪಕ್ ಹೂಡಾ - 75 ಲಕ್ಷ
  34. ವಿಜಯ್ ಶಂಕರ್ - 30 ಲಕ್ಷ
  35. ರಾಜವರ್ಧನ್ ಹಂಗರ್ಗೇಕರ್ - 40 ಲಕ್ಷ
  36. ಮಹಿಪಾಲ್ ಲೊಮ್ರೋರ್ - 50 ಲಕ್ಷ
  37. ಈಡನ್ ಟಾಮ್ - 30 ಲಕ್ಷ
  38. ತನುಷ್ ಕೋಟ್ಯಾನ್ - 30 ಲಕ್ಷ
  39. ಕಮಲೇಶ್ ನಾಗರಕೋಟಿ - 30 ಲಕ್ಷ
  40. ಸನ್ವೀರ್ ಸಿಂಗ್ - 30 ಲಕ್ಷ
  41. ಸೀನ್ ಅಬಾಟ್ - 2 ಕೋಟಿ
  42. ಮೈಕಲ್ ಬ್ರೇಸ್‌ವೆಲ್ - 2 ಕೋಟಿ
  43. ಡ್ಯಾರಿಲ್ ಮಿಚೆಲ್ - 2 ಕೋಟಿ
  44. ದಸೂನ್ ಶನಕ - 75 ಲಕ್ಷ
  45. ಡಾನ್ ಲಾರೆನ್ಸ್ - 2 ಕೋಟಿ
  46. ತನಯ್ ತ್ಯಾಗರಾಜನ್ - 30 ಲಕ್ಷ
  47. ನೇಥನ್ ಸ್ಮಿತ್ - 75 ಲಕ್ಷ
  48. ಕರಣ್ ಲಾಲ್ - 30 ಲಕ್ಷ
  49. ಉತ್ಕರ್ಷ್ ಸಿಂಗ್ - 30 ಲಕ್ಷ
  50. ಆಯುಷ್ ವರ್ತಕ್ - 30 ಲಕ್ಷ
  51. ಮಣಿಶಂಕರ್ ಮುರಾಸಿಂಗ್ - 30 ಲಕ್ಷ
  52. ಮ್ಯಾಕ್ನೀಲ್ ನೊರೊನ್ಹಾ - 30 ಲಕ್ಷ
  53. ಸಿದ್ಧಾರ್ಥ್ ಯಾದವ್ - 30 ಲಕ್ಷ
  54. ರಿತಿಕ್ ಟಾಡಾ - 30 ಲಕ್ಷ
  55. ಚಾಮ ಮಿಲಿಂದ್ - 30 ಲಕ್ಷ
  56. ವಿಲಿಯಂ ಸುದರ್ಲ್ಯಾಂಡ್ - 1 ಕೋಟಿ
  57. ಕೆ.ಎಸ್.ಭರತ್ - 75 ಲಕ್ಷ
  58. ರಹಮಾನುಲ್ಲಾ ಗುರ್ಬಾಜ್ - 1.5 ಕೋಟಿ
  59. ಜಾನಿ ಬೈರ್‌ಸ್ಟೋ - 1 ಕೋಟಿ
  60. ಜೇಮಿ ಸ್ಮಿತ್ - 2 ಕೋಟಿ
  61. ರುಚಿತ್ ಅಹಿರ್ - 30 ಲಕ್ಷ
  62. ವಂಶ್ ಬೇಡಿ - 30 ಲಕ್ಷ
  63. ತುಷಾರ್ ರಹೇಜಾ - 30 ಲಕ್ಷ
  64. ಕಾನರ್ ಎಸ್ಟರ್ಹ್ಯೂಜೆನ್ - 30 ಲಕ್ಷ