ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 New Schedule: ಪರಿಷ್ಕೃತ ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ತಂಡಗಳ ಅಭ್ಯಾಸ ಆರಂಭ

ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ಕಣಕ್ಕಿಳಿಯುವ ಮೂಲಕ ಮತ್ತೆ ಐಪಿಎಲ್‌ಗೆ ಚಾಲನೆ ಸಿಗಲಿದೆ. ಸದ್ಯ ಆರ್‌ಸಿಬಿ ಆಡಿದ 11 ಪಂದ್ಯಗಳ ಪೈಕಿ 8 ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಗುಜರಾತ್‌ ತಂಡ ಕೂಡ 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ತಂಡಗಳ ಅಭ್ಯಾಸ ಆರಂಭ

Profile Abhilash BC May 13, 2025 11:01 AM

ಮುಂಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ(india pakistan tension) ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ(IPL 2025 Restart) 18ನೇ ಆವೃತ್ತಿಯ ಐಪಿಎಲ್‌(IPL 2025) ಮೇ 17ರಂದು ಪುನಾರಂಭಗೊಳ್ಳಲಿದೆ. ಸೋಮವಾರ ಐಪಿಎಲ್‌ ಆಡಳಿತ ಮಂಡಳಿಯು 17 ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕೆಲವು ಐಪಿಎಲ್‌ ತಂಡಗಳು ಅಭ್ಯಾಸ ಆರಂಭಿಸಿದೆ. ಗುಜರಾತ್‌ ಟೈಟಾನ್ಸ್‌ ತಂಡ ಮೇ 10ರಿಂದಲೇ ಅಭ್ಯಾಸ ಆರಂಭಿಸಿತ್ತು. ಇದೀಗ ಒಟ್ಟು ನಾಲ್ಕು ತಂಡಗಳು ಮಂಗಳವಾರದಿಂದ ಅಭ್ಯಾಸ ನಿರತರಾಗುದಾಗಿ ತಿಳಿಸಿದೆ.

ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅಧಿಕೃತ ಟ್ವೀಟ್‌ ಮೂಲಕ ತಂಡ ಮಂಗಳವಾರದಿಂದ ವಾಂಖೇಡೆ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಲಿದೆ ಎಂದು ಹೇಳಿದ್ದಾರೆ. ಉಳಿದಂತೆ ಆರ್‌ಸಿಬಿ ಕೂಡ ಮಂಗಳವಾರ ಬೆಳಗ್ಗೆ ನಾಯಕ ರಜತ್‌ ಪಾಟೀದಾರ್‌ ಅವರ ಫೋಟೊ ಹಂಚಿಕೊಂಡು ಅಭ್ಯಾಸ ಶುರು ಮಾಡಿರುವ ಸುಳಿವು ನೀಡಿದೆ.

ಪಂದ್ಯಗಳು ಬೆಂಗಳೂರು ಸೇರಿ 6 ನಗರಗಳಲ್ಲಿ ನಡೆಯಲಿವೆ. ಬೆಂಗಳೂರಿನಲ್ಲಿ 2, ಜೈಪುರಲ್ಲಿ 3, ಲಖನೌದಲ್ಲಿ 2, ಮುಂಬೈನಲ್ಲಿ 1, ಅಹಮದಾಬಾದ್‌ನಲ್ಲಿ 2, ನವದೆಹಲಿಯಲ್ಲಿ 3 ಪಂದ್ಯಗಳು ನಿಗದಿಯಾಗಿದೆ. ಪ್ಲೇ-ಆಫ್‌, ಫೈನಲ್‌ ಪಂದ್ಯಕ್ಕೆ ಇನ್ನೂ ಸ್ಥಳ ನಿಗದಿಯಾಗಿಲ್ಲ. ಕಳೆದ ಗುರುವಾರ ಅರ್ಧಕ್ಕೇ ಸ್ಥಗಿತಗೊಂಡಿದ್ದ ಡೆಲ್ಲಿ-ಪಂಜಾಬ್‌ ನಡುವಿನ ಪಂದ್ಯ ಮೇ 24ಕ್ಕೆ ಜೈಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ IPL 2025: ಆಸ್ಟ್ರೇಲಿಯಾ ಆಟಗಾರರು ಐಪಿಎಲ್‌ ಆಡುವುದು ಅನುಮಾನ

ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ಕಣಕ್ಕಿಳಿಯುವ ಮೂಲಕ ಮತ್ತೆ ಐಪಿಎಲ್‌ಗೆ ಚಾಲನೆ ಸಿಗಲಿದೆ. ಸದ್ಯ ಆರ್‌ಸಿಬಿ ಆಡಿದ 11 ಪಂದ್ಯಗಳ ಪೈಕಿ 8 ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಗುಜರಾತ್‌ ತಂಡ ಕೂಡ 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. 15 ಅಂಕ ಹೊಂದಿರುವ ಪಂಜಾಬ್‌ ಕಿಂಗ್ಸ್‌ ಮತ್ತು 14 ಅಂಕ ಪಡೆದಿರುವ ಮುಂಬೈ ಇಂಡಿಯನ್ಸ್‌ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.