ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂರ್ಯಕುಮಾರ್‌ ಯಾದವ್‌ ನಾಯಕತ್ವದಲ್ಲಿನ ವಿಶೇಷ ಗುಣವನ್ನು ತಿಳಿಸಿದ ಮೊಹಮ್ಮದ್‌ ಕೈಫ್‌!

Mohammed Kaif on Suryakumar Yadav Captaincy: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಸದ್ಯ ಐದು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ 2-1 ಮುನ್ನಡೆ ಪಡೆದಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ಭಾರತದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಶ್ಲಾಘಿಸಿದ್ದಾರೆ.

ಸೂರ್ಯಕುಮಾರ್‌ ನಾಯಕತ್ವವನ್ನು ಶ್ಲಾಘಿಸಿದ ಮೊಹಮ್ಮದ್‌ ಕೈಫ್‌!

ಸೂರ್ಯಕುಮಾರ್‌ ಯಾದವ್‌ರ ನಾಯಕತ್ವವನ್ನು ಶ್ಲಾಘಿಸಿದ ಮೊಹಮ್ಮದ್‌ ಕೈಫ್‌. -

Profile
Ramesh Kote Nov 8, 2025 5:08 PM

ನವದೆಹಲಿ: ಭಾರತ ಟಿ20 ತಂಡದ (Indian Cricket team) ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರೋಹಿತ್‌ ಶರ್ಮಾ ಅವರು 2024ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆದ ಬಳಿಕ ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ನಾಯಕನಾಗುವ ಮೂಲಕ ರೋಹಿತ್‌ ಶರ್ಮಾ ಅವರ ಸ್ಥಾನವನ್ನು ತುಂಬಿದ್ದರು. ಅಂದಿನಿಂದ ಸೂರ್ಯಕುಮಾರ್‌ ಯಾದವ್‌ ಅವರು ನಾಯಕನಾಗಿ ಯಶಸ್ವಿಯಾಗಿದ್ದಾರೆ. ನಾಯಕತ್ವದ ಗುಣ, ಬೌಲಿಂಗ್‌ ಬದಲಾವಣೆ, ಫೀಲ್ಡಿಂಗ್‌ ಬದಲಾವಣೆ ಸೇರಿದಂತೆ ಹಲವು ತಂತ್ರಗಾರಿಕೆಯಲ್ಲಿ ಸೂರ್ಯಕುಮಾರ್‌ ಯಾದವ್‌ ಉತ್ತಮವಾಗಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ನಾಯಕನಾಗಿ ಸೂರ್ಯಕುಮಾರ್ ಅವರ ಅನಿರೀಕ್ಷಿತತೆಯನ್ನು ಎತ್ತಿ ತೋರಿಸಿದರು. ಅವರು ಸ್ಥಿರ ಯೋಜನೆಯನ್ನು ಅವಲಂಬಿಸುವುದಿಲ್ಲ ಎಂದು ಹೇಳಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ತಂತ್ರಗಳೆರಡರಲ್ಲೂ ಸೂರ್ಯಕುಮಾರ್ ಯಾದವ್ ತಮ್ಮ ನಿರ್ಧಾರ ತೆಗೆದುಕೊಳ್ಳುವಲ್ಲಿ ನಮ್ಯತೆಯನ್ನು ಕಾಯ್ದುಕೊಳ್ಳುತ್ತಾರೆ ಎಂದು ಕೈಫ್ ಶ್ಲಾಘಿಸಿದ್ದಾರೆ.

IND vs AUS: ಐದನೇ ಟಿ20ಐ ಪಂದ್ಯದಿಂದ ತಿಲಕ್‌ ವರ್ಮಾರನ್ನು ಕೈ ಬಿಡಲು ಕಾರಣವೇನು?

