IND vs ENG: ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳು ಹೀಗಿದೆ
ಗೆಲ್ಲಲು 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 82 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಜೋ ರೂಟ್(53 ರನ್, 84 ಎಸೆತ, 6 ಬೌಂಡರಿ)ಹಾಗೂ ಜೇಮೀ ಸ್ಮಿತ್(ಔಟಾಗದೆ 44, 55 ಎಸೆತ, 4 ಬೌಂಡರಿ, 2 ಸಿಕ್ಸರ್) 6ನೇ ವಿಕೆಟ್ಗೆ ಮುರಿಯದ ಜತೆಯಾಟದಲ್ಲಿ 88 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.


ಲೀಡ್ಸ್: ಅತ್ಯಂತ ಕುತೂಹಲ ಮೂಡಿಸಿದ್ದ ಇಂಗ್ಲೆಂಡ್ ಮತ್ತು ಭಾರತ(IND vs ENG) ನಡುವಣ ಮೊದಲ ಟೆಸ್ಟ್ ಪಂದದ್ಯದಲ್ಲಿ ಕೊನೆಗೂ ಇಂಗ್ಲೆಂಡ್ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಲೀಡ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಮೊದಲ ಇನಿಂಗ್ಸ್ನಲ್ಲಿ ಭಾರತ ಮುನ್ನಡೆ ಸಾಧಿಸಿದರೂ ಕೂಡ ಸೋಲಿಗೆ ತುತ್ತಾಗಲು ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.
ಕಳಪೆ ಫೀಲ್ಡಿಂಗ್
ಕ್ರಿಕೆಟ್ ಅಂಗಳದಲ್ಲಿ ʼಕ್ಯಾಚಸ್ ವಿನ್ ಮ್ಯಾಚಸ್ʼ ಎಂಬ ಮಾತಿದೆ. ಹೀಗೆ ಕ್ಯಾಚ್ನಿಂದಲೇ ಪಂದ್ಯ ಗೆದ್ದ ಮತ್ತು ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಹಲವು ನಿದರ್ಶನಗಳಿವೆ. ಇದೀಗ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ನಲ್ಲಿ ಭಾರತ ಸೋಲಿಗೂ ಆಟಗಾರು ಕ್ಯಾಚ್ ಕೈಚೆಲ್ಲಿದ್ದು ಕೂಡ ಒಂದು ಕಾರಣವಾಗಿದೆ. ಹೌದು ಪಂದ್ಯದಲ್ಲಿ ಒಟ್ಟಾರೆ ಭಾರತೀಯ ಆಟಗಾರರು 6 ಕ್ಯಾಚ್ಗಳನ್ನು ಕೈಚೆಲ್ಲಿದರು. ಇದರಲ್ಲಿ ಯಶಸ್ವಿ ಜೈಸ್ವಾಲ್ ಅವರು ಒಟ್ಟು 4 ಕ್ಯಾಚ್ಗಳನ್ನು ಬಿಟ್ಟರು.
ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ
ಮೊದಲ ಇನಿಂಗ್ಸ್ನಲ್ಲಿ ಒಟ್ಟು ಮೂವರು ಆಟಗಾರರು ಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರೂ ಇದೇ ಲಯವನ್ನು ದ್ವಿತೀಯ ಇನಿಂಗ್ಸ್ನಲ್ಲಿ ಮುಂದುವರಿಸಲು ವಿಫಲವಾದರು. ಪಂತ್ ಮತ್ತು ರಾಹುಲ್ ಹೊರತುಪಡಿಸಿ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಕಂಡು ಬರಲಿಲ್ಲ. ಜತೆಗೆ ಬಾಲಂಗೋಚಿಗಳಿಂದ ಹೆಚ್ಚಿನ ರನ್ ಕೊಡುಗೆ ಲಭಿಸಲಿಲ್ಲ.
ಜೂ.24: ಆರಂಭಿಕ ಆಟಗಾರರಾದ ಬೆನ್ ಡಕೆಟ್(149 ರನ್, 170 ಎಸೆತ, 21 ಬೌಂಡರಿ, 1 ಸಿಕ್ಸರ್)ಹಾಗೂ ಝ್ಯಾಕ್ ಕ್ರಾಲಿ(65 ರನ್, 126 ಎಸೆತ, 7 ಬೌಂಡರಿ)ಭರ್ಜರಿ ಆರಂಭ, ಜೋ ರೂಟ್ ಜವಾಬ್ದಾರಿಯುತ ಬ್ಯಾಟಿಂಗ್(ಔಟಾಗದೆ 53, 84 ಎಸೆತ, 6 ಬೌಂಡರಿ) ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಅಂತರದಿಂದ ಗೆದ್ದುಕೊಂಡಿದೆ.
ಕೈಕೊಟ್ಟ ಬೌಲಿಂಗ್
ಮೊದಲ ಇನಿಂಗ್ಸ್ನಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ್ದ ಜಸ್ಪ್ರೀತ್ ಬುಮ್ರಾ ಎರಡನೇ ಇನಿಂಗ್ಸ್ನಲ್ಲಿ ಹೆಚ್ಚಿನ ಪ್ರಭಾವ ಬೀರಲಿಲ್ಲ. ಜತೆಗೆ ಏಕೈಕ ಸ್ಪಿನ್ನರ್ ಜಡೇಜಾ ಎರಡೂ ಇನಿಂಗ್ಸ್ನಲ್ಲಿಯೂ ಕೈಚಳಕ ತೋರಿಸುವಲ್ಲಿ ವಿಫಲ. ನಾಲ್ಕನೇ ವೇಗಿ ಆಯ್ಕೆ ಎಡವಟ್ಟು ಕೂಡ ಸೋಲಿಗೆ ಕಾರಣವಾಯಿತು.
ಗೆಲ್ಲಲು 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 82 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಜೋ ರೂಟ್(53 ರನ್, 84 ಎಸೆತ, 6 ಬೌಂಡರಿ)ಹಾಗೂ ಜೇಮೀ ಸ್ಮಿತ್(ಔಟಾಗದೆ 44, 55 ಎಸೆತ, 4 ಬೌಂಡರಿ, 2 ಸಿಕ್ಸರ್) 6ನೇ ವಿಕೆಟ್ಗೆ ಮುರಿಯದ ಜತೆಯಾಟದಲ್ಲಿ 88 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.