ಚಿನ್ನಸ್ವಾಮಿಯಲ್ಲಿ ಇಂದು ನಡೆಯಲಿರುವ RCB Vs GT ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಪಿಚ್ ವರದಿ ಹೇಗಿದೆ?
IPL 2026 RCB Vs GT: ಐಪಿಎಲ್‌ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಕ್ಕೂ ಮಹತ್ವದಾಗಿದೆ. ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿ ಬರಬಹದು ಎಂಬ ಆತಂಕ ಇಲ್ಲ
ಎಂ. ಚಿನ್ನಸ್ವಾಮಿ ಮೈದಾನ ಬೆಂಗಳೂರು -
ಬೆಂಗಳೂರು: ಐಪಿಎಲ್‌ನ (IPL 2026) ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ (RCB Vs GT) ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಕ್ಕೂ ಮಹತ್ವದಾಗಿದೆ. ಆರ್‌ಸಿಬಿ ಪ್ರಸ್ತುತ ಐಪಿಎಲ್ 2026 ರ ಅಂಕಪಟ್ಟಿಯಲ್ಲಿ ಆರು ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಆದರೆ ಜಿಟಿ ಏಳನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್‌ಸಿಬಿ ಸೋತಿದ್ದರೆ, ವಾಂಖೆಡೆಯಲ್ಲಿ ನಡೆದ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 99 ರನ್‌ಗಳಿಂದ ಭಾರಿ ಸೋಲು ಅನುಭವಿಸಿತ್ತು. ಎರಡೂ ತಂಡಗಳು ಇಂದಿನ ಗೆಲುವಿಗೆ ಸೆಣಸಾಡಲಿವೆ.
ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿ ಬರಬಹದು ಎಂಬ ಆತಂಕ ಇಲ್ಲ. ಹವಾಮಾನ ವರದಿ ಪ್ರಕಾರ ಶುಕ್ರವಾರ ಭಾಗಶಃ ಮೋಡ ಕವಿದಿರುತ್ತದೆ ಎಂದು ತಿಳಿದು ಬಂದಿದೆ. 19ನೇ ಐಪಿಎಲ್ ಸೀಸನ್‌ನಲ್ಲಿ ಮಳೆಯಿಂದಾಗಿ ಈ ವರೆಗೆ ಒಂದು ಪಂದ್ಯ ರದ್ದಾಗಿದ್ದರೆ, ಹಲವು ಪಂದ್ಯಗಳನ್ನು ತಡವಾಗಿ ಪ್ರಾರಂಭಿಸಲಾಗಿತ್ತು. ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ vs ಜಿಟಿ ಪಂದ್ಯದ ಸಂದರ್ಭದಲ್ಲಿ ಹಾಗಾಗುವ ಸಾಧ್ಯತೆ ಕಡಿಮೆ. ಪಂದ್ಯ ಆರಂಭವಾಗುವ ಸಂಜೆ ತಾಪಮಾನವು 32-33 ಡಿಗ್ರಿಗಳ ಆಸುಪಾಸಿನಲ್ಲಿ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
RCB vs GT: ಪಿಚ್ ವರದಿ
ಇಂದಿನ ಪಂದ್ಯವು ಈ ಪಂದ್ಯವು ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಎದುರಿಸಿದ ಅದೇ ಮೈದಾನದಲ್ಲಿ ನಡೆಯಲಿದೆ. ಮೊದಲನೆಯ ಇನ್ನಿಂಗ್ಸ್ ಬ್ಯಾಟರ್‌ಗಳಿಗೆ ಉತ್ತಮವಾಗಿದ್ದು, ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಬಹುದು. ಪಂದ್ಯದ ಆರಂಭದ ಕೆಲ ಓವರ್ ಗಳಲ್ಲಿ ವೇಗದ ಬೌಲರ್‌ಗಳು ಹಿಡಿತ ಸಾಧಿಸಬಹುದು. ಆದರೆ ಆಟ ಮುಂದುವರಿದಂತೆ ಪಿಚ್ ಸಮತಟ್ಟಾಗುತ್ತದೆ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಕೆ ಸುಲಭವಾಗುತ್ತದೆ. ರಡನೇ ಇನ್ನಿಂಗ್ಸ್ ವೇಳೆ ಇಬ್ಬನಿಯಿಂದಾಗಿ ಚೇಸಿಂಗ್ ಮಾಡುವ ತಂಡಗಳಿಗೆ ಅನುಕೂಲ. ಹೀಗಾಗಿ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು.
RCB vs GT: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ ಸವಾಲೊಡ್ಡಲು ಗುಜರಾತ್ ರೆಡಿ; ಉಭಯ ತಂಡಗಳ ಪ್ಲೇಯಿಂಗ್-11 ಇಲ್ಲಿದೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ನ ದಾಖಲೆಗಳನ್ನು ನೋಡುವುದಾದರೆ, ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪರಸ್ಪರ ಮೂರು ಪಂದ್ಯಗಳನ್ನು ಆಡಿದ್ದು, ಗುಜರಾತ್ ಟೈಟಾನ್ಸ್ ಅವುಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದರೆ, ಆರ್‌ಸಿಬಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ. ಇನ್ನು ಈ ಬಾರಿಯೂ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ಬೌಲಿಂಗ್ ವಿಭಾಗದಿಂದ ನಿರೀಕ್ಷೆಯಷ್ಟು ಪ್ರದರ್ಶನ ಬಂದಿಲ್ಲ. ಗುಜರಾತ್ ತಂಡ ಉತ್ತಮ ಬೌಲಿಂಗ್ ಲೈನ್’ಅಪ್ ಅನ್ನು ಹೊಂದಿದೆ. ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಕಗಿಸೊ ರಬಾಡ ವೇಗಿಗಳಿದ್ದಾರೆ. ಅಷ್ಟೇ ಅಲ್ಲದೇ ವೇಗಿ ರಶೀದ್ ಖಾನ್ ಗುಜರಾತ್‌ಗೆ ಪ್ಲಸ್ ಪಾಯಿಂಟ್. ತವರಿನಲ್ಲಿ ಕೊನೆ ಪಂದ್ಯವಾದ್ದರಿಂದ ಆರ್‌ಸಿಬಿ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.