SRH vs DC: ಧೋನಿಯ ಸಿಕ್ಸರ್ ದಾಖಲೆ ಹಿಂದಿಕ್ಕಿ, ಕೊಹ್ಲಿಯ ಶತಕದ ದಾಖಲೆ ಸರಿಗಟ್ಟಿದ ಅಭಿಷೇಕ್ ಶರ್ಮಾ
IPL 2026: ಅಭಿಷೇಕ್ ತಮ್ಮ ಶತಕದೊಂದಿಗೆ ವಿರಾಟ್ ಕೊಹ್ಲಿ ಅವರ ಬೃಹತ್ ದಾಖಲೆಯನ್ನು ಸರಿಗಟ್ಟಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಒಂಬತ್ತನೇ ಶತಕವಾಗಿದ್ದು, ಈಗ ಅವರು ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಜಂಟಿಯಾಗಿ ಹೊಂದಿದ್ದಾರೆ. ಕೊಹ್ಲಿ ಕೂಡ 9 ಶತಕ ಬಾರಿಸಿದ್ದಾರೆ.
Abhishek Sharma -
ಹೈದರಾಬಾದ್, ಎ.22: ಮಂಗಳವಾರ, ಎಪ್ರಿಲ್ 21 ರಂದು ಡೆಲ್ಲಿ ಕ್ಯಾಪಿಟಲ್ಸ್(SRH vs DC) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2026(IPL 2026)ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ(Abhishek Sharma) ತಮ್ಮ ಅದ್ಭುತ ಶತಕ ಗಳಿಸುವ ಮೂಲಕ ಭಾರತದ ದಂತಕಥೆ ಎಂಎಸ್ ಧೋನಿ ಅವರ ಟಿ20 ದಾಖಲೆಯನ್ನು ಹಿಂದಿಕ್ಕಿದರು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ 47 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು.
ಪಂದ್ಯದಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ ಅಭಿಷೇಕ್, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಎಂ.ಎಸ್ ಧೋನಿ ದಾಖಲೆಯನ್ನು ಹಿಂದಿಕ್ಕಿದರು. ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಷೇಕ್ 341 ಸಿಕ್ಸರ್‌ಗಳನ್ನು ಬಾರಿಸಿದ್ದರು. ಧೋನಿ(350) ದಾಖಲೆ ಮುರಿಯಲು 10 ಸಿಕ್ಸರ್ ಅಗತ್ಯವಿತ್ತು. ಅದರಂತೆ ಅವರು 10 ಸಿಕ್ಸರ್ ಸಿಡಿಸಿ ದಾಖಲೆ ತಮ್ಮ ಹೆಸರಿಗೆ ಬರೆದರು. ಸದ್ಯ ಅಭಿಷೇಕ್ 351 ಸಿಕ್ಸರ್ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.
ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿದೆ. ರೋಹಿತ್ 555 ಸಿಕ್ಸರ್ ಬಾರಿಸಿದ್ದಾರೆ. ಆ ಬಳಿಕ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿದ್ದಾರೆ.
ಟಿ20ಯಲ್ಲಿ ಭಾರತೀಯರ ಅತಿ ಹೆಚ್ಚು ಸಿಕ್ಸರ್‌ಗಳು
ರೋಹಿತ್ ಶರ್ಮಾ: 555 ಸಿಕ್ಸರ್
ವಿರಾಟ್ ಕೊಹ್ಲಿ: 443 ಸಿಕ್ಸರ್
ಸೂರ್ಯಕುಮಾರ್ ಯಾದವ್: 423 ಸಿಕ್ಸರ್
ಸಂಜು ಸ್ಯಾಮ್ಸನ್: 405 ಸಿಕ್ಸರ್
ಅಭಿಷೇಕ್ ಶರ್ಮಾ: 351 ಸಿಕ್ಸರ್
ಎಂಎಸ್ ಧೋನಿ: 350 ಸಿಕ್ಸರ್
SRH vs DC: ಶತಕ ಸಿಡಿಸಿ ಕ್ರಿಸ್ ಗೇಲ್ ವಿಶ್ವ ದಾಖಲೆ ಮುರಿದ ಅಭಿಷೇಕ್ ಶರ್ಮಾ
ಅಭಿಷೇಕ್ ತಮ್ಮ ಶತಕದೊಂದಿಗೆ ವಿರಾಟ್ ಕೊಹ್ಲಿ ಅವರ ಬೃಹತ್ ದಾಖಲೆಯನ್ನು ಸರಿಗಟ್ಟಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಒಂಬತ್ತನೇ ಶತಕವಾಗಿದ್ದು, ಈಗ ಅವರು ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಜಂಟಿಯಾಗಿ ಹೊಂದಿದ್ದಾರೆ. ಕೊಹ್ಲಿ ಕೂಡ 9 ಶತಕ ಬಾರಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರರು
ವಿರಾಟ್ ಕೊಹ್ಲಿ: 9 ಶತಕಗಳು
ಅಭಿಷೇಕ್ ಶರ್ಮಾ: 9 ಶತಕಗಳು
ರೋಹಿತ್ ಶರ್ಮಾ: 8 ಶತಕಗಳು
ಇಶಾನ್ ಕಿಶನ್: 7 ಶತಕಗಳು
ಕೆ.ಎಲ್ ರಾಹುಲ್: 7 ಶತಕಗಳು
ಪಂದ್ಯ ಸೋತ ಡೆಲ್ಲಿ
ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 47 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು. ಅದರೊಂದಿಗೆ, ಹಾಲಿ ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿ ಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಸನ್‌ರೈಸರ್ಸ್ ನೀಡಿದ್ದ 243 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ 9 ವಿಕೆಟ್‌ಗಳಿಗೆ 195 ರನ್ ಗಳಿಸಿ ಸೋಲೊಪ್ಪಿಕೊಂಡಿತು.