SRH vs DC: ಶತಕ ಸಿಡಿಸಿ ಕ್ರಿಸ್ ಗೇಲ್ ವಿಶ್ವ ದಾಖಲೆ ಮುರಿದ ಅಭಿಷೇಕ್ ಶರ್ಮಾ
IPL 2026: 2025ರ ಐಪಿಎಲ್ ಆವೃತ್ತಿಯಲ್ಲಿ, ಅಭಿಷೇಕ್ ಪಂಜಾಬ್ ಕಿಂಗ್ಸ್ ವಿರುದ್ಧ 141 ರನ್ ಗಳಿಸಿದ್ದರು. 2025 ರಂದು ಇಂಗ್ಲೆಂಡ್ ವಿರುದ್ಧ ಭಾರತದ ಪರ T20I ಪಂದ್ಯದಲ್ಲಿ 135 ರನ್ ಗಳಿಸಿದ್ದಾರೆ ಮತ್ತು ನವೆಂಬರ್ 30, 2025 ರಂದು ಹೈದರಾಬಾದ್‌ನಲ್ಲಿ ಬಂಗಾಳ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ಪರ 52 ಎಸೆತಗಳಲ್ಲಿ ಒಟ್ಟು 148 ರನ್ ಗಳಿಸಿದ್ದರು.
Abhishek Sharma -
ಹೈದರಾಬಾದ್ ಎ.22: ವಿಶ್ವದ ನಂಬರ್ 1 ಟಿ20ಐ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ(Abhishek Sharma) ಮಂಗಳವಾರ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ ಡೆಲ್ಲಿ ಕ್ಯಾಪಿಟಲ್ಸ್(SRH vs DC) ವಿರುದ್ಧದ ಪಂದ್ಯದಲ್ಲ ಸ್ಫೋಟಕ ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಬಾರಿ 130+ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದಿದ್ದಾರೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ 68 ಎಸೆತಗಳಲ್ಲಿ ಅಜೇಯ 135 ರನ್ ಗಳಿಸಿದರು. 10 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಅಬ್ಬರದ ಬ್ಯಾಟಿಂಗ್‌ನಿಂದ ತಂಡ 20 ಓವರ್‌ಗಳ ಕೋಟಾದಲ್ಲಿ 2 ವಿಕೆಟ್‌ಗೆ 242 ರನ್ ಗಳಿಸಿತು.
2025ರ ಐಪಿಎಲ್ ಆವೃತ್ತಿಯಲ್ಲಿ, ಅಭಿಷೇಕ್ ಪಂಜಾಬ್ ಕಿಂಗ್ಸ್ ವಿರುದ್ಧ 141 ರನ್ ಗಳಿಸಿದ್ದರು. 2025 ರಂದು ಇಂಗ್ಲೆಂಡ್ ವಿರುದ್ಧ ಭಾರತದ ಪರ T20I ಪಂದ್ಯದಲ್ಲಿ 135 ರನ್ ಗಳಿಸಿದ್ದಾರೆ ಮತ್ತು ನವೆಂಬರ್ 30, 2025 ರಂದು ಹೈದರಾಬಾದ್‌ನಲ್ಲಿ ಬಂಗಾಳ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ಪರ 52 ಎಸೆತಗಳಲ್ಲಿ ಒಟ್ಟು 148 ರನ್ ಗಳಿಸಿದ್ದರು.
ಅಭಿಷೇಕ್‌ಗೂ ಮುನ್ನ ಅತ್ಯಧಿಕ ಬಾರಿ 130 ಪ್ಲಸ್ ರನ್ ಗಳಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಅವರು ಮೂರು ಬಾರಿ 130 ರನ್‌ಗಳ ಗಡಿ ದಾಟಿದ್ದರು.
DC vs SRH: ಅಭಿಷೇಕ್ ಶರ್ಮಾ ಸ್ಪೋಟಕ ಶತಕದಿಂದ ಗೆದ್ದು ಬೀಗಿದ ಸನ್‌ರೈಸರ್ಸ್ ಹೈದರಾಬಾದ್!
50 ಕ್ಕಿಂತ ಕಡಿಮೆ ಎಸೆತಗಳಲ್ಲಿ ಬಹು ಐಪಿಎಲ್ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸನ್‌ರೈಸರ್ಸ್ ಇನ್ನಿಂಗ್ಸ್‌ನ 15 ನೇ ಓವರ್‌ನ ಎರಡನೇ ಎಸೆತದಲ್ಲಿ ನಿತೀಶ್ ರಾಣಾ ಅವರನ್ನು ಸಿಕ್ಸರ್‌ಗೆ ಸಿಕ್ಸರ್ ಬಾರಿಸುವ ಮೂಲಕ ಅವರು 100 ರನ್‌ಗಳ ಗಡಿ ತಲುಪಿದರು.
ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ ದಾಖಲೆ ವೈಭವ್ ಸೂರ್ಯವಂಶಿ ಅವರ ಹೆಸರಿನಲ್ಲಿದೆ. 2025ರಲ್ಲಿ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಆಗ ಅವರು ಕೇವಲ 4 ವರ್ಷ ವಯಸ್ಸಿನವರಾಗಿದ್ದರು.
ಪಂದ್ಯ ಗೆದ್ದ ಹೈದರಾಬಾದ್
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಸನ್‌ರೈಸರ್ಸ್ ತಂಡ ತವರಿನ ಲಾಭವೆತ್ತಿ 2 ವಿಕೆಟ್‌ಗೆ 242 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ 9 ವಿಕೆಟ್‌ಗೆ 195 ರನ್ ಗಳಿಸಲಷ್ಟೇ ಶಕ್ತವಾಯಿತು.