"ನಾಯಕನಾಗಿ ಸೂರ್ಯಕುಮಾರ್ ಯಾವುದೇ ಸ್ಥಿರ ಯೋಜನೆಯೊಂದಿಗೆ ಮುಂದುವರಿಯಲು ಬಯಸುವುದಿಲ್ಲ ಎಂದು ನಾನು ನೋಡುತ್ತೇನೆ. ಉದಾಹರಣೆಗೆ, ಬಲಗೈ ಬ್ಯಾಟ್ಸ್‌ಮನ್‌ ಸ್ಟ್ರೈಕ್‌ನಲ್ಲಿದ್ದರೆ, ಅವರು ಅಕ್ಷರ್ ಪಟೇಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ವಾಷಿಂಗ್ಟನ್ ಸುಂದರ್‌ಗೆ ಯಾವುದೇ ಓವರ್‌ಗಳನ್ನು ನೀಡದಿದ್ದರೂ ಅವರಿಗೆ ಅದು ಮುಖ್ಯವಲ್ಲ; ನಿರ್ದಿಷ್ಟ ಪರಿಸ್ಥಿತಿಯಲ್ಲಿ ಒತ್ತಡವನ್ನು ಉಂಟುಮಾಡುವ ಬೌಲರ್ ಅನ್ನು ಅವರು ಆಯ್ಕೆ ಮಾಡುತ್ತಾರೆ. ಟರ್ನಿಂಗ್ ಟ್ರ್ಯಾಕ್‌ನಲ್ಲಿ ಅರ್ಷದೀಪ್ ಸಿಂಗ್ ಕೇವಲ ಎರಡು ಓವರ್‌ಗಳನ್ನು ಮಾತ್ರ ಬೌಲ್ ಮಾಡಬಹುದು, ಸ್ಪಿನ್ನರ್‌ಗಳು ಹೆಚ್ಚು ಬೌಲ್ ಮಾಡಬಹುದು. ಕೆಲಸವನ್ನು ಪೂರ್ಣಗೊಳಿಸಲು ಪರಿಸ್ಥಿತಿ ಮತ್ತು ಪಿಚ್ ಪರಿಸ್ಥಿತಿಗಳ ಆಧಾರದ ಮೇಲೆ ಬೌಲರ್‌ಗಳನ್ನು ಬಳಸುತ್ತೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು," ಎಂದು ಮೊಹಮ್ಮದ್‌ ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಅವರು ತಮ್ಮ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಮಾಡುವುದು ಕೂಡ ಅವರ ನಾಯಕತ್ವದ ವಿಶಿಷ್ಟ ಲಕ್ಷಣಗಳು. ಸ್ವತಃ ಸೂರ್ಯಕುಮಾರ್‌ ಯಾದವ್‌ ಅವರೇ ತಮ್ಮ ಮೂರನೇ ಕ್ರಮಾಂಕವನ್ನು ಇತರೆ ಆಟಗಾರರಿಗೆ ಬಿಟ್ಟುಕೊಟ್ಟಿರುವ ಹಲವು ಸಂದರ್ಭಗಳಿವೆ. ಅದರಂತೆ ಮೂರನೇ ಪಂದ್ಯದಲ್ಲಿ ಮೂರನೇ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಆಡಿಸಿದ್ದರು. ಈ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

IND vs AUS 5th T20: ಟಾಸ್‌ ಸೋತ ಭಾರತ; ತಂಡದಲ್ಲಿ ಒಂದು ಬದಲಾವಣೆ

ಆಸ್ಟ್ರೇಲಿಯಾ ವಿರುದ್ಧ ಐದನೇ ಟಿ20ಐ ಪಂದ್ಯವನ್ನು ಭಾರತ ಗೆದ್ದರೆ, ಸೂರ್ಯಕುಮಾರ್‌ ಯಾದವ್‌ ಅವರು ತಮ್ಮ ನಾಯಕತ್ವದಲ್ಲಿ ಸತತ ಐದು ಟಿ20ಐ ಸರಣಿ ಗೆದ್ದಂತಾಗಲಿದೆ. ಸೂರ್ಯಕುಮಾರ್‌ ನಾಯಕತ್ವದಲ್ಲಿ ಭಾರತ ತಂಡ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ವಿರುದ್ದ ಟಿ20ಐ ಸರಣಿಗಳನ್ನು ಗೆದ್ದಿದೆ. ನಂತರ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಸೋಲಿಲ್ಲದೆ ಚಾಂಪಿಯನ್‌ ಆಗಿತ್ತು.

"ಬ್ಯಾಟಿಂಗ್‌ನಲ್ಲಿಯೂ ಅವರು ಅದೇ ರೀತಿಯ ಯೋಜನೆಯನ್ನು ಹೊಂದಿದೆ. ಮೂರನೇ ಕ್ರಮಾಂಕಕ್ಕೆ ಶಿವಂ ದುಬೆ ಏಕೆ? ಏಕೆಂದರೆ, 7ನೇ ಓವರ್‌ನಲ್ಲಿ ಅಭಿಷೇಕ್‌ ಶರ್ಮಾ ಔಟ್‌ ಆದ ಬಳಿಕ ಸ್ಪಿನ್ನರ್‌ಗಳು ಬೌಲ್‌ ಮಾಡುತ್ತಿದ್ದರು. ಆಡಂ ಝಾಂಪ ಅವರಿಗೆ ಇನ್ನೂ ನಾಲ್ಕು ಓವರ್‌ಗಳು ಇದ್ದವು, ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಬೌಲ್‌ ಮಾಡಬಹುದಾದ ಅವಕಾಶವಿತ್ತು. ಈ ಕಾರಣದಿಂದ ದುಬೆ ಅವರನ್ನು ಬೇಗ ಕ್ರೀಸ್‌ಗೆ ಕಳುಹಿಸಲಾಗಿತ್ತು. ಆ ಮೂಲಕ ಅವರಿಂದ ದೊಡ್ಡ ಹೊಡೆತಗಳಿಗೆ ಪ್ರೇರೇಪಿಸಲಾಗುತ್ತು ಹಾಗೂ ಅವರು ಸ್ಪಿನ್ನರ್‌ಗಳನ್ನು ನಿರ್ವಹಿಸುತ್ತಾರೆ. ಅಲ್ಲದೆ, ಅವರನ್ನು ಮುಕ್ತವಾಗಿ ಬ್ಯಾಟ್‌ ಬೀಸುವಂತೆ ಹೇಳಲಾಗಿತ್ತು," ಎಂದು ಮೊಹಮ್ಮದ್‌ ಕೈಫ್‌ ತಿಳಿಸಿದ್ದಾರೆ.