ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವ ಕಿರಿಯರ ಅಥ್ಲೆಟಿಕ್ಸ್​: ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ಬಸಂತ್ ಕುಮಾರ್, ಲಾಂಗ್ ಜಂಪ್‌ನಲ್ಲಿ ಶಹನವಾಜ್‌ಗೆ ಕಂಚು

U20 World Athletics: ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಹೈಜಂಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವಾಗಿದೆ. ಈ ವಾರದ ಆರಂಭದಲ್ಲಿ ಆಶಿಶ್ ಯಾದವ್ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಜೂನಿಯರ್ ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು ಮೂರು ಪದಕ ಜಯಿಸಿದೆ.

ವಿಶ್ವ ಕಿರಿಯರ ಅಥ್ಲೆಟಿಕ್ಸ್​: ಬೆಳ್ಳಿ ಗೆದ್ದ ಬಸಂತ್, ಶಹನವಾಜ್‌ಗೆ ಕಂಚು

Basant cleared 2.21m on his second attempt -

Abhilash BC
Abhilash BC Aug 9, 2026 12:22 PM

ನವದೆಹಲಿ, ಆ.9: ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌ನ ಪುರುಷರ ಹೈಜಂಪ್‌ನಲ್ಲಿ ಬಸಂತ್ ಕುಮಾರ್ ಮೇಘವಾಲ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷರ ಲಾಂಗ್ ಜಂಪ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2.21 ಮೀಟರ್ ಎತ್ತರ ಜಿಗಿದು ತಮ್ಮ ಜೀವಮಾನದ ಅತ್ಯುತ್ತಮ ಸಾಧನೆ ಮಾಡಿದರು. ಅಲ್ಜೀರಿಯಾದ ಯೂನೆಸ್ ಅಯಾಚಿ ಚಿನ್ನದ ಪದಕ ಗೆದ್ದರು. ಅಯಾಚಿ ಕೂಡ 2.21 2.21 ಮೀಟರ್ ಎತ್ತರ ಜಿಗಿದರು. ಆದರೆ ಅವರು ಮೊದಲ ಪ್ರಯತ್ನದಲ್ಲೇ ಇದನ್ನು ಸಾಧಿಸಿದ ಕಾರಣ ಚಿನ್ನ ಜಯಿಸಿದರು. ಬಸಂತ್‌ ಎರಡು ಪ್ರಯತ್ನಗಳು ಬೇಕಾಗಿದ್ದವು. ಕಂಚು ಗೆದ್ದ ಗ್ರೇಟ್ ಬ್ರಿಟನ್‌ನ ಓಟಿಸ್ ಪೂಲ್ ಕೂಡ 2.21 ಮೀ ದೂರ ಕ್ರಮಿಸಿದರು, ಆದರೆ ಅವರು ಮೂರನೇ ಪ್ರಯತ್ನ ಬೇಕಾದವು.

ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಹೈಜಂಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವಾಗಿದೆ. ಈ ವಾರದ ಆರಂಭದಲ್ಲಿ ಆಶಿಶ್ ಯಾದವ್ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಜೂನಿಯರ್ ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು ಮೂರು ಪದಕ ಜಯಿಸಿದೆ.

ಕಂಚು ಗೆದ್ದ ಶಹನವಾಜ್ ಖಾನ್

ಪುರುಷರ ಲಾಂಗ್ ಜಂಪ್‌ನಲ್ಲಿ ಶಹನವಾಜ್ ಖಾನ್ ಕಂಚಿನ ಪದಕ ಗೆದ್ದರು. ಇದು ಭಾರತಕ್ಕೆ ಸ್ಪರ್ಧೆಯಲ್ಲಿ ಮೂರನೇ ಪದಕವನ್ನು ತಂದುಕೊಟ್ಟಿತು. 7.84 ಮೀಟರ್ ಅತ್ಯುತ್ತಮ ಪ್ರಯತ್ನವು ವಿಶ್ವ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷರ ಲಾಂಗ್ ಜಂಪ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕೊರಿಯಾ ಮಾಸ್ಟರ್ಸ್‌ ಗೆದ್ದ ಅಶ್ಮಿತಾ ಚಾಲಿಹಾ

20 ವರ್ಷದ ಭಾರತೀಯ ಆಟಗಾರ 7.73 ಮೀಟರ್ ಪ್ರಯತ್ನದೊಂದಿಗೆ ಅರ್ಹತೆ ಪಡೆದ ನಂತರ ಫೈನಲ್ ಪ್ರವೇಶಿಸಿದರು ಮತ್ತು ಪದಕ ಸುತ್ತಿನಲ್ಲಿ ತಮ್ಮ ಅಂಕವನ್ನು ಸುಧಾರಿಸಿಕೊಂಡರು. ಅವರ ಮೂರನೇ ಪ್ರಯತ್ನವು ನಿರ್ಣಾಯಕವೆಂದು ಸಾಬೀತಾಯಿತು, ಅವರು 7.84 ಮೀಟರ್ ಜಿಗಿದು ಮೂರನೇ ಸ್ಥಾನಕ್ಕೆ ಏರಿದರು.

ಇಟಲಿಯ ಡೇನಿಯಲ್ ಲಿಯೊನಾರ್ಡೊ ಇಂಜೋಲಿ 7.97 ಮೀಟರ್ ದೂರ ಗುರಿಯೊಂದಿಗೆ ಚಿನ್ನ ಗೆದ್ದರೆ, ಆಸ್ಟ್ರೇಲಿಯಾದ ಮೇಸನ್ ಮೆಕ್‌ಗ್ರೋಡರ್ 7.96 ಮೀಟರ್ ದೂರ ಗುರಿಯೊಂದಿಗೆ ಬೆಳ್ಳಿ ಪದಕ ಗೆದ್ದರು.