ದಿಗ್ಗಜ ಇಮ್ರಾನ್ ಖಾನ್ ದಾಖಲೆ ಸರಿಗಟ್ಟಿದ ಬಾಬರ್ ಅಜಂ
Babar Azam: 1992 ರ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಪಾಕಿಸ್ತಾನಕ್ಕೆ ತಂದುಕೊಟ್ಟಿದ್ದ ಇಮ್ರಾನ್, ಪಾಕಿಸ್ತಾನವನ್ನು ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆಯನ್ನು ಹೊಂದಿದ್ದಾರೆ. 1982 ಮತ್ತು 1992 ರ ನಡುವೆ ಅವರು 187 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದರು. ಮಿಸ್ಬಾ 2008 ಮತ್ತು 2017 ರ ನಡುವೆ 151 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು.
Babar Azam -
ಕ್ವೀನ್ಸ್ ಪಾರ್ಕ್, ಆ.3: ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆರಂಭವಾದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ದಾಖಲೆಯೊಂದನ್ನು ಬರೆದಿದ್ದಾರೆ. 32 ವರ್ಷದ ಬಲಗೈ ಬ್ಯಾಟ್ಸ್‌ಮನ್ 150 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಮೂರನೇ ಪಾಕಿಸ್ತಾನಿ ಆಟಗಾರ ಎನಿಸಿದ್ದಾರೆ.
ಬಾಬರ್‌ಗೂ ಮುನ್ನ ಇಮ್ರಾನ್ ಖಾನ್ ಮತ್ತು ಮಿಸ್ಬಾ-ಉಲ್-ಹಕ್ ಮಾತ್ರ 150 ಅಥವಾ ಅದಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
1992 ರ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಪಾಕಿಸ್ತಾನಕ್ಕೆ ತಂದುಕೊಟ್ಟಿದ್ದ ಇಮ್ರಾನ್, ಪಾಕಿಸ್ತಾನವನ್ನು ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆಯನ್ನು ಹೊಂದಿದ್ದಾರೆ. 1982 ಮತ್ತು 1992 ರ ನಡುವೆ ಅವರು 187 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದರು. ಮಿಸ್ಬಾ 2008 ಮತ್ತು 2017 ರ ನಡುವೆ 151 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು.
ಬಾಬರ್ 2019 ರಲ್ಲಿ ಪಾಕಿಸ್ತಾನ ಪರ ನಾಯಕತ್ವಕ್ಕೆ ಪದಾರ್ಪಣೆ ಮಾಡಿದರು ಮತ್ತು ಆಟದ ಮೂರು ಸ್ವರೂಪಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಪಾಕಿಸ್ತಾನ ತಂಡದ ನಾಯಕನಾಗಿ ಬಾಬರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,820 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 180 ರನ್ ಗಳಿಸಿದರೆ ನಾಯಕನಾಗಿ 7,000 ರನ್ ಗಳಿಸಿದ ಎರಡನೇ ಪಾಕಿಸ್ತಾನಿ ಆಟಗಾರನಾಗಲಿದ್ದಾರೆ.
ಭಾರತದ ನೂತನ ಫೀಲ್ಡಿಂಗ್ ಕೋಚ್ ಆಗಿ ಶುಭದೀಪ್ ಘೋಷ್ ನೇಮಕ
ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವ ದಾಖಲೆ ಭಾರತದ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. 2007 ಮತ್ತು 2018 ರ ನಡುವೆ ಎಲ್ಲಾ ಮಾದರಿಗಳಲ್ಲಿ 332 ಪಂದ್ಯಗಳಲ್ಲಿ ಧೋನಿ ಭಾರತವನ್ನು ಮುನ್ನಡೆಸಿದ್ದಾರೆ. ಅವರು 2007 ರಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕತ್ವಕ್ಕೆ ಪದಾರ್ಪಣೆ ಮಾಡಿದರು, ಮತ್ತು ಭಾರತದ ನಾಯಕನಾಗಿ ಅವರ ಕೊನೆಯ ಪಂದ್ಯ 2018 ರ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧವಾಗಿತ್ತು.
ಬಾಬರ್ ಇದುವರೆಗೆ 85 ಟಿ 20 ಐ, 43 ಏಕದಿನ ಮತ್ತು 21 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿದ್ದಾರೆ.
ಪಾಕಿಸ್ತಾನ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳು
ಇಮ್ರಾನ್ ಖಾನ್-187
ಮಿಸ್ಬಾ-ಉಲ್-ಹಕ್-151
ಬಾಬರ್ ಆಜಮ್-149
ವಾಸಿಂ ಅಕ್ರಮ್-134
ಇಂಜಮಾಮ್-ಉಲ್-ಹಕ್-119
ಸರ್ಫರಾಜ್ ಅಹಮದ್-100