IND vs NZ: ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಆಡುವುದು ನ್ಯಾಯವೇ? ಇರ್ಫಾನ್ ಪಠಾಣ್ ಹೇಳಿದ್ದಿದು!
Irfan Pathan on KL Rahul's Batting Order: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಮೊದಲನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಆರನೇ ಕ್ರಮಾಂಕದಲ್ಲಿ ಆಡಿದ್ದರು. ಅವರು 21 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದ್ದರು. ಈ ಬಗ್ಗೆ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಎಲ್ ರಾಹುಲ್ ಆಟವನ್ನು ಮೆಚ್ಚಿಕೊಂಡ ಇರ್ಫಾನ್ ಪಠಾಣ್. -
ನವದೆಹಲಿ: ಭಾರತ ಕ್ರಿಕೆಟ್ ತಂಡದ ಕ್ಲಾಸ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಸ್ವರೂಪದಲ್ಲಿ ಓಪನರ್ ಆಗಿ ಬ್ಯಾಟ್ ಮಾಡಿದ್ದಾರೆ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಾರೆ. ಅಷ್ಟೇ ಅಲ್ಲದೆ ತಂಡದ ಅಗತ್ಯಕ್ಕೆ ತಕ್ಕಂತೆ ಯಾವುದೇ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಶುಭಮನ್ ಗಿಲ್ ಭಾರತ ಏಕದಿನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದ ಬಳಿಕ ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಮಧ್ಯಮ ಕ್ರಮಾಂಕಕ್ಕೆ ಇಳಿದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿಯೂ (IND vs NZ) ಕನ್ನಡಿಗ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಈ ಬಗ್ಗೆ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜನವರಿ 11 ರಂದು ವಡೋದರಾದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತ ತಂಡಕ್ಕೆ 301 ರನ್‌ಗಳ sವಾಲಿನ ಗುರಿಯನ್ನು ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತ ತಂಡದ ಪರ ಅದ್ಭುತ ಇನಿಂಗ್ಸ್ ಆಡಿದರು, ಆದರೆ, ಕೇವಲ 7 ರನ್ ಅಂತರದಲ್ಲಿ ಶತಕ ವಂಚಿತರಾದರು. ಆರಂಭಿಕ ಶುಭಮನ್ ಗಿಲ್ ಕೂಡ ಉತ್ತಮ ಆರಂಭವನ್ನು ನೀಡಿದರು, ಆದರೆ ಪಂದ್ಯದ ಕೊನೆಯ ಓವರ್‌ಗಳಲ್ಲಿ ಟೀಮ್ ಇಂಡಿಯಾಕ್ಕೆ ಅನುಭವಿ ಫಿನಿಷರ್ ಅಗತ್ಯವಿತ್ತು. ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಬಂದು ಸಂಯಮದಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅವರು 21 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಬಲ್ಲ 4 ತಂಡಗಳನ್ನು ಆರಿಸಿದ ವಸೀಮ್ ಅಕ್ರಮ್!
ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಆಡುವುದು ಏಕೆ?
ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಸಮರ್ಥಿಸಿಕೊಂಡರು, ಒಂದು ಪ್ರಮುಖ ತಾಂತ್ರಿಕ ಕಾರಣವನ್ನು ಉಲ್ಲೇಖಿಸಿದರು. "ರಾಹುಲ್ ಏಕೆ ಇಷ್ಟು ಕೆಳಮಟ್ಟದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ ಎಂದು ಜನರು ಹೆಚ್ಚಾಗಿ ಕೇಳುತ್ತಾರೆ. ಏಕದಿನ ಕ್ರಿಕೆಟ್‌ನಲ್ಲಿ ನಿಯಮಗಳು ಬದಲಾಗಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. 34ನೇ ಓವರ್ ನಂತರ, ಚೆಂಡು ಸ್ವಲ್ಪ ರಿವರ್ಸ್ ಸ್ವಿಂಗ್ ಅಥವಾ ಗಮನಾರ್ಹವಾಗಿ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಾಂತ್ರಿಕವಾಗಿ ಉತ್ತಮ ಬ್ಯಾಟ್ಸ್‌ಮನ್ ಮಾತ್ರ ವ್ಯತ್ಯಾಸವನ್ನುಂಟುಮಾಡಬಹುದು," ಎಂದು ಹೇಳಿದ್ದಾರೆ.
IND vs NZ: ಮೊದಲನೇ ಒಟಿಐನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡಿ ಕೈಲ್ ಜೇಮಿಸನ್ ಹೇಳಿದ್ದಿದು!
ಮೊದಲ ಏಕದಿನ ಪಂದ್ಯದಲ್ಲಿ ಇತರ ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಅಸ್ಥಿರವಾಗಿ ಕಾಣುತ್ತಿದ್ದರು, ಆದರೆ ರಾಹುಲ್ ಸಂಪೂರ್ಣ ನಿಯಂತ್ರಣದಲ್ಲಿದ್ದರು ಎಂದು ಇರ್ಫಾನ್ ಹೇಳಿದರು. ಅವರು ಸ್ಟ್ರೈಕ್ ರೊಟೇಟ್ ಮಾಡಿದರು ಮತ್ತು ಸರಿಯಾದ ಕ್ಷಣಕ್ಕಾಗಿ ಕಾಯುತ್ತಿದ್ದರು. ನಿರೀಕ್ಷೆಯಂತೆ, ಅವರು 49ನೇ ಓವರ್ ಅನ್ನು ಗುರಿಯಾಗಿಸಿಕೊಂಡು ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಪಂದ್ಯವನ್ನು ತಮ್ಮ ಶೈಲಿಯಲ್ಲಿ ಮುಗಿಸಿದರು.
ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಕಮ್‌ಬ್ಯಾಕ್
ಕೆಎಲ್ ರಾಹುಲ್ ಜೊತೆಗೆ, ಇರ್ಫಾನ್ ಪಠಾಣ್ ಕೂಡ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಅವರನ್ನು ಹೊಗಳಿದರು. ಗಾಯದಿಂದ ಹಿಂದಿರುಗಿದ ನಂತರ ಅಯ್ಯರ್ 4ನೇ ಸ್ಥಾನದಲ್ಲಿ ತಮ್ಮ ಮೌಲ್ಯವನ್ನು ಸಾಬೀತುಪಡಿಸಿದರು. ಪಠಾಣ್ ಪ್ರಕಾರ, ಸ್ಪಿನ್ ವಿರುದ್ಧ ಎದ್ದು ನಿಲ್ಲುವ ಮತ್ತು ದೊಡ್ಡ ಹೊಡೆತಗಳನ್ನು ಆಡುವ ಅಯ್ಯರ್ ಅವರ ಸಾಮರ್ಥ್ಯವು ಭಾರತಕ್ಕೆ ಪ್ರಮುಖ ಪ್ಲಸ್ ಆಗಿದೆ. ಇದರ ನಡವೆ ಕಳೆದ 10 ಇನಿಂಗ್ಸ್‌ಗಳಲ್ಲಿ (ಟೆಸ್ಟ್, ಟಿ20 ಮತ್ತು ದೇಶಿ ಕ್ರಿಕೆಟ್) ಹೋರಾಡಿದ ನಂತರ ಶುಭಮನ್ ಗಿಲ್ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಸ್ವಾಗತಾರ್ಹ ಪರಿಹಾರವಾಗಿದೆ